ಖಾಕಿ ಚೆಡ್ಡಿ ಧರಿಸಿದ ಪ್ರಿಯಾಂಕಾ ಚೋಪ್ರಾ: ಆರೆಸ್ಸೆಸ್ ಅಂಬಾಸಿಡರ್ ಎಂದು ಕಾಲೆಳೆದ ಟ್ರೋಲಿಗರು...!
ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಟ್ರೋಲ್ ಗೆ ಒಳಗಾಗದೆ ಇರುವ ವಸ್ತು ಅಥವಾ ಸಂಗತಿಯೇ ಇಲ್ಲವೆನ್ನಬಹುದು. ಅಷ್ಟರ ಮಟ್ಟಿಗೆ ಈಗ ವೈರಲ್ ಆದ ಪ್ರತಿಯೊಂದು ಪೋಸ್ಟ್ ಗಳು ಈಗ ಟ್ರೋಲಿಗೆ ಆಹಾರವಾಗುತ್ತವೆ.
ನವದೆಹಲಿ: ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಟ್ರೋಲ್ ಗೆ ಒಳಗಾಗದೆ ಇರುವ ವಸ್ತು ಅಥವಾ ಸಂಗತಿಯೇ ಇಲ್ಲವೆನ್ನಬಹುದು. ಅಷ್ಟರ ಮಟ್ಟಿಗೆ ಈಗ ವೈರಲ್ ಆದ ಪ್ರತಿಯೊಂದು ಪೋಸ್ಟ್ ಗಳು ಈಗ ಟ್ರೋಲಿಗೆ ಆಹಾರವಾಗುತ್ತವೆ.
ಅದರಲ್ಲೂ ಸಿನಿಮಾ ನಟ ನಟಿಯಾದರಂತೂ ಮುಗಿತು ಅದು ಇನ್ನು ದುಪ್ಪಟ್ಟು ಎಂದೇ ಹೇಳಬಹುದು. ಈಗ ಅಂತದ್ದೇ ಪ್ರಿಯಾಂಕಾ ಚೋಪ್ರಾ ಅವರ ಫೋಟೋವೊಂದು ಈಗ ಟ್ರೋಲಿಗೆ ಇಡಾಗಿದೆ. ಅಷ್ಟಕ್ಕೂ ನೀವು ಈ ಫೋಟೋದಲ್ಲಿ ಅಂತದ್ದೇನಿದೆ ಅಂತೀರಾ? ಈ ನಟಿ ನ್ಯೂಯಾರ್ಕ್ ನಲ್ಲಿರುವ ತನ್ನ ಅಪಾರ್ಟ್ಮೆಂಟ್ ನಲ್ಲಿ ಖಾಕಿ ಚೆಡ್ಡಿ ಧರಿಸಿ ಬರುತ್ತಿವ ಸಂದರ್ಭದಲ್ಲಿನ ಫೋಟೋವೊಂದು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈಗ ಈ ಫೋಟೋವೊಂದನ್ನು ಕೆಲವರು ಆರೆಸೆಸ್ಸ್ ನ ಚೆಡ್ಡಿ ಎಂದು ಕಾಲೆಳೆದಿದ್ದಾರೆ. ಟ್ವಿಟ್ಟರ್ ನಲ್ಲಿ ಜೈಶರ್ಮಾ ಎನ್ನುವವರು ಪ್ರಿಯಾಂಕಾ ಗಾಂಧಿ ಆರೆಸೆಸ್ಸ್ ಮೀಟಿಂಗ್ ನಿಂದ ಹೊರ ಬರುತ್ತಿರುವ ಚಿತ್ರ ಎಂದು ಬರೆದುಕೊಂಡಿದ್ದಾರೆ. ಸಚಿನ್ ಸಂಗವಿ ಪ್ರಿಯಾಂಕಾ ಚೋಪ್ರಾ ಅಂತಿಮವಾಗಿ ಆರೆಸೆಸ್ಸ್ ಗೆ ಸೇರಿದಿರಾ ? ಎಂದು ಪ್ರಶ್ನಿಸಿದ್ದಾರೆ. ರಿಶಬ್ ಪಾಂಡೆ ಎನ್ನುವವರು ಪ್ರಿಯಾಂಕಾ ಚೋಪ್ರಾ ಆರೆಸೆಸ್ಸ್ ನ ಅಂತರಾಷ್ಟ್ರೀಯ ಬ್ರ್ಯಾಂಡ್ ಅಂಬಾಸಿಡರ್ ಎಂದು ಟ್ರೋಲ್ ಮಾಡಿದ್ದಾರೆ.
2017 ರಲ್ಲಿ ಪ್ರಿಯಾಂಕಾ ಚೋಪ್ರಾ ಬರ್ಲಿನ್ ನಲ್ಲಿ ಪ್ರಧಾನಿ ಮೋದಿಯವರನ್ನು ಶಾರ್ಟ್ ಡ್ರೆಸ್ ಧರಿಸಿ ಭೇಟಿ ಮಾಡಿದ್ದಕ್ಕೆ ಪ್ರಧಾನಿ ಎದುರು ಕುಳಿತಿರುವ ಅರಿವಾದರೂ ಇರಲಿ ಎಂದು ಕೆಲವರು ಟೀಕೆ ಮಾಡಿದ್ದರು.