Puneeth Rajkumar birthday : ಸ್ಯಾಂಡಲ್‌ವುಡ್‌ ರತ್ನ, ಪುನೀತ್ ರಾಜ್ ಕುಮಾರ್ ಅವರಿಗೆ ಇಂದು 49ನೇ ಹುಟ್ಟುಹಬ್ಬದ ಸಂಭ್ರಮ. ಅವರಿದ್ದಿದ್ದರೇ ತಮ್ಮ ಅಭಿಮಾನಿ ದೇವರುಗಳಿಗೆ ಸಾಲು ಸಾಲು ಸರ್ಪ್ರೈಸ್‌ ನೀಡುತ್ತಿದ್ದರು. ಆದ್ರೆ ವಿಧಿಯಾಟ ಮುತ್ತುರಾಜನ ರತ್ನ ನಮ್ಮ ನಡುವೆ ಇಲ್ಲ. ಆದ್ರೆ ಅವರ ನೆನೆಪು ಅಜರಾಮರವಾಗಿದೆ. ಪುನೀತ್‌ ಅವರ ಬಗ್ಗೆ ಎಷ್ಟು ಹೇಳಿದ್ರೂ ಕಡಿಮೆ. ಚಿಕ್ಕ ವಯಸ್ಸಿನಲ್ಲಿಯೇ ನಟನೆಗಾಗಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಬಾಚಿಕೊಂಡ ನಟಸಾರ್ವಭಾಮ ಬಹಳ ಸರಳ ಮತ್ತು ಹೃದಯವಂತ ವ್ಯಕ್ತಿ. 


COMMERCIAL BREAK
SCROLL TO CONTINUE READING

ಪುನೀತ್ ರಾಜ್‌ಕುಮಾರ್ ಅವರು 17 ಮಾರ್ಚ್ 1975 ರಂದು ವರನಟ ಡಾ. ರಾಜ್‌ಕುಮಾರ್ ಮತ್ತು ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ಗೆ ಜನಿಸಿದರು. ಅವರು ಐದು ಒಡಹುಟ್ಟಿದವರಲ್ಲಿ ಕಿರಿಯರಾಗಿದ್ದರು. ಕೇವಲ 6 ತಿಂಗಳ ವಯಸ್ಸಿನಲ್ಲಿ, ಅವರು ಪ್ರೇಮದ ಕಾಣಿಕೆ ಚಿತ್ರದ ಮೂಲಕ ಸಿನಿ ರಂಗಕ್ಕೆ ಪ್ರವೇಶ ಮಾಡಿದರು. ಸಣ್ಣವರಿದ್ದಾಗ ಪುನೀತ್ ತನ್ನ ಸಹೋದರಿ ಪೂರ್ಣಿಮಾ ಅವರ ಜೊತೆ ಸಿನಿಮಾ ಸೆಟ್‌ಗೆ ಬರುತ್ತಿದ್ದರು. ಇದರಿಂದಾಗಿ ಅವರ ಮನಸ್ಸು ಸಿನಿರಂಗದತ್ತ ಗಮನಹರಿಸುವಂತೆ ಮಾಡಿತು. ಈ ಕಾರಣಕ್ಕಾಗಿ, ಅವರು ಚಿಕ್ಕ ವಯಸ್ಸಿನಲ್ಲೇ ಶಾಲೆಯನ್ನು ತೊರೆದರು. ಆದ್ರೂ, ನಂತರ ಅವರು ಮನೆ ಶಿಕ್ಷಕರ ಸಹಾಯದಿಂದ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದರು. ಕಂಪ್ಯೂಟರ್ ಸೈನ್ಸ್ ನಲ್ಲಿ ಡಿಪ್ಲೊಮಾ ಕೂಡ ಮಾಡಿದ್ದಾರೆ. ಹಲವು ಚಿತ್ರಗಳಲ್ಲಿ ಬಾಲ ಕಲಾವಿದರಾಗಿ ಕೆಲಸ ಮಾಡಿದ್ದಾರೆ.


ಇದನ್ನೂ ಓದಿ:


10ನೇ ವಯಸ್ಸಿನಲ್ಲಿ ಮೊದಲ ರಾಷ್ಟ್ರೀಯ ಪ್ರಶಸ್ತಿ : ಪುನೀತ್ ರಾಜ್ ಕುಮಾರ್ 10 ವರ್ಷದವರಾಗಿದ್ದಾಗ ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ‘ಬೆಟ್ಟದ ಹೂವು’ ಚಿತ್ರಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಇದರಲ್ಲಿ ಬಾಲ ಕಲಾವಿದನಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರವು ಅತ್ಯುತ್ತಮ ಕನ್ನಡ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ, ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳು ದಕ್ಷಿಣ ಮತ್ತು ಎರಡು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಅಷ್ಟೆ ಅಲ್ಲದೆ, ಸಾಲು ಸಾಲು ಪ್ರಶಸ್ತಿಗಳು ಲಭಿಸಿವೆ.


ಅಪ್ಪುವಿಗೆ ಸಂದ ಗೌರವಗಳು


  • 'ಬೆಟ್ಟದ ಹೂವು' ಚಿತ್ರಕ್ಕಾಗಿ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

  • ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ

  • 'ಅರಸು' ಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ

  • 'ರಾಮ್' ಚಿತ್ರಕ್ಕಾಗಿ ಅಕ್ಕ ಅತ್ಯುತ್ತಮ ನಟ ಪ್ರಶಸ್ತಿ

  • ಸೌತ್ ಸ್ಕೋಪ್ ಚಿತ್ರ 'ರಾಜ್-ದ ಶೋಮ್ಯಾನ್' ಅತ್ಯುತ್ತಮ ನಟ ಪ್ರಶಸ್ತಿ


ಸಾಲು ಸಾಲು ಪ್ರಶಸ್ತಿ, ಸೂಪರ್‌ ಸ್ಟಾರ್‌ ಮಗ ಅಪ್ಪು : ಚಿಕ್ಕವಯಸ್ಸಿನಲ್ಲೇ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಅಪ್ಪು ತಾವೊಬ್ಬ ಸೂಪರ್‌ ಸ್ಟಾರ್‌ ನಟನ ಮಗ ಎನ್ನುವ ಯಾವುದೇ ಭಾವನೆ ಹೊಂದಿದ್ದಿಲ್ಲ. ಕೋಟಿ ಕೋಟಿ ಹಣವಿದ್ದರೂ ಅಭಿಮಾನಿಗಳನ್ನು ಮನೆ ದೇವರು ಎಂದು ಪೂಜಿಸುತ್ತಿದ್ದರು. ಅಲ್ಲದೆ, ಸಮಾಜಿಕ ಕಳಕಳಿ ಹೊಂದಿದ್ದ ಅಪ್ಪು ತಾವು ಮಾಡಿದ ಸಹಾಯವನ್ನೂ ಎಲ್ಲೂ ಎಂದಿಗೂ ಹೇಳಿಕೊಂಡಿಲ್ಲ. ಒಂದು ಚಿತ್ರ ಹಿಟ್‌ ಆದ್ರೆ ಸಾಕು ಸ್ಟಾರ್‌ ಲೆವೆಲ್‌ಗೆ ಮಿಂಚುವ ಜನರ ನಡುವೆ ಒಮ್ಮ ಸಾಮಾನ್ಯರಂತೆ ಇರಲು ಅಪ್ಪು ಬಯಸುತ್ತಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.