ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಕೇವಲ ತನ್ನ ಹುಬ್ಬು ಕುಣಿಸುವಿಕೆಯಿಂದಲೇ ಖ್ಯಾತಿ ಪಡೆದಿರುವ ಪ್ರಿಯಾ ವಾರಿಯರ್ ಈಗ ಎಲ್ಲರ ಹಾಟ್ ಫೆವರೆಟ್,ಈಗ ಈಕೆಯ ಕುರಿತಾಗಿ ಬರುವ ಪ್ರತಿ ಸುದ್ದಿಗಳು ಸಹಿತ ಓದುಗರನ್ನು ರೋಚಕಗೊಳಿಸುತ್ತವೆ.



COMMERCIAL BREAK
SCROLL TO CONTINUE READING

ಸಧ್ಯದ ಸಮಾಚಾರ ಏನಪ್ಪಾ ಅಂದ್ರೆ ತನ್ನ ಇನ್ಸ್ತಾಗ್ರಾಂ ಖಾತೆಯಲ್ಲಿ ಹೋಳಿ ಹಬ್ಬವನ್ನು ಆಚರಿಸುವ ವಿಡಿಯೋವೊಂದನ್ನು ಹಂಚಿಕೊಂಡು "ಈ ಮೊದಲು ಹೋಳಿ ಹಬ್ಬವನ್ನು ಈ ರೀತಿ ಆಚರಿಸಿಕೊಂಡಿರಲಿಲ್ಲ ಎಂದು ಬರೆದುಕೊಂಡಿದ್ದಾಳೆ. ಈ ವಿಡಿಯೋದಲ್ಲಿ ಒರು ಅದಾರ್ ಲವ್ ಚಿತ್ರದಲ್ಲಿ  ತನ್ನ ಸಹ ನಟನಾಗಿರುವ ಅಬ್ದುಲ್ ರಹೂಫ್  ಕೂಡ ಇರುವುದು ಮತ್ತೊಂದು ವಿಶೇಷವಾಗಿದೆ.