Puneeth Rajkumar 50th Birthday Special: ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ 49ನೇ ಹುಟ್ಟುಹಬ್ಬದ ಹಿನ್ನೆಲೆ ಮಾರ್ಚ್‌ 15 ರಂದು ಪಿಆರ್‌ಕೆ ಪ್ರೊಡಕ್ಷನ್ಸ್ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಜಂಟಿಯಾಗಿ 'ಜಾಕಿ' ಸಿನಿಮಾವನ್ನು ಮರುಬಿಡುಗಡೆ ಮಾಡಿದೆ. ಇದೀಗ ಅದೇ ರೀತಿಯೇ ಮುಂದಿನ ವರ್ಷ ಅಂದರೇ ಪುನೀತ್‌ ರಾಜಕುಮಾರ್‌  50 ನೇ ಜನ್ಮದಿನಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.


COMMERCIAL BREAK
SCROLL TO CONTINUE READING

ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್ 50ನೇ ಹುಟ್ಟುಹಬ್ಬದ ಪ್ರಯುಕ್ತ 'ಅಪ್ಪು' ಚಿತ್ರವನ್ನು ರೀ-ರಿಲೀಸ್‌ ಮಾಡಲು ಈ ವರ್ಷದಿಂದಲೇ ಸಿದ್ಧತೆಗಳು ಶುರುವಾಗಿದೆ. ಕೆಆರ್‌ಜಿ ಸ್ಟುಡಿಯೋಸ್‌ನ ಕಾರ್ತಿಕ್ ಗೌಡ "ಈಗ ರೀ-ರಿಲೀಸ್ ಆಗಿರುವ 'ಜಾಕಿ' ಒಂದು ಮಾಸ್ ಸಿನಿಮಾ. ಈ ಚಿತ್ರವನ್ನು ಮರು ಬಿಡುಗಡೆಯ ಮೂಲಕ ನಾವು ಮತ್ತು ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರನ್ನು ಸಂಭ್ರಮಿಸಲು ಇಚ್ಛಿಸುತ್ತೇವೆ. ಇದೇ ರೀತಿ ಪ್ರತಿ ವರ್ಷವೂ ಅವರ ಹುಟ್ಟುಹಬ್ಬದ ಪ್ರಯುಕ್ತ ಅಪ್ಪು ಚಿತ್ರವನ್ನು ಮರು ಬಿಡುಗಡೆ ಮಾಡುತ್ತೇವೆ" ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Puneeth Rajkumar: ʼನನಗೆ ನೀನು ಎಂದೆಂದಿಗೂ ಪುಟ್ಟ ತಮ್ಮʼ : ಅಪ್ಪು ಸ್ಮರಿಸಿದ ಶಿವಣ್ಣ


ಕಾರ್ತಿಕ್ ಗೌಡ "ಮುಂದಿನ ವರ್ಷ ಪುನೀತ್ ರಾಜ್‌ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕೆ ಆರ್‌ಜಿ ಸ್ಟುಡಿಯೋಸ್ ಮತ್ತು ಪಿಆರ್‌ಕೆ ಪ್ರೊಡಕ್ಷನ್ಸ್ ಜಂಟಿಯಾಗಿ ಪುನೀತ್ ರಾಜ್‌ಕುಮಾರ್ ಮೊದಲ ಬಾರಿಗೆ ಹೀರೋ ಆಗಿ ಕಾಣಿಸಿಕೊಂಡ 'ಅಪ್ಪು' ಸಿನಿಮಾವನ್ನು ಮರುಬಿಡುಗಡೆ ‌ಮಾಡಬೇಕೆಂದು ನಿರ್ಧರಿಸಿದ್ದೇವೆ. ಚಿತ್ರದ ಕಲರ್ ಗ್ರೇಡಿಂಗ್ ಮತ್ತು ಇನ್ನಿತರ ಕೆಲಸಗಳು ಏಪ್ರಿಲ್ ತಿಂಗಳಲ್ಲಿ ಆರಂಭಗೊಳ್ಳಲಿವೆ" ಎಂದು ಹೇಳಿದ್ದಾರೆ.


ನಟ ಪುನೀತ್‌ ರಾಜಕುಮಾರ್‌ ಮೊದಲ ಬಾರಿಗೆ ಹೀರೋ ಆಗಿ ನಟಿಸಿದ 'ಅಪ್ಪು' ಚಿತ್ರಕ್ಕೆ ನಿರ್ದೇಶಕ ಪೂರಿ ಜಗನ್ನಾಥ್ ಡೈರೆಕ್ಷನ್‌ ಮಾಡಿದ್ದು, ನಟಿ ರಕ್ಷಿತಾ ನಾಯಕಿಯಾಗಿ ಬಣ್ಣ ಹಚ್ಚಿದ್ದರು. 2002 ರಲ್ಲಿ ತೆರೆಕಂಡ ಈ ಸಿನಿಮಾ 200 ದಿನಗಳ ಕಾಲ ಯಶಸ್ವಿಯಾಗಿ ಚಿತ್ರಮಂದಿರಗಳಲ್ಲಿ ಪೂರೈಸಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿತ್ತು. ಈ ಚಿತ್ರ ಸಕ್ಸಸ್‌ ಪಡೆದ ನಂತರ ತೆಲುಗು, ತಮಿಳು, ಬೆಂಗಾಲಿ, ಬಾಂಗ್ಲಾದೇಶಿ ಬೆಂಗಾಲಿ ಭಾಷೆಗಳಲ್ಲೂ ರಿಮೇಕ್‌ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.