Puneeth Rajkumar opinion about Politics: ಸ್ಯಾಂಡಲ್‌ವುಡ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ವಿವಿಧ ಸಾಮಾಜಿಕ ಕಾರಣಗಳನ್ನು ಉತ್ತೇಜಿಸಲು ಸರ್ಕಾರದ ಬೇಡಿಕೆಯುಳ್ಳ ಸೆಲೆಬ್ರಿಟಿಯಾಗಿದ್ದರು. ಆದರೂ ಪುನೀತ್ ರಾಜಕೀಯಕ್ಕೆ ಬರಲಿಲ್ಲ. ಪುನೀತ್ ಶಿಕ್ಷಣ ಹಕ್ಕು (RTE), ಸರ್ವಶಿಕ್ಷಾ ಅಭಿಯಾನ, ನಂದಿನಿ ಹಾಲು, ಚುನಾವಣಾ ಫ್ರಾಂಚೈಸ್ (ಮತ ಚಲಾಯಿಸುವ ಹಕ್ಕು) ಇತರ ಸಾಮಾಜಿಕ ಉಪಕ್ರಮಗಳ ರಾಯಭಾರಿ ಆಗಿದ್ದರು. ಇವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು.


COMMERCIAL BREAK
SCROLL TO CONTINUE READING

ಸರ್ಕಾರದ ಎಲ್ಲಾ ಉಪಕ್ರಮಗಳು ಮತ್ತು ಜಾಗೃತಿ ಅಭಿಯಾನಗಳಿಗೆ ಪುನೀತ್ ಸದಾ ಸಿದ್ಧ ಹಸ್ತರಾಗಿದ್ದರು. ಅದಕ್ಕಾಗಿ ಅವರು ಒಂದು ರೂಪಾಯಿ ಹಣ ಪಡೆಯಯುತ್ತಿರಲಿಲ್ಲ. 2014 ರ ಲೋಕಸಭೆ ಮತ್ತು 2018 ರ ಅಸೆಂಬ್ಲಿ ಚುನಾವಣೆಗಳಲ್ಲಿ ಮತದಾನದ ಅರಿವು ಮೂಡಿಸಲು ಪುನೀತ್ ಅವರನ್ನು ಚುನಾವಣಾ ಆಯೋಗ ರಾಯಭಾರಿಯನ್ನಾಗಿ ಮಾಡಿತು. ನಟ ನಾಗರಿಕರಿಗೆ ಮತ ಹಾಕುವಂತೆ ಒತ್ತಾಯಿಸಿದರು. ಆದರೆ ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರದಲ್ಲಿ ಪುನೀತ್‌ ಭಾಗಿಯಾಗಲಿಲ್ಲ. 


ಇದನ್ನೂ ಓದಿ: ಪ್ರಭುದೇವ ಜೊತೆ ಮದುವೆಯಾಗಲು ನಯನತಾರಾ ʻಈ ಧರ್ಮʼ ತೊರೆದು ಹಿಂದೂ ಮತಾಂತರಗೊಂಡರೇ!! 


ಅವರನ್ನು ರಾಜಕೀಯಕ್ಕೆ ತರಲು ಸಾಕಷ್ಟು ಪ್ರಯತ್ನಿಸಿದ್ದೇವೆ. ಆದರೆ ಪುನೀತ್ ಮನಸ್ಸು ಬದಲಾಯಿಸಲಿಲ್ಲ ಎಂದು ಡಿಕೆ ಶಿವಕುಮಾರ್ ಒಂದೊಮ್ಮೆ ಹೇಳಿದ್ದರು. ಸಹೋದರರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರಂತೆ ಪುನೀತ್ ಎಲ್ಲಾ ರಾಜಕೀಯ ಪಕ್ಷಗಳ ನಾಯಕರೊಂದಿಗೆ ಸೌಹಾರ್ದ ಸಂಬಂಧವನ್ನು ಹೊಂದಿದ್ದರು. ಆದರೆ ರಾಜಕೀಯದಿಂದ ಅಂತರ ಕಾಯ್ದುಕೊಂಡರು.


ರಾಜ್‌ಕುಮಾರ್ ಕುಟುಂಬದಲ್ಲಿ ಸಕ್ರಿಯ ರಾಜಕೀಯ ಜೀವನವನ್ನು ಹೊಂದಿರುವ ಏಕೈಕ ವ್ಯಕ್ತಿ ಎಂದರೆ ಅದು ಪುನೀತ್ ಅವರ ಅತ್ತಿಗೆ ಗೀತಾ ಶಿವರಾಜ್‌ಕುಮಾರ್. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಅವರ ಪುತ್ರಿ ಗೀತಾ 2014ರ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಆಗಲೂ ಪುನೀತ್ ಅವರ ಪರ ಪ್ರಚಾರ ಮಾಡಲಿಲ್ಲ. ಸ್ವಂತ ಅತ್ತಿಗೆಯ ನಿಲುವನ್ನು ಬೆಂಬಲಿಸಿದರು, ಶುಭ ಹಾರೈಸಿದರು. ಆದರೆ ರಾಜಕೀಯ ಪ್ರಚಾರದಲ್ಲಿ ಅವರು ಭಾಗಿಯಾಗಲಿಲ್ಲ.


ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಜೊತೆ ನಾಗಚೈತನ್ಯ ಮದುವೆ ಆಗಿದ್ರಾ? ಹಾಗಾದ್ರೆ ಸಮಂತಾ ಮೊದಲ ಪತ್ನಿ ಅಲ್ವಾ? ನಾಗಾರ್ಜುನʼಗೂ ಗೊತ್ತಿತ್ತಂತೆ ಈ ವಿಚಾರ!! 


ಈ ವೇಳೆ ಮಾತನಾಡಿದ್ದ ಪುನೀತ್‌, ʻನಮ್ಮ ಅತ್ತಿಗೆ ಅವರ ನಿಲುವನ್ನು ಗೌರವಿಸುತ್ತೇನೆ. ಅದು ಅವರ ಕುಟುಂಬದ ವಿಷಯ. ನಮ್ಮ ಕುಟುಂಬಕ್ಕೂ ರಾಜಕೀಯಕ್ಕೂ ದೂರ. ಅವರಿಗೆ ಶುಭ ಹಾರೈಸುತ್ತೇನೆʼ ಎಂದು ಹೇಳಿದ್ದರು. 


ಪುನೀತ್ ರಾಜ್‌ಕುಮಾರ್ ಮಾರ್ಚ್ 2019 ರಲ್ಲಿ ಸಾರ್ವಜನಿಕ ಹೇಳಿಕೆಯನ್ನು ನೀಡಿದ್ದರರು. ಅವರನ್ನು ರಾಜಕೀಯದಿಂದ ದೂರವಿಡುವಂತೆ ಜನರನ್ನು ಕೇಳಿಕೊಂಡಿದ್ದರು. 2019 ರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡಲಿದ್ದಾರೆ ಎಂಬ ಊಹಾಪೋಹಗಳಿಗೆ ಪುನೀತ್ ರಾಜ್‌ಕುಮಾರ್ ಸ್ಪಷ್ಟನೆ ನೀಡಿದ್ದರು. "ನನಗೆ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ನಟನಾಗಿ ನಾನು ಕಲೆಯಲ್ಲಿ ಗುರುತಿಸಿಕೊಳ್ಳುತ್ತೇನೆ ಮತ್ತು ರಾಜಕೀಯವಲ್ಲ. ನಮ್ಮ ಕುಟುಂಬಕ್ಕೂ ರಾಜಕೀಯಕ್ಕೂ ದೂರ" ಎಂದು ಹೇಳಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.