Puneeth Kerehalli : ರಾಜ್‌ ಕುಟುಂಬದ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ ಹೊತ್ತಿರುವ ರಾಷ್ಟ್ರ ರಕ್ಷಣಾ ಪಡೆ ಪುನೀತ್‌ ಕೆರೆಹಳ್ಳಿ ಆರೋಪ ಮಾಡಿದವರ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ, ಆರೋಪ ಮಾಡುವುದು ಅಷ್ಟೇ ಅಲ್ಲ ಅದನ್ನು ಸಾಭೀತು ಪಡಿಸುವ ಧೈರ್ಯ ಇರಬೇಕು. ನಾನು ಎಲ್ಲೂ ರಾಜ್‌ ಪರಿಹಾರದ ಬಗ್ಗೆ ಚಕಾರ ಎತ್ತಿಲ್ಲ. ನಿಮ್ಮ ಬಳಿ ನಾನು ತಪ್ಪಾಗಿ ಮಾತನಾಡಿದ್ದರ ದಾಖಲೆ ಇದ್ದರೆ ಬಿಡುಗಡೆ ಮಾಡಿ, ನಾನು ಕರ್ನಾಟಕ ಬಿಟ್ಟು ಹೋಗುತ್ತೇನೆ ಎಂದು ಬಹಿರಂಗವಾಗಿ ಸವಾಲ್‌ ಹಾಕಿದ್ದಾರೆ.


COMMERCIAL BREAK
SCROLL TO CONTINUE READING

ಜೀ ಕನ್ನಡ ನ್ಯೂಸ್‌ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಪುನೀತ್‌ ಕೆರೆಹಳ್ಳಿಯವರು, ನನಗೆ ಮೇಲೆ ಹಲ್ಲೆ ನಡೆದಿರುವುದು ಕುಂತಂತ್ರದ ಪರಮಾವಧಿ. ನಾನು ಅಪ್ಪಟ ಪುನೀತ್‌ ರಾಜಕುಮಾರ ಅವರ ಅಭಿಮಾನಿ. ತೆರೆಮರೆಯಲ್ಲಿ ಅವರ ಮೇಲಿನ ಅಭಿಮಾನಕ್ಕಾಗಿ ನಾನು ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಇದೀಗ ನನ್ನ ಮೇಲೆ ರಾಜ್‌ ಕುಟುಂಬಕ್ಕೆ ಅವಮಾನ ಮಾಡಿದ ಆರೋಪ ಹೊರಿಸಿದ್ದಾರೆ. ಈ ಆರೋಪಗಳು ಆಧಾರ ರಹಿತವಾಗಿದೆ ಎಂದು ಹೇಳಿದರು.


ಇದನ್ನೂ ಓದಿ: ʼನಾನು ಅಪ್ಪು ಅಪ್ಟಟ ಅಭಿಮಾನಿʼ : ಕೆಟ್ಟದಾಗಿ ಮಾತನಾಡಿಲ್ಲ.. ದರ್ಶನ್‌ ಪರವಾಗಿಯೂ ನಾನಿಲ್ಲ


ನಾನು ರಾಜ್‌ ಕುಟುಂಬದವರ ಸಿನಿಮಾಗಳನ್ನು ನೋಡಿ ಬೆಳೆದುಕೊಂಡು ಬಂದಿದ್ದೇನೆ. ನಾನು ವ್ಯಾಪಾರಕ್ಕಾಗಿ ಇದೆಲ್ಲ ಮಾಡುತ್ತಿಲ್ಲ. ರಾಜ್‌ ಕುಟುಂಬದ ಮೇಲೆ ನನಗೆ ಆಪಾರ ಗೌರವವಿದೆ. ನನ್ನ ಮೇಲಿರುವ ಆರೋಪ ಶುದ್ಧ ಸುಳ್ಳು. ಇದೇಲ್ಲ ಹಿಂದೆ ನಿಂತು ಬೇರೊಬ್ಬರ ಕೈಯಲ್ಲಿ ಮಾಡಿಸಿದ್ದಾರೆ. ಆದ್ರೆ ನಾನೇಲ್ಲೂ ರಾಜ್‌ ಕುಮಾರ್‌ ಅವರ ಕುರಿತು ಮಾತನಾಡಿಲ್ಲ. ಅವರು ಇದಕ್ಕೆ ಸಾಕ್ಷಿ ನೀಡಲೆಬೇಕು.


ನಾನು ಪ್ರಮಾಣ ಮಾಡಿ ಹೇಳುತ್ತಿದ್ದೇನೆ. ಕೆಂಪೇಗೌಡರ ವಿವಾದದಿಂದ ಹಿಡಿದು ರಾಜ್‌ ಕುಟುಂಬಕ್ಕೆ ಅವಮಾನ ಮಾಡಿರುವ ಕುರಿತು ನನ್ನ ಮೇಲಿರುವ ಆರೋಪಗಳನ್ನು ಸಾಕ್ಷಿ ಸಮೇತ ಸಾಭೀತು ಮಾಡಿದ್ರೆ ನಾನು ಕರ್ನಾಟಕವನ್ನು ಬಿಟ್ಟು ಹೋಗ್ತೇನೆ. ನೋಡಿ ನಿಮಗೊಂದು ಆಫರ್‌.. ಪುನೀತ್‌ ಕೆರೆಹಳ್ಳಿ ಕರ್ನಾಟಕ ಬಿಟ್ಟು ಹೋಗ್ತಾನೆ.. ರುಜುವಾತ್‌ ಮಾಡಿ ಅಲ್ಲದೆ, ನಾನು ಕೆಂಪೇಗೌಡರ ಕುರಿತು ಮಾತನಾಡಿರುವ ಸಣ್ಣ ವಿಡಿಯೋ ತುಣುಕು ಇದ್ರೂ ಸಹ ನಾನು ಕರ್ನಾಟಕ ತೊರೆಯುತ್ತೇನೆ ಎಂದು ವಿರೋಧಿಗಳಿಗೆ ಒಪನ್‌ ಚಾಲೆಂಜ್‌ ಹಾಗಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.