ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾದ ಹಿನ್ನಲೆ ವೀಕೆಂಡ್ ಆದರೆ ಸಾಕು ಮಹಿಳೆಯರು ದೇವಾಲಯಗಳು ಮಾತ್ರವಲ್ಲದೇ ಪುನೀತ್‌ ರಾಜ್‌ ಕುಮಾರ್‌ ಸಮಾಧಿಗೆ‌ ಅಪಾರ ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಕರುನಾಡಿನ ಯುವರತ್ನ ನಮ್ಮೊಂದಿಗೆ ದೈಹಿಕವಾಗಿ ಇಲ್ಲದೇ ಹೋದರೂ ಮಾನಸಿಕವಾಗಿ ಎಲ್ಲರ ಮನದಲ್ಲೂ ಮನೆ ಮಾಡಿದ್ದಾರೆ. ಅಪ್ಪುವನ್ನು ಕಳೆದುಕೊಂಡು 2 ವರ್ಷ ಹತ್ತಿರವಾದರೂ ಅವರನ್ನು ನೆನೆಯದ ದಿನಗಳಿಲ್ಲ. 


ಇದನ್ನೂ ಓದಿ: Actress Ramya: ಅಭಿಮಾನಿ ಜೊತೆ ಸರಳತೆ ಮೆರೆದ ಮೋಹಕ ತಾರೆ ರಮ್ಯಾ; ಪದ್ಮಾವತಿ ಸಿಂಪ್ಲಿಸಿಟಿಗೆ ಫ್ಯಾನ್ಸ್‌ ಫಿದಾ!


ಇಂದಿಗೂ ಅವರನ್ನು ಆರಾಧ್ಯ ದೈವ ಎಂದು ಪೂಜಿಸುವ ವರ್ಗವೇ ಇದೆ. ದೇವಾಲಯಗಳಿಗೆ ಹೋಗುತ್ತಿದ್ದವರು ಇದೀಗ ತಮ್ಮ ದಿಕ್ಕನ್ನು ಕೊಂಚ ಬದಲಾಯಿಸಿದ್ದಾರೆ. ಪುನೀತ್‌ ರಾಜ್‌ ಕುಮಾರ್‌ ಸಮಾಧಿಗೆ ಅಧಿಕ ಮಹಿಳೆಯರು ಆಗಮಿಸುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಶಕ್ತಿ ಯೋಜನೆ ಕುರಿತು ಬಾರಿ ಮೆಚ್ಚುಗೆ ಸೂಚಿಸಿದ್ದಾರೆ. 


ಇದನ್ನೂ ಓದಿ: 'Kenda Sampige': ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿರುವ 'ಕೆಂಡ ಸಂಪಿಗೆ' ಧಾರವಾಹಿ ; ಇಲ್ಲಿದೆ ಅಪ್‌ಡೇಟ್ಸ್


ಇದೀಗ ನಾರಿಯರು ʼಶಕ್ತಿ ಯೋಜನೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಧನ್ಯವಾದ ತಿಳಿಸಿದ್ದಾರೆ.  ‘ನಾವು ಬಡವರು. ನಾವು ಅಷ್ಟು ದೂರದಿಂದ ಬರೋದಕ್ಕೆ ಆಗುತ್ತಿರಲಿಲ್ಲ. ಸರ್ಕಾರ ಫ್ರೀ ಬಸ್ ಕೊಡ್ತು. ಹೀಗಾಗಿ ಪುನೀತ್ ಸಮಾಧಿ ದರ್ಶನಕ್ಕೆ ಬಂದೆವು’ ಎಂದು ಮಹಿಳೆಯರು ಹೇಳಿಕೊಂಡಿದ್ದಾರೆ. ಉಚಿತ ಬಸ್‌ ಪಾಸ್‌ನಿಂದ ಇಲ್ಲಿಗೆ ಬರಲು ಸಾಧ್ಯವಾಯಿತು. ಈ ಯೋಜನೆಯಿಂದ ಮಾಧ್ಯಮ ವರ್ಗದ ಮಹಿಳೆಯರಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.