ಬೆಂಗಳೂರು: ‘ದಿಯಾ’ ಚಿತ್ರದ ಮೂಲಕ ಗಮನ ಸೆಳೆದ ನಟ ಪೃಥ್ವಿ ಅಂಬರ್‌(Pruthvi Ambaar) ಮತ್ತು ಸ್ಯಾಂಡಲ್‌ವುಡ್‌ ಕ್ಯೂಟಿ ಮಾನ್ವಿತಾ ಹರೀಶ್(Manvita Harish) ಇದೇ ಮೊದಲ ಬಾರಿಗೆ ತೆರೆ ಮೇಲೆ ಮಿಂಚಲು ಒಂದಾಗಿದ್ದಾರೆ. ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ಈ ಜೋಡಿ ಮೋಡಿ ಮಾಡಲು ಸಜ್ಜಾಗಿದೆ. ಈ ಚಿತ್ರಕ್ಕೆ ‘ಹ್ಯಾಪೀ ಮ್ಯಾರೀಡ್’ ಎಂದು ಹೆಸರಿಡಲಾಗಿದ್ದು, ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಕೊರೊನಾ ಲಾಕ್‌ಡೌನ್‌(Corona Lockdown)ನಿಂದ ಬಹಳ ಸೈಲೆಂಟ್ ಆಗಿದ್ದ ನಟಿ ಮಾನ್ವಿತಾ ಇದೀಗ ಸೈಕಾಲಜಿಕಲ್ ಥ್ರಿಲ್ಲರ್(Psychological thriller) ಚಿತ್ರದೊಂದಿಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಹಿಂದೆ ‘ಲೈಫ್ ಈಸ್ ಬ್ಯೂಟಿಫುಲ್’ ಸಿನಿಮಾ ನಿರ್ದೇಶಿಸಿದ್ದ ಎಂ.ಅರುಣ್ ಕುಮಾರ್ ಮತ್ತು ಸಾಬು ಅಲೋಶಿಯಸ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.


ಇದನ್ನೂ ಓದಿ: ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಗೋಲ್ಡನ್ ಸ್ಟಾರ್ ಗಣೇಶ್ ಪುತ್ರ..!  


ಈ ಚಿತ್ರದ ಕಥೆಯು ವಿವಾಹಿತ ದಂಪತಿಗಳ ಸುತ್ತ ಸುತ್ತುತ್ತದೆ. ಈ ಚಿತ್ರವನ್ನು 15 ದಿನಗಳೊಳಗೆ ಚಿತ್ರೀಕರಿಸಲಾಗಿದೆಯಂತೆ. ‘ವ್ಯಂಗ್ಯ ಮತ್ತು ಪ್ರೀತಿಯಿಂದ ಆರಂಭವಾದ ದಾಂಪತ್ಯವು ಹೇಗೆ ವಿಘಟನೆ ಹೊಂದುತ್ತದೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ’ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ. ಇದಲ್ಲದೆ ಈ ಸಿನಿಮಾ ಮಿಸ್ಟರಿ ಮತ್ತು ಸಂಸಾರ ಸಂಬಂಧದ ಕೌಶಲ್ಯಪೂರ್ಣ ಮಿಶ್ರಣ ಹೊಂದಿದ್ದು, ನವ ದಂಪತಿಗಳ ಸುತ್ತ ಸುತ್ತುತ್ತಿರುತ್ತದೆ. ಪಾತ್ರಗಳಲ್ಲಿ ಚಿತ್ರ-ವಿಚಿತ್ರವಾದ ಟ್ವಿಸ್ಟ್ ಕಾಣಿಸಿಕೊಳ್ಳುತ್ತವೆ. ಪ್ರೇಕ್ಷಕರಿಗೆ ಅದು ಅರ್ಥವಾಗದಿರಬಹುದು, ಆದರೆ ಕಥಾವಸ್ತುವು ತೆರೆದುಕೊಳ್ಳುತ್ತಿದ್ದಂತೆ ಮುಂದೇನಾಗುತ್ತದೆ, ಏನಾಗಬಹುದು ಎಂಬ ಕುತೂಹಲ ಮೂಡಿಸುತ್ತದೆ. ಈ ಸಿನಿಮಾ ಸೈಕಾಲಜಿಕಲ್ ಗೇಮ್ ಆಗಿ ಪರಿವರ್ತನೆಗೊಳ್ಳುತ್ತೆ. ನೋಡುವ ಪ್ರೇಕ್ಷಕನಿಗೆ ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ.    


ಇದನ್ನೂ ಓದಿ: Sandalwood Drug Scandal: ರಾಗಿಣಿ, ಸಂಜನಾ ಡ್ರಗ್ ಸೇವಿಸಿದ್ದು ದೃಢ; ಕಾದಿದೆ ಭಾರೀ ಶಾಕ್! 


ಪ್ರೇಕ್ಷಕರು ಸಿನಿಮಾ ಥಿಯೇಟರ್ ನಲ್ಲಿ ಕುಳಿತು ತದೇಕಚಿತ್ತದಿಂದ ವೀಕ್ಷಿಸುವಂತೆ ‘ಹ್ಯಾಪೀ ಮ್ಯಾರೀಡ್’ (Happily Married)ಮೂಡಿಬಂದಿದೆ. ಥಿಯೇಟರ್ ನಲ್ಲಿದ್ದಷ್ಟು ಕಾಲ ಪ್ರೇಕ್ಷಕರು ಸಿನಿಮಾವನ್ನು ಎಂಜಾಯ್ ಮಾಡುತ್ತಾರೆ. ಎಲ್ಲಿಯೂ ಅವರಿಗೆ ಬೇಸರವಾಗುವುದಿಲ್ಲ. ಆ ರೀತಿ ಸೈಕಾಲಜಿಕಲ್ ಥ್ರಿಲ್ಲರ್ ಕಥಾವಸ್ತುವನ್ನು ಈ ಸಿನಿಮಾ ಹೊಂದಿದೆ. ಸಿನಿಮಾದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದ್ದು, ಮುಂದಿನ ಕೆಲಸಗಳಲ್ಲಿ ಚಿತ್ರತಂಡ ತೊಡಗಿಸಿಕೊಂಡಿದೆ. ಶೀಘ್ರವೇ ಚಿತ್ರ ಬಿಡುಗಡೆ ದಿನಾಂಕ ಘೋಷಿಸುವ ನಿರೀಕ್ಷೆ ಇದೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ