ನವದೆಹಲಿ: ನಟಿ ಪ್ರಿಯಾಂಕಾ ಚೋಪ್ರಾ(Priyanka Chopra)ಮತ್ತು ಅಮೆರಿಕದ ಗಾಯಕ ನಿಕ್ ಜೋನಸ್(Nick Jonas)ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಗುಲ್ಲು ಎದ್ದಿದೆ. ಪ್ರಿಯಾಂಕಾ ಮತ್ತು ಪತಿ ನಿಕ್ ಮಧ್ಯೆ ಎಲ್ಲವೂ ಸರಿಯಿಲ್ಲ. ಇವರಿಬ್ಬರ ನಡುವೆ ಮನಸ್ತಾಪ ಮೂಡಿದ್ದು, ದಂಪತಿ ಡಿವೋರ್ಸ್ ತೆಗೆದುಕೊಳ್ಳುತ್ತಾರೆಂಬ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಇದಕ್ಕೆಲ್ಲಾ ಕಾರಣ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಿಯಾಂಕಾ ತಮ್ಮ ಹೆಸರಿನಲ್ಲಿ ಮಾಡಿರುವ ಬದಲಾವಣೆ.    


COMMERCIAL BREAK
SCROLL TO CONTINUE READING

ಹೌದು, ಬಾಲಿವುಡ್ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಹಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಅವರ ನಟನೆಯ ‘ಮ್ಯಾಟ್ರಿಕ್ಸ್’ ಸಿನಿಮಾ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಈ ಖುಷಿಯ ಸಂಗತಿ ಮಧ್ಯೆ ನಟಿ ದಾಂಪತ್ಯದ ಬಗ್ಗೆ ದೊಡ್ಡ ಗಾಳಿಸುದ್ದಿಯೊಂದು ಕಾಡ್ಗಿಚ್ಚಿನಂತೆ ಹಬ್ಬಿದೆ. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಪ್ರಿಯಾಂಕಾ ಮತ್ತು ನಿಕ್ ದಾಂಪತ್ಯದಲ್ಲಿ ಕಲಹ ಶುರುವಾಗಿದ್ದು, ವಿಚ್ಛೇದನ(Priyanka Chopra Divorce) ತೆಗೆದುಕೊಳ್ಳುತ್ತಾರೆಂಬ ಊಹಾಪೋಹ ಹರಡಿದೆ. ಇದಕ್ಕೆ ಕಾರಣ ಪ್ರಿಯಾಂಕರ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಆಗಿರುವ ಹೆಸರುಗಳ ಬದಲಾವಣೆ.


ಇದನ್ನೂ ಓದಿ: Kamal Haasan Covid positive : ನಟ ಕಮಲ್ ಹಾಸನ್ ಗೆ ಕೋವಿಡ್ ಪಾಸಿಟಿವ್! ಚೆನ್ನೈ ಆಸ್ಪತ್ರೆಗೆ ದಾಖಲು


ಪ್ರಿಯಾಂಕಾರ ಅಧಿಕೃತ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ ಪ್ರೋಫೈಲ್‌ಗಳಲ್ಲಿ ಇಷ್ಟು ದಿನ ‘ಪ್ರಿಯಾಂಕಾ ಚೋಪ್ರಾ ಜೋನಸ್’ ಎಂಬ ಹೆಸರಿತ್ತು. ಆದರೆ ನಟಿ ತಮ್ಮ ಚೋಪ್ರಾ ಜೋನಸ್ ಹೆಸರಿಗೆ ಕತ್ತರಿ ಪ್ರಯೋಗ ಮಾಡಿದ್ದು, ಕೇವಲ ಪ್ರಿಯಾಂಕಾ ಹೆಸರನಷ್ಟೇ ಉಳಿಸಿಕೊಂಡಿದ್ದಾರೆ. ಇದ್ದಕ್ಕಿದ್ದಂತೆಯೇ ಪ್ರಿಯಾಂಕಾ ಏಕೆ ತಮ್ಮ ಸೋಷಿಯಲ್ ಮೀಡಿಯಾ(Social Media) ಖಾತೆಗಳ ಹೆಸರು ಬದಲಾಯಿಸಿದರು? ನಿಕ್ ಜೋನಸ್ ಹೆಸರು ಏಕೆ ತೆಗೆದುಹಾಕಿದರು? ಅನ್ನೋ ಪ್ರಶ್ನೆಗಳು ಮೂಡಿದವು.    


ಪ್ರಿಯಾಂಕಾ ತಾಯಿ ಮಧು ಚೋಪ್ರಾ ಸ್ಪಷ್ಟನೆ


ಪ್ರಿಯಾಂಕಾ ತಮ್ಮ ಹೆಸರು ಬದಲಾವಣೆ ಮಾಡಿದ ಬೆನ್ನಲ್ಲಿಯೇ ಅವರ ದಾಂಪತ್ಯದಲ್ಲಿ ಬಿರುಕು(Divorce Rumours) ಮೂಡಿದೆ ಎಂಬ ವದಂತಿ ದಟ್ಟವಾಗಿತ್ತು. ಈ ಎಲ್ಲಾ ಗಾಳಿಸುದ್ದಿಗಳ ಕುರಿತು ಸ್ವತಃ ಪ್ರಿಯಾಂಕಾರ ತಾಯಿ ಮಧು ಚೋಪ್ರಾ(Madhu Chopra) ಸ್ಪಷ್ಟನೆ ನೀಡಿದ್ದಾರೆ. ‘ಈ ವದಂತಿಗಳೆಲ್ಲವೂ ಶುದ್ಧ ಸುಳ್ಳು. ಸೋಷಿಯಲ್ ಮೀಡಿಯಾದಲ್ಲಿ ಊಹಾಪೋಹಗಳು ಮತ್ತು ಸುಳ್ಳುಸುದ್ದಿ ಹಬ್ಬಿಸುವುದನ್ನು ನಿಲ್ಲಿಸಬೇಕು. ಈ ರೀತಿಯ ಗಾಳಿಸುದ್ದಿಗಳನ್ನು ಯಾರೂ ನಂಬಬಾರದು’ ಎಂದು ಹೇಳಿದ್ದಾರೆ.


ಇದನ್ನೂ ಓದಿ: Instagram ಪ್ರೊಫೈಲ್‌ನಿಂದ ಪತಿ ಹೆಸರು ತೆಗೆದ ಪ್ರಿಯಾಂಕಾ ಚೋಪ್ರಾ!


ಪ್ರಿಯಾಂಕಾ ಗೆಳತಿ ಕೂಡ ಸ್ಪಷ್ಟನೆ ನೀಡಿದ್ದಾರೆ


ನಟಿ ಪ್ರಿಯಾಂಕಾ ಚೋಪ್ರಾ(Priyanka Chopra)ರ ಗೆಳತಿ ಕೂಡ ಹಬ್ಬಿರುವ ಗಾಳಿಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ‘ಈ ಆಧಾರರಹಿತ ವದಂತಿಗಳನ್ನು ನಂಬಬೇಡಿ. ಸಾಮಾಜಿಕ ಮಾಧ್ಯಮದ ಅನುಯಾಯಿಗಳು ಅತಿಯಾಗಿ ಯೋಚಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ. ಈ ರೀತಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ತೊಂದರೆ ನೀಡಬಾರದು. ಪ್ರಿಯಾಂಕಾ-ನಿಕ್ ಇಬ್ಬರ ದಾಂಪತ್ಯವೂ ಚೆನ್ನಾಗಿಯೇ ಇದೆ’ ಎಂದು ಹೇಳಿದ್ದಾರೆ. ದೀರ್ಘಕಾಲದವರೆಗೆ ಡೇಟಿಂಗ್ ಮಾಡುತ್ತಿದ್ದ ಪ್ರಿಯಾಂಕಾ ಮತ್ತು ನಿಕ್ ಜೋಡಿ 2018ರ ಡಿಸೆಂಬರ್ 1ರಂದು ರಾಜಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.