ಲಾಸ್ ಏಂಜಲೀಸ್ [ಯುಎಸ್]: ಸ್ಟಾರ್ ದಂಪತಿಗಳಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ (Priyanka Chopra And Nick Jonas) ಥ್ಯಾಂಕ್ಸ್‌ಗಿವಿಂಗ್ 2021 (Thanksgiving 2021) ಅನ್ನು ಅತ್ಯಂತ ವಿಶೇಷ ರೀತಿಯಲ್ಲಿ ಆಚರಿಸಿದರು.


COMMERCIAL BREAK
SCROLL TO CONTINUE READING

Instagramನಲ್ಲಿ ಪ್ರಿಯಾಂಕಾ (Priyanka Chopra)  ತಮ್ಮ ಮತ್ತು ನಿಕ್ ಒಬ್ಬರನ್ನೊಬ್ಬರು ಪ್ರೀತಿಯಿಂದ ನೋಡುತ್ತಿರುವ ಮೋಹಕ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.  " I love you ನಿಕ್ ಜೋನಾಸ್.  ಎಲ್ಲರಿಗೂ ಥ್ಯಾಂಕ್ಸ್ಗಿವಿಂಗ್ ಶುಭಾಶಯಗಳು" ಅವರು ಬರೆದುಕೊಂಡಿದ್ದಾರೆ.


ಜೈಪುರಕ್ಕೆ ತೆರಳುವ ಮುನ್ನವೇ ನಡೆಯಲಿದೆ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ..! ಲೀಕ್ ಆಯಿತು ಸೀಕ್ರೆಟ್ ಪ್ಲಾನ್


ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ಇನ್ ಸ್ಟಾಗ್ರಾಂ ಹಾಗೂ ಟ್ವಿಟ್ಟರ್ ನಲ್ಲಿ ತಮ್ಮ ಹೆಸರಿನಿಂದ ಪತಿ ಜೋನಾಸ್ ಹೆಸರನ್ನು ಕೈಬಿಟ್ಟಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿದ್ದರು. ಈ ಥ್ಯಾಂಕ್ಸ್‌ಗಿವಿಂಗ್ (Thanksgiving)  ಪೋಸ್ಟ್‌ನೊಂದಿಗೆ, ಪ್ರಿಯಾಂಕಾ, ನಿಕ್‌ನಿಂದ ಬೇರ್ಪಡುವ ವದಂತಿಗಳಿಗೆ ತೆರೆ ಎಳೆದಂತಾಗಿದೆ. 


ಪ್ರಿಯಾಂಕಾ ಮತ್ತು ನಿಕ್ 2018 ರ ಡಿಸೆಂಬರ್ 1 ಮತ್ತು 2 ರಂದು ಜೋಧ್‌ಪುರದ ಉಮೈದ್ ಭವನ್ ಅರಮನೆಯಲ್ಲಿ ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯದಂತೆ ವಿವಾಹವಾದರು. ನಂತರ, ದಂಪತಿಗಳು ದೆಹಲಿ ಮತ್ತು ಮುಂಬೈನಲ್ಲಿ ಎರಡು ಆರತಕ್ಷತೆಗಳನ್ನು ಸಹ ಆಯೋಜಿಸಿದ್ದರು.


ಇದನ್ನೂ ಓದಿ- Katrina Vicky Wedding: ವಿಕ್ಕಿ-ಕತ್ರೀನಾ ಮದುವೆ ಆಗುವುದಿಲ್ಲವೇ?


ಈ ತಿಂಗಳ ಆರಂಭದಲ್ಲಿ, ದಂಪತಿಗಳು ದೀಪಾವಳಿಯನ್ನು ಆಚರಿಸಿದರು ಮತ್ತು ಹಬ್ಬದ ಆಚರಣೆಯ ಚಿತ್ರಗಳನ್ನು Instagram ನಲ್ಲಿ ಹಂಚಿಕೊಂಡಿದ್ದರು.  ಡಿಸೆಂಬರ್ 2021 ರಲ್ಲಿ ನಿಕ್ ಮತ್ತು ಪಿಗ್ಗಿ  ತಮ್ಮ ಮೂರನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.