ನವದೆಹಲಿ:  ಬಾಲಿವುಡ್ ಮತ್ತು ಹಾಲಿವುಡ್ ಜೋಡಿಗಳಾದ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರು ಈಗ ಮದುವೆಗೆ ಅಂತಿಮ ಸಿದ್ದತೆ ನಡೆಸಿದ್ದಾರೆ. ಡಿಎನ್ಎ ವರದಿಯ ಪ್ರಕಾರ, ಸಂಗೀತ ಸಮಾರಂಭವು ಕಳೆದ ರಾತ್ರಿ ನಡೆಯಿತು.ಈಗ ಕ್ರಿಸ್ಟಿಯನ್ ಸಂಪ್ರದಾಯದ ಪ್ರಕಾರ ಮದುವೆಯು ನಡೆಯಲಿದೆ ಎಂದು ವರದಿಯಾಗಿದೆ. ಕೇವಲ ಇಷ್ಟೇ ಅಲ್ಲ ವರ ಮತ್ತು ವಧುವಿನ ಕುಟುಂಬವು ಕ್ರಿಕೆಟ್ ಪಂದ್ಯವನ್ನು ಆಡಲಿದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಡಿಎನ್ಎ ಪ್ರಕಾರ, ವಧುವಿನ ಮತ್ತು ವರನ ಕುಟುಂಬವು ಕ್ರಿಕೆಟ್ ಪಂದ್ಯವನ್ನು ಆಡುತ್ತದೆ ಮತ್ತು ತಂಡಗಳನ್ನು 'ಪಿ' ಮತ್ತು 'ಎನ್' ಎಂದು ಹೆಸರಿಸಲಾಗುತ್ತದೆ. ಪ್ರಿಯಾಂಕಾ ಅವರ ಹಳದಿ ಸಮಾರಂಭವು ಇಂದು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರದ ಮದುವೆಯಾದ ನಂತರ ನಡೆಯಲಿದೆ. ಸುಮಾರು 250ಕ್ಕೂ ಅಧಿಕ ಅತಿಥಿಗಳು ಜೋಧಪುರ್ ನಲ್ಲಿರುವ ಉಮಾಯಿದ್ ಭವನದಲ್ಲಿ ಜರುಗುವ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.


ಡಿಸೆಂಬರ್ 2 ರಂದು ಅಮೃತಶಿಲೆ ಮಂಟಪದಲ್ಲಿ ಹಿಂದು ಸಂಪ್ರದಾಯದ ಪ್ರಕಾರ ನಡೆಯುತ್ತದೆ ಎಂದು ತಿಳಿದುಬಂದಿದೆ.ಮದುವೆ ಕಾರ್ಯಕ್ರಮದಲ್ಲಿ ಫೋಟೋ ಮತ್ತು ವಿಡಿಯೋಗಳನ್ನು ತಗೆಯುವುದನ್ನು ನಿಷೇಧಿಸಲಾಗಿದೆ. ಆ ಮೂಲಕ  ದೀಪವೀರ್ ಮದುವೆ ಫೋಟೋ ಗಳಿಗೆ ಕಾಯ್ದದಂತೆ ಇನ್ನೂ ಕಾಯಬೇಕಾಗಿ ಬರುತ್ತದೆ ಎನ್ನುವ ಹಾಗೆ ಕಾಣುತ್ತದೆ.