ಕನ್ನಡದಲ್ಲಿ ರಿಲೀಸ್ ಆಗಲಿದೆ ಕಣ್ಸನ್ನೆ ಕುವರಿಯ `ಒರು ಅಡಾರ್ ಲವ್`!
ಕನ್ನಡದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ `ಕಿರಿಕ್ ಲವ್ ಸ್ಟೋರಿ` ಎಂದು ಹೆಸರಿಡಲಾಗಿದ್ದು, ಪ್ರೇಮಿಗಳ ದಿನದಂದೇ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.
ನವದೆಹಲಿ: ಕಳೆದ ವರ್ಷದ ಆರಂಭದಲ್ಲಿ ತನ್ನ ಕಣ್ಸನ್ನೆಯಿಂದಲೇ ಇಡೀ ದೇಶದ ಜನರ ಗಮನ ಸೆಳೆದಿದ್ದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ 'ಒರು ಅಡಾರ್ ಲವ್' ಸಿನಿಮಾ, ಇದೀಗ ಕನ್ನಡದಲ್ಲಿ ರಿಲೀಸ್ ಆಗಲಿದೆ!
ಈ ಚಿತ್ರದ ಕಣ್ಸನ್ನೆ ದೃಶ್ಯದಿಂದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದರು. ಅಷ್ಟೇ ಅಲ್ಲದೆ ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ಇದೀಗ ಕನ್ನಡದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ 'ಕಿರಿಕ್ ಲವ್ ಸ್ಟೋರಿ' ಎಂದು ಹೆಸರಿಡಲಾಗಿದ್ದು, ಪ್ರೇಮಿಗಳ ದಿನದಂದೇ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.
ಒಮರ್ ಲುಲು ನಿರ್ದೇಶನದ ಈ ಚಿತ್ರದ ಕನ್ನಡ ಶೀರ್ಷಿಕೆಯನ್ನು ಈಗಾಗಲೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಲಾಗಿದೆ. ಜನವರಿ ಅಂತ್ಯಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಮುಂದೆ ಬರಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ.