ಮುಂಬೈ: ಇತ್ತೀಚೆಗೆ 37 ನೇ ವರ್ಷಕ್ಕೆ ಕಾಲಿಟ್ಟ ಪ್ರಿಯಾಂಕಾ ಚೋಪ್ರಾ, ಮಿಯಾಮಿಯ ವಿಹಾರ ನೌಕೆಯಲ್ಲಿ ಸಿಗರೇಟ್ ಸೇದಿದ್ದಕ್ಕಾಗಿ ಈಗ ಟ್ರೋಲ್ ಆಗುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಿಗರೇಟ್ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಆಕೆಯ ತಾಯಿ ಮಧು ಚೋಪ್ರಾ ಮತ್ತು ಪತಿ ನಿಕ್ ಜೊನಸ್ ಅವರೊಂದಿಗೆ ಸಿಗಾರ್ ಧೂಮಪಾನ ಮಾಡುವುದನ್ನು ಕಾಣಬಹುದು. 



ಕಳೆದ ವರ್ಷ ದಿವಾಳಿ ಪ್ರಯುಕ್ತ  ಪ್ರಿಯಾಂಕಾ ಪಟಾಕಿಗಳನ್ನು ಹೊಡೆಯಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದರು. ಇದೇ ವೇಳೆ ತಮಗೆ ಅಸ್ತಮಾ ಇರುವುದಾಗಿ ಹೇಳಿದ್ದರು. ಈ ಹಿನ್ನಲೆಯಲ್ಲಿ ಈಗ ಸಿಗರೇಟ್ ಸೇದುತ್ತಿರುವ ಚಿತ್ರ ವೈರಲ್ ಆಗಿರುವ ಹಿನ್ನಲೆಯಲ್ಲಿ  'ನಿಮ್ಮ ಅಸ್ತಮಾ ಏನಾಯಿತು ? ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.



ಅಷ್ಟಕ್ಕೂ ಸೀಗರೆಟ್ ಸೇದುತ್ತಿರುವುದಕ್ಕೆ ಟ್ರೋಲ್ ಆಗುತ್ತಿರುವ ನಟಿ ಪ್ರಿಯಾಂಕಾ ಮೊದಲೇನಲ್ಲ, ಇದಕ್ಕೂ ಮೊದಲು ಪಾಕ್ ನಟಿ ಮಹಿರಾ ಖಾನ್ ಮತ್ತು ರಣಭೀರ್ ಕಪೂರ್ ನ್ಯೂಯಾರ್ಕ್ ನ ಬೀದಿಯಲ್ಲಿ ಸೀಗರೆಟ್ ಸೇದುತ್ತಿರುವುದಕ್ಕೆ ಟ್ರೋಲ್ ಗೆ ಒಳಗಾಗಿದ್ದರು.