ʼProject Kʼ film Teaser : 'ಪ್ರಾಜೆಕ್ಟ್- K' ಸಿನಿಮಾ ಭಾರೀ ಕುತೂಹಲ ಮೂಡಿಸಿದೆ. ಪ್ರಭಾಸ್- ಕಮಲ್ ಹಾಸನ್‌ ನಟನೆಯ ಈ ಚಿತ್ರದ ಫಸ್ಟ್ ಗ್ಲಿಂಪ್ಸ್ ಇನ್ನೆರಡು ದಿನಗಳಲ್ಲಿ ರಿಲೀಸ್ ಆಗಲಿದೆ. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾದಲ್ಲಿ ಬಿಗ್‌ ಬಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಸೇರಿದಂತೆ ದೊಡ್ಡ ತಾರಾಗಣವಿದೆ.


COMMERCIAL BREAK
SCROLL TO CONTINUE READING

ಇನ್ನು ಚಿತ್ರತಂಡ ಹೇಳಿದ ಸಮಯಕ್ಕೆ ದೀಪಿಕಾ ಫಸ್ಟ್‌ ಲುಕ್‌ ಬಿಡುಗಡೆ ಮಾಡಲಿಲ್ಲ. ಫ್ಯಾನ್ಸ್‌ ಕಾದು ಕಾದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೇಳಿದ್ದಕ್ಕಿಂತ 5 ಗಂಟೆ ತಡವಾಗಿ ಪೋಸ್ಟರ್ ರಿಲೀಸ್‌ ಆಗಿದೆ. ಆದರೆ ಪೋಸ್ಟರ್‌ ಎಲ್ಲರ ನಿರೀಕ್ಷೆಯನ್ನು ಸುಳ್ಳುಮಾಡಿದೆ. ಇದೇ ಕಾರಣಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟು ಗಂಟೆ ಕಾಯಿಸಿದ್ದು ಇದಕ್ಕೇನಾ..? ಈ ಪೋಸ್ಟರ್‌ ಬಿಡೋಕೆ ಇಷ್ಟೆಲ್ಲಾ ಬಿಲ್ಡಪ್‌ ಬೇಕಿತ್ತಾ..? ಎಂದೆಲ್ಲಾ ಕಾಮೆಂಟ್‌ ಮಾಡುತ್ತಿದ್ದಾರೆ.


Highest-Paid Sandalwood Actors: 2023ರಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಸ್ಯಾಂಡಲ್‌ವುಡ್ ನಟರು


ಇನ್ನು ದೀಪಿಕಾ ಪಡುಕೋಣೆ ಚಿತ್ರದ ಫಸ್ಟ್‌ ಲುಕ್‌ನಲ್ಲಿ ಕೂದಲು ಫ್ರೀ ಬಿಟ್ಟು ಕಂಬಳಿ ರೀತಿಯ ಶಾಲುವನ್ನು ಕತ್ತಿಗೆಗೆ ಸುತ್ತಿಕೊಂಡು ರೋಷದಿಂದ ಕ್ಯಾಮರಾ ಕಡೆ ನೋಡುತ್ತಿರುವಂತೆ ಇದೆ. 'ಪ್ರಾಜೆಕ್ಟ್- K' ಸೈನ್ಸ್ ಫಿಕ್ಷನ್ ಆಕ್ಷನ್ ಸಿನಿಮಾ. ಸಿನಿಮಾದಲ್ಲಿ ನಾಗ್ ಅಶ್ವಿನ್ ಪ್ರತಿಯೊಬ್ಬರ ಗೆಟಪ್‌ನ್ನು ವಿಭಿನ್ನವಾಗಿ ತೋರಿಸಲು ಹೊರಟಿದ್ದಾರೆ. ಟೀಸರ್‌ಗೂ ಮುನ್ನ ದೀಪಿಕಾ ಗೆಟಪ್‌ ರಿವೀಲ್‌ ಆಗುಬಾರದು ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎನ್ನಲಾಗುತ್ತಿದೆ.


'ಪ್ರಾಜೆಕ್ಟ್- K' ಸಿನಿಮಾವನ್ನು ಬಹಳ ದೊಡ್ಡಮಟ್ಟದಲ್ಲಿ ದೇಶ ವಿದೇಶಗಳಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೆಯುತ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಅಪ್ಪಳಿಸಲಿದೆ ಎಂದು ಚಿತ್ರತಂಡ ತಿಳಿಸಿದೆ. 600 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ 'ಪ್ರಾಜೆಕ್ಟ್- K' ಸಿನಿಮಾ ನಿರ್ಮಾಣವಾಗುತ್ತಿದೆ. 


ಈ ಹಿಂದೆ ನಾಗ್ ಅಶ್ವಿನ್ 'ಮಹಾನಟಿ' ಸಿನಿಮಾ ಮೂಲಕ ದೊಡ್ಡ ಸಕ್ಸಸ್‌ ಕಂಡಿದ್ದರು. ಇದೀಗ ಪ್ರಭಾಸ್, ಬಿಗ್‌ಬಿ, ಕಮಲ್, ದೀಪಿಕಾರಂತಹ ಘಟಾನುಘಟಿ ಕಲಾವಿದರನ್ನು ಕೂಡಿಕೊಂಡು ಮಾಡುತ್ತಿರುವ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.  ಇನ್ನು ಸಿನಿಮಾ ಟೈಟಲ್ ಅರ್ಥ ಏನು..? ʼKʼ ಎಂದರೇ ಏನು ಎನ್ನುವ ಚರ್ಚೆಗಳು ನಡೆಯುತ್ತಿವೆ. ಇದಕ್ಕೆಲ್ಲಾ ಚಿತ್ರತಂಡ ಶೀಘ್ರದಲ್ಲೇ ಉತ್ತರ ನೀಡಲಿದೆ.


ಇದನ್ನೂ ಓದಿ-ಯಾವುದೇ ಹೊಟೇಲ್ ರೂಮ್ ಪ್ರವೇಶಿಸುತ್ತಿದ್ದಂತೆ ಗುಳಿಕೆನ್ನೆ ಬೆಡಗಿ ದೀಪಿಕಾ ಪಡುಕೋಣೆ ಮಾಡುವ ಮೊದಲ ಕೆಲಸ ಇದಂತೆ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.