ಬೆಂಗಳೂರು: ನನಗೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ, ನನ್ನ ಹೆಸರನ್ನು ಚುನಾವಣೆಗೆ ಹಾಗೂ ರಾಜಕಾರಣಕ್ಕೆ ಸಂಬಂಧಿಸಿದಂತೆ ಬಳಸಬೇಡಿ ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಹಿರಂಗ ಪತ್ರದ ಮೂಲಕ ಮನವಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ವಿನಂತಿಸಿರುವ ಪರಿ ಇದು...


ಎಲ್ಲರಿಗೂ ನನ್ನ ನಮಸ್ಕಾರ.. ನನಗೂ, ರಾಜಕಾರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದು ನಿಮಗೆ ತಿಳಿದಿರುವ ವಿಚಾರ, ನಾನು ಒಬ್ಬ ನಟನಾಗಿ ನನ್ನನ್ನು ಕಲೆಯ ಜೊತೆ ಗುರುತಿಸಿಕೊಳ್ಳುತ್ತೇನೆ ಹೊರತು ರಾಜಕಾರಣದಲ್ಲಲ್ಲ. 


ನಾನು ಹೇಳಬಯಸುವ ವಿಚಾರವೇನೆಂದರೆ ಮತ ಚಲಾಯಿಸುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯ ಹಾಗೂ ಅವರ ಆಯ್ಕೆಗೆ ಸಂಬಂಧ ಪಟ್ಟಿದ್ದು. ಅದನ್ನು ದೇಶದ ಹಾಗೂ ಈ ನಾಡಿನ ನಾಗರೀಕನಾಗಿ ನಾನು ಗೌರವಿಸುತ್ತೇನೆ. ಕನ್ನಡ ಜನತೆಗೆ ಹಾಗೂ ನಮ್ಮ ಅಭಿಮಾನಿಗಳಿಗೆ ಅವರ ಮತವನ್ನು ಪ್ರಬುದ್ಧವಾಗಿ ಚಲಾಯಿಸಿ ಎಂದು ಕೇಳಿಕೊಂಡಿದ್ದೇನೆ ಹೊರತು ಯಾವುದೇ ಪಕ್ಷ ಹಾಗೂ ವ್ಯಕ್ತಿಗೆ ಸೂಚಿಸಿರುವುದಿಲ್ಲ. 


ಗೌರವಾನ್ವಿತ ದೇವೇಗೌಡರ ಕುಟುಂಬ ಹಾಗೂ ಅಂಬರೀಶ್ ಅವರ ಕುಟುಂಬವು ನಮ್ಮ ಕುಟುಂಬದ ಹಾಗೆ, ಇಬ್ಬರೂ ನಮ್ಮ ಹಿತೈಷಿಗಳೇ, ಇಬ್ಬರಿಗೂ ಒಳ್ಳೆಯದಾಗಲಿ. ಆ ಭಗವಂತ ನಿಮಗೆ ಜನಸೇವೆ ಮಾಡುವ ಶಕ್ತಿ ಇನ್ನಷ್ಟು ಕೊಡಲಿ ಎಂದು ಪ್ರಾರ್ಥಿಸುತ್ತಾ ನನ್ನ ಹೆಸರನ್ನು ಚುನಾವಣೆಗೆ ಹಾಗೂ ರಾಜಕಾರಣಕ್ಕೆ ಸಂಬಂಧಿಸಬೇಡಿ ಎಂದು ಎಲ್ಲರಲ್ಲೂ ವಿನಂತಿಸಿ ಕೊಳ್ಳುತ್ತೇನೆ. 


"ನಿಮ್ಮ ಮತ, ನಿಮ್ಮ ಆಯ್ಕೆ"


ಪುನೀತ್ ರಾಜ್ ಕುಮಾರ್