Aadujeevitham Movie: ಸದ್ಯ ದೇಶದ ಸಿನಿ ರಸಿಕರ ಗಮನ ಸೆಳೆದ ಮಲಯಾಳಂ ಚಿತ್ರ ಆಡು ಜೀವಿತಂ. ʻಸಲಾರ್‌ʼ ಚಿತ್ರದ ಮೂಲಕ ಮಿಂಚಿದ ಮಾಲಿವುಡ್‌ ಸೂಪರ್‌ ಸ್ಟಾರ್‌ ಪೃಥ್ವಿರಾಜ್‌ ಸುಕುಮಾರನ್ ಅಭಿನಯದ ಆಡು ಜೀವಿತಂ ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಆಸ್ಕರ್‌ ವಿಜೇತ ಎ.ಆರ್.ರೆಹಮಾನ್ ಈ ಸಿಮಾಕ್ಕೆ ಸಂಗೀತ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಆಡು ಜೀವಿತಂ ಸಿನಿಮಾ ಮಲಯಾಳಂ ಸಾಹಿತ್ಯ ಪ್ರಪಂಚದಲ್ಲಿ ಅತ್ಯಂತ ಜನಪ್ರಿಯವಾದ, ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದಾದ ಅದೇ ಹೆಸರನ ಅಂದರೆ ‘ಆಡು ಜೀವಿತಂ’ ಕಾದಂಬರಿಯನ್ನು ಆಧರಿಸಿದೆ. ಹೆಸರಾಂತ ಬರಹಗಾರ ಬೆನ್ಯಾಮಿನ್ ʻಆಡು ಜೀವಿತಂʼ ಕಾದಂಬರಿಯನ್ನು ಬರೆದವರು. ಈ ಕಥೆ 90ರ ದಶಕದ ಆರಂಭದಲ್ಲಿ ಕೇರಳದ ಹಚ್ಚ ಹಸಿರಿನ ತೀರದಿಂದ ಅದೃಷ್ಟವನ್ನು ಹುಡುಕುತ್ತಾ ವಿದೇಶಕ್ಕೆ ವಲಸೆ ಹೋದ ಯುವಕ ನಜೀಬ್‌ನ ಜೀವನದ ಕುರಿತಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸಿ ಆಡು ಜೀವಿತಂ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಆಡು ಜೀವಿತಂ ಸಿನಿಮಾ ಈಗಾಗಲೇ ಬಿಡುಗಡೆಯಾದ ಪೋಸ್ಟರ್‌, ಟೀಸರ್‌ ಸಿನಿ ಪ್ರಿಯರ ಕುತೂಹಲ ಹೆಚ್ಚಿಸಿದೆ. 


ಇದನ್ನೂ ಓದಿ: Sudharani: ಹೋಳಿಯಂದು ಕಲರ್‌ ಕಲರ್‌ ಅಂತ ಸಖತ್‌ ಸ್ಟೆಪ್‌ ಹಾಕಿದ ಶ್ರೀರಸ್ತು ಶುಭಮಸ್ತು ತುಳಸಿ! 


ಆಡು ಜೀವಿತಂ ಚಿತ್ರದಲ್ಲಿ ಹಾಲಿವುಡ್ ನಟ ಜಿಮ್ಮಿ ಜೀನ್-ಲೂಯಿಸ್, ನಟಿ ಅಮಲಾ ಪೌಲ್, ನಟ ಕೆ.ಆರ್.ಗೋಕುಲ್ ಮತ್ತು ಹೆಸರಾಂತ ಅರಬ್ ನಟರಾದ ತಾಲಿಬ್ ಅಲ್ ಬಲುಶಿ ಮತ್ತು ರಿಕಾಬಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 


ಆಡು ಜೀವಿತಂ ಸಿನಿಮಾ ಮಲಯಾಳಂ ಜತೆಗೆ ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ನೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಇದೇ ತಿಂಗಳ 28 ರಂದು ದೇಶಾದ್ಯಂತ  ಆಡು ಜೀವಿತಂ ಸಿನಿಮಾ ಬಿಡುಗಡೆಯಾಗಿತ್ತಿದೆ. ಕರ್ನಾಟಕದಲ್ಲಿ ಈ ಚಿತ್ರ ಹೊಂಬಾಳೆ ಫಿಲಂಸ್ ಬ್ಯಾನರ್‌ ಅಡಿ ರಿಲೀಸ್‌ ಆಗಲಿದೆ. 


ಆಡು ಜೀವಿತಂ ಚಿತ್ರದ ಪ್ರಚಾಕ್ಕಾಗಿ ನಟ ಪೃಥ್ವಿ ಸುಕುಮಾರನ್ ಹಾಗೂ ನಿರ್ದೇಶಕ ಬ್ಲೆಸ್ಲಿ, ನಟ ಜಿಮ್ಮಿ ಜೀನ್ ಲೂಯಿಸ್‌ ಭಾನುಬಾರ ಸಂಜೆ ಬೆಂಗಳೂರಿಗೆ ಆಗಮಿಸಿದದ್ದರು. 2018 ರಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಿದೆ. ನಂತರಕೋವಿಡ್ ಸೇರಿ ಅನೇಕ ಕಾರಣದಿಂದ ಚಿತ್ರ ನಿರ್ಮಾಣಕ್ಕೆ ಸಮಯ ತೆಗೆದುಕೊಂಡಿದೆ. ಗ್ರೇಟೆಸ್ಟ್ ಸರ್ವೈವಲ್  ಅಡ್ವೆಂಚರ್‌
ಸಿನಿಮಾ ಇದಾಗಿದೆ. ಒಂದು ಇನ್ ಸ್ಪಿರೇಷನ್ ಕಥೆಯನ್ನು ಈ ಚಿತ್ರ ಒಳಗೊಂಡಿದೆ. 


ನಟ ಪೃಥ್ವಿ ರಾಜ್ ಸುಕುಮಾರನ್ ಮಾತನಾಡಿ, ನಜೀಬ್ ಮೊಹಮ್ಮದ್ ಅವರ ನೈಜ ಕಥೆಯನ್ನು ಈ ಚಿತ್ರದ ಮೂಲಕ ತೆರೆಯ ಮೇಲೆ ತಂದಿದ್ದೇವೆ. ಈ ಮೊದಲು ಬೆನ್ನಿಮನ್ ಅವರು ನಜೀಮ್ ಕಥೆಯನ್ನು ಪುಸ್ತಕ ರೂಪದಲ್ಲಿ ತಂದರು. ಆ ಪುಸ್ತಕ ಮಾರಾಟ ದಾಖಲೆಯನ್ನೆ ಬರೆಯಿತು. ನಂತರ ಅದನ್ನೇ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ ಎಂದು ಹೇಳಿದರು.


ಇದನ್ನೂ ಓದಿ: ‘ಶ್ರೀರಸ್ತು ಶುಭಮಸ್ತು’ ನಿಧಿ ಖ್ಯಾತಿಯ ಅನನ್ಯ ಈ ಖ್ಯಾತ ನಟಿಯ ಪುತ್ರಿ.. ಇವರ ತಂದೆ ಸ್ಟಾರ್‌ ನಿರ್ದೇಶಕ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.