ಪೃಥ್ವಿ ರಾಜ್ ಸುಕುಮಾರನ್ ಅಭಿನಯದ ದಿ ಗೋಟ್ ಲೈಫ್, ದಿ ಎಪಿಕ್ ಟೇಲ್ ಆಫ್ ದಿ ಗ್ರೇಟೆಸ್ಟ್ ಸರ್ವೈವಲ್ ಅಡ್ವೆಂಚರ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಸಿನಿಮಾದ ಮೇಲಿದ್ದ ನಿರೀಕ್ಷೆ ದುಪ್ಪಟ್ಟು ಆಗಿದೆ. ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ಈ ಸಿನಿಮಾ ಇದೇ ಮಾರ್ಚ್ 28ಕ್ಕೆ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಟ್ರೀಲರ್ ರಿಲೀಸ್ ಅದ ಕೆಲವೇ ನಿಮಿಷಕ್ಕೆ ಲಕ್ಷ ಲಕ್ಷ ವ್ಯೂಸ್ ಪಡ್ಕೊಂಡ್ ಟ್ರೆಂಡಿಂಗ್ ನಲ್ಲಿದೆ. ಇದು ರಾಷ್ಟ ಪ್ರಶಸ್ತಿ ವಿಜೇತ ಬ್ಲೆಸ್ಸಿ ನಿರ್ದೇಶನದ ಸಿನಿಮಾ.  ಟ್ರೀಲರ್ ನಲ್ಲಿ ಕಂಡು ಬರೋ ದೃಶ್ಯ ವೈಭವ ಆಹಾ ಓಹೋ ಅನ್ನುವಂತಿದೆ. ಹಲವು ಕುತೂಹಲವನ್ನ ಕೂಡ ಸೃಷ್ಟಿಸಿದೆ ಟ್ರೀಲರ್. 


COMMERCIAL BREAK
SCROLL TO CONTINUE READING

ಇದನ್ನು ಓದಿ : ಅರುಣಾಚಲ ಪ್ರದೇಶದಲ್ಲಿ ವಿಶ್ವದ ಅತಿ ಉದ್ದದ ದ್ವಿ-ಪಥ ಸುರಂಗಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ


ದಿ ಗೋಟ್ ಲೈಫ್ ಚಿತ್ರದಲ್ಲಿ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೆನ್ಯಾಮಿನ್ ಅವರ ಗೋಟ್ ಡೇಸ್ ಕಾದಂಬರಿ ಆಧರಿಸಿದ ಸಿನಿಮಾ ಇದಾಗಿದೆ. ಒಂದು ದಶಕದ ಪ್ರಯತ್ನದ ನಂತರ, ಮಲಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಅಭಿನಯದ ಈ ಸಿನಿಮಾ ನೈಜ  ಕಥೆ ಆಧರಿಸಿದ ಚಿತ್ರವಾಗಿದೆ. ಈ ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ಅಮಲಾ ಪೌಲ್, ಭಾರತೀಯ ನಟ ಕೆ.ಆರ್.ಗೋಕುಲ್ ಮತ್ತು ಪ್ರಸಿದ್ಧ ಅರಬ್ ನಟರಾದ ತಾಲಿಬ್ ಅಲ್ ಬಲೂಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗೋಟ್ ಲೈಫ್ ಅಕಾಡೆಮಿ ಪ್ರಶಸ್ತಿ ವಿಜೇತರಾದ ಎ.ಆರ್.ರೆಹಮಾನ್ ಮತ್ತು ರೆಸುಲ್ ಪೂಕುಟ್ಟಿ ಅವರ ಸಂಗೀತ ನಿರ್ದೇಶನ ಮತ್ತು ಧ್ವನಿ ವಿನ್ಯಾಸವಿದೆ.ಚಿತ್ರದ ಅದ್ಭುತ ದೃಶ್ಯಗಳನ್ನು ಸುನಿಲ್ ಕೆ.ಎಸ್ ತಮ್ಮ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾರೆ ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಮಲಯಾಳಂ ಚಿತ್ರೋದ್ಯಮದ ಅತಿದೊಡ್ಡ ಸಿನಿಮಾ ಎನಿಸಿದೆ.


ಇದನ್ನು ಓದಿ : ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಎಐ ಮೂಲಸೌಕರ್ಯ, ಸ್ಟಾರ್ಟ್‌ಅಪ್‌ಗಳಿಗೆ 10,372 ಕೋಟಿ ಹೂಡಿಕೆ


ಈ ಚಿತ್ರ ಮಲಯಾಳಂ ಸಾಹಿತ್ಯ ಪ್ರಪಂಚದ ಅತ್ಯಂತ ಜನಪ್ರಿಯ ಕಾದಂಬರಿ 'ಆಡು ಜೀವಿತಂ' ಆಧರಿಸಿದೆ, ಇದು ವಿದೇಶಿ ಸೇರಿದಂತೆ 12 ವಿವಿಧ ಭಾಷೆಗಳಲ್ಲಿ ಅನುವಾದಗೊಂಡಿದೆ. ಬರಹಗಾರ ಬೆನ್ಯಾಮಿನ್ ಬರೆದಿರುವ ಈ ಕಾದಂಬರಿ  90 ರ ದಶಕದಲ್ಲಿ ಅದೃಷ್ಟ ಹುಡುಕಿ ವಲಸೆ ಬಂದ ನಜೀಬ್ ಎಂಬ ಯುವಕನ ನೈಜ ಕಥೆಯನ್ನು ಹೊಂದಿದೆ.ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಬ್ಲೆಸ್ಸಿ, "ದಿ ಗೋಟ್ ಲೈಫ್ ಎಲ್ಲೆಡೆ ಸಲ್ಲುವ ಕಥೆ. ನಿರೂಪಣೆ ಸಲುವಾಗಿ ಸಾಜಷ್ಟು ಶ್ರಮ ವಹಿಸಿ ಕೆಲಸ ಮಾಡಿದ್ದೇನೆ. ಕಾದಂಬರಿಯನ್ನು ಸಿನಿಮಾ ಮಾಡುವಾಗ ಅನೇಕ ಸವಾಲು ಎದುರಾದವು. ಏನೇ ಸವಾಲು ಎದುರಾದರೂ ಎಲ್ಲವನ್ನು ಮೆಟ್ಟಿ ನಿಂತು ಸಿನಿಮಾ ಪ್ರಿಯರ ಮನಸ್ಸನ್ನ ಪಕ್ಕ ಗೆಲ್ಲುತ್ತೆ ಅನ್ನೋದು ಟ್ರೇಲರ್ ಮೂಲಕ ಗೊತ್ತಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.