Priyamani Gifted Robo Elephant To Temple: ಸೌತ್‌ ಸಿನಿಮಾ ಇಂಡಸ್ಟ್ರೀಯ ನಟಿ ಪ್ರಿಯಾಮಣಿ ದೇವಸ್ದಾನವೊಂದಕ್ಕೆ ಮೆಕ್ಯಾನಿಕಲ್ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಭಾರತದಲ್ಲಿ ಕೇರಳ ಸೇರಿದಂತೆ ಅನೇಕ ರಾಜ್ಯದ ದೇವಸ್ಥಾನಗಳಲ್ಲಿ ನಿಜವಾದ ಆನೆಗಳನ್ನು ದೇವರ ಸೇವೆಗೆಂದು ಬಳಸಲಾಗುತ್ತಿದ್ದು, ಆದರೆ ಇದೀಗ ಕೇರಳ ಮಹಾದೇವನ ದೇವಾಲಯ ಆಡಳಿತ ಮಂಡಳಿ ಜೀವಂತ ಆನೆಗಳನ್ನು ಬಳಸೋದು ಬೇಡ, ಗುತ್ತಿಗೆ ಪಡೆಯೋದು ಬೇಡವೆಂದು ತಿರ್ಮಾನ ಮಾಡಿದೆ.


COMMERCIAL BREAK
SCROLL TO CONTINUE READING

ಕೇರಳ ಮಹಾದೇವನ ದೇಗುಲದ ನಿರ್ಧಾರವನ್ನು ಮೆಚ್ಚಿ ಕೊಂಡಾಡಿದ ಪೇಟಾ ಸಂಘಟನೆ ಹಾಗೂ ಬಹುಭಾಷಾ ತಾರೆ ಪ್ರಿಯಾಮಣಿ ರೋಬೋ ಆನೆಯನ್ನು ಗಿಫ್ಟ್‌ ಆಗಿ ನೀಡಿದ್ದಾರೆ. ಎರ್ನಾಕುಲಂ ಕಾಲಡಿ ತ್ರಿಕ್ಕದಲ್ಲಿರುವ ಮಹಾದೇವ ದೇವಸ್ಥಾನಕ್ಕೆ ಪ್ರಿಯಾಮಣಿ ಮೆಕ್ಯಾನಿಕಲ್ ಎಲಿಫೆಂಟ್ ಅನ್ನು ಉಡುಗೊರೆಯಾಗಿ ಕೊಟ್ಟಿದ್ದು, ಇದರ ಗಾತ್ರ ಹಾಗೂ ಎತ್ತರ ನಿಜವಾದ ಆನೆಯನ್ನು ಮೀರಿಸುವಂತಿದೆ. ಇದನ್ನು ನೋಡಿದ ಗ್ರಾಮಸ್ಥರು ಬೆರಗಾಗಿದ್ದಾರೆ.


ಇದನ್ನೂ ಓದಿ: Martain: ಮಾರ್ಟಿನ್‌ ಡಬ್ಬಿಂಗ್‌ ಕಂಪ್ಲೀಟ್: ಪ್ಯಾನ್‌ ಇಂಡಿಯಾ ಕೇಳಲಿದ್ಯಾ ಧ್ರುವ ಧ್ವನಿ??


ದಕ್ಷಿಣ ಚಿತ್ರರಂಗದ ನಟಿ ಪ್ರಿಯಾಮಣಿ ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದ ಮೆಕ್ಯಾನಿಕಲ್ ಆನೆಯು 3 ಮೀಟರ್ ಎತ್ತರ ಮತ್ತು 800 ಕೆಜಿ ತೂಕವಿದೆ. ಈ ರೋಬೋ ಆನೆಯನ್ನು  ಇತರ ದೇವಾಲಯಗಳ ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಮತ್ತು ದೇಶದಾದ್ಯಂತ ತೆಗೆದುಕೊಂಡು ಹೋಗಲು ಅನುಮತಿ ಕೂಡ ನೀಡಲಿದ್ದಾರೆಂದು ದೇವಾಲಯದ ಅಧಿಕಾರಿಗಳ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.


ನಟಿ ಪ್ರಿಯಾಮಣಿಯ ಕೆಲಸವನ್ನು ಅನೇಕರು ಕೊಂಡಾಡಿದ್ದು, ಇನ್ನೂ ಈ ನಟಿ "ಮೆಕ್ಯಾನಿಕಲ್ ಎಲಿಫೆಂಟ್ ಅನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿರುವುದು ಸಂತಸ ತಂದಿದೆ. ಭಕ್ತರು ಸುರಕ್ಷಿತವಾಗಿ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳಬಹುದು" ಎಂದು ತಿಳಿಸಿದ್ದಾರೆ. ಮತ್ತೆ ತಿರಿಕೈಲ್ ಮಹಾದೇವ ದೇವಸ್ಥಾನದ ಮಾಲೀಕ ತೇಕಿನ್ಯೇದತ್ ವಲ್ಲಭನ್ ನಂಬೂತಿರಿ, "ಮನುಷ್ಯರಂತೆ ತಮ್ಮ ಕುಟುಂಬದೊಂದಿಗೆ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಬದುಕಲು ಬಯಸುವ ದೇವರು ಸೃಷ್ಟಿಸಿದ ಎಲ್ಲಾ ಪ್ರಾಣಿಗಳ ಗೌರವಾರ್ಥವಾಗಿ ಮೆಕ್ಯಾನಿಕಲ್ ಆನೆಯನ್ನು ದೇವರ ಕಾರ್ಯಕ್ಕೆ ಬಳಸಲು ತುಂಬಾ ಸಂತೋಷವಾಗಿದೆ" ಎಂದು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ