ಬೆಂಗಳೂರು: ಪವರ್‌ ಸ್ಟಾರ್ ಪುನೀತ್​ ಜನ್ಮದಿನದ ಪ್ರಯುಕ್ತ ಬಿಡುಗಡೆಯಾದ ‘ಜೇಮ್ಸ್​’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಆರ್ಭಟಿಸಿದೆ. ಮೊದಲ ದಿನವೇ 30 ಕೋಟಿ ರೂಪಾಯಿ ಜೇಮ್ಸ್‌ ಸಿನಿಮಾದ ಕಲೆಕ್ಷನ್ಸ್‌ ಆಗಿದ್ದು.  4 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಲಿದೆ ಎನ್ನಲಾಗ್ತಿದೆ. ಇದರ ಕಂಪ್ಲೀಟ್‌ ಡೀಟೈಲ್ಸ್‌ ಇಲ್ಲಿದೆ.


COMMERCIAL BREAK
SCROLL TO CONTINUE READING

ಡಾ. ಪುನೀತ್ ರಾಜ್‍ಕುಮಾರ್ (Puneeth Rajkumar) ಅಭಿನಯದ ಜೇಮ್ಸ್ ನಿನ್ನೆ ವಿಶ್ವಾದ್ಯಂತ ರಿಲೀಸ್ ಆಗಿತ್ತು.‘ಜೇಮ್ಸ್’ ಅಪ್ಪು ಹುಟ್ಟುಹಬ್ಬದ ದಿನ ರಿಲೀಸ್ ಆಗಿದ್ದರಿಂದ ಸಿನಿಮಾವನ್ನು ಅಭಿಮಾನಿಗಳು ಹಬ್ಬದ ರೀತಿ ಬರಮಾಡಿಕೊಂಡಿದ್ದರು.ಈ ಚಿತ್ರ ನೋಡಬೇಕೆಂದು ಅಭಿಮಾನಿಗಳು ವಾರದ ಮುನ್ನವೇ ಟಿಕೆಟ್‍ಗಳನ್ನು ಬುಕ್ ಮಾಡಿಕೊಂಡಿದ್ದರು.ಚಂದನವನದಲ್ಲಿ ‘ಜೇಮ್ಸ್’ ಬಾಕ್ಸಾಫೀಸ್‍ನಲ್ಲಿ ಹೊಸ ದಾಖಲೆಯನ್ನೇ ಬರೆದಿದೆ.


ವಿದೇಶದಲ್ಲೂ ದಾಖಲೆ..!
ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯ ಮತ್ತು ವಿದೇಶಗಳಲ್ಲೂ ‘ಜೇಮ್ಸ್​’ ಪ್ರದರ್ಶನ ಕಾಣುತ್ತಿದೆ.ಮೊದಲ ದಿನ ‘ಜೇಮ್ಸ್ (James )​’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಬಗ್ಗೆ ಈಗ ಮಾಹಿತಿ ಸಿಕ್ಕಿದೆ.ಯಶ್​ ನಟನೆಯ ‘ಕೆಜಿಎಫ್​: ಚಾಪ್ಟರ್​ 1’ ಚಿತ್ರದ ದಾಖಲೆಯನ್ನೂ ಉಡೀಸ್​ ಮಾಡಿದೆ ಜೇಮ್ಸ್.


100 ಕೋಟಿ ಕ್ಲಬ್..!


ಹೌದು.ಮೊದಲ ದಿನವೇ ಅಪ್ಪು ಸಿನಿಮಾದ ಸಂಪಾದನೆ ಬರೋಬ್ಬರಿ 30 ಕೋಟಿ ಆಗಿದೆ. ಜೊತೆಗೆ 4 ದಿನದ ಟಿಕೆಟ್‍ಗಳು ಈಗಾಗಲೇ ಸೋಲ್ಡ್ ಔಟ್ ಆಗಿದೆ. ‘ಜೇಮ್ಸ್’ ಚಿತ್ರದ ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ನೋಡ್ತಿದ್ರೆ 4 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರೋದು ಪಕ್ಕಾ. ಟಿವಿ ರೈಟ್ಸ್‌ ಮತ್ತು ಡಿಜಿಟಲ್ ರೈಟ್ಸ್ ಲೆಕ್ಕಾಚಾರ ಮಾಡಿದ್ರೆ ಮೊದಲ 4 ದಿನದಲ್ಲಿ 100 ಕೋಟಿ ಪಕ್ಕಾ ಎನ್ನುತ್ತಿದೆ ಚಂದನವನ.


ಒಟ್ಟಾರೆ ಹೇಳೋದಾದ್ರೆ ಜೇಮ್ಸ್‌ ಅಂದುಕೊಂಡಿದ್ದಕ್ಕಿಂತಲೂ ದೊಡ್ಡ ಹಿಟ್‌ ಕಂಡಿದ್ದು, ಕನ್ನಡ ಸಿನಿ ಪ್ರೇಕ್ಷಕರಿಗೆ ಮತ್ತೊಂದು ಫ್ಯಾಮಿಲಿ ಕಂ ಆಕ್ಷನ್‌ ಎಂಟರ್‌ಟೈನ್‌ಮೆಂಟ್‌ ಸಿನಿಮಾ ಸಿಕ್ಕಿದೆ. ಒಂದೆರಡು ವಾರಗಳ ಕಾಲ ಕೂಡ ಇದೇ ರೀತಿ ಅಭಿಮಾನಿಗಳ ಸಾಗರ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದ್ದು, ಗಲ್ಲಾ ಪೆಟ್ಟಿಗೆಯಲ್ಲೂ ಜೇಮ್ಸ್‌ ದೊಡ್ಡ ಹಿಟ್‌ ಕಾಣೋದು ಗ್ಯಾರಂಟಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.