ಬೆಂಗಳೂರು: ಪುನೀತ್ ರಾಜಕುಮಾರ್ ಅವರ ಬಹುನಿರಿಕ್ಷಿತಚಿತ್ರ ಚಿತ್ರ ನಟ ಸಾರ್ವಭೌಮ ಈಗ ಈಗ ಬಿಡುಗಡೆಯಾಗಿದ್ದು ವಿಶೇಷವೆಂದರೆ ಮೊದಲ ದಿನವೇ ಕೆಜೆಎಫ್ ದಾಖಲೆಯನ್ನು ಅಳಿಸಿ ಹಾಕಿದೆ ಎನ್ನಲಾಗುತ್ತಿದೆ.


COMMERCIAL BREAK
SCROLL TO CONTINUE READING

ತಮ್ಮ ಡ್ಯಾನ್ಸ್, ಫೈಟಿಂಗ್,ಅಭಿನಯ ಈಗ ಪವರ್ ಫುಲ್ ಪ್ಯಾಕೇಜ್ ನಂತಿರುವ ನಟಸಾರ್ವಭೌಮ ಈಗ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ.ಹಲವು ಕಡೆ ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದ್ದು ಪುನೀತ್ ರಾಜ್ ಕುಮಾರ್ ಅವರ ಹೊಸ ಖದರ್ ಗೆ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ ಎಂದು ಹೇಳಬಹುದು.



ಈ ಚಿತ್ರದ ಇನ್ನೊಂದು ಹೆಗ್ಗಳಿಕೆ ಏನೆಂದರೆ ಕೆಜಿಎಫ್ ಚಿತ್ರದ ದಾಖಲೆಯನ್ನು ಅಳಿಸಿಹಾಕಿದೆ ಎನ್ನುವುದು,ಅಷ್ಟಕ್ಕೂ ಹೇಗೆ ಅಂತೀರಾ? ಈ ಹಿಂದೆ  ದೇಶ ವಿದೇಶಗಳಲ್ಲಿ ಬಿಡುಗಡೆಯಾಗಿ  ನೂತನ ದಾಖಲೆಯನ್ನೇ ನಿರ್ಮಿಸಿದ್ದ ಕೆಜಿಎಫ್ ಬೆಂಗಳೂರಿನಲ್ಲಿ ಮೊದಲ ದಿನ 525 ಶೋ ಪ್ರದರ್ಶನ ಕಂಡು ಕನ್ನಡದ ಮಟ್ಟಿಗೆ ನೂತನ ದಾಖಲೆಯನ್ನು ನಿರ್ಮಿಸಿತ್ತು.ಈಗ ಪುನೀತ್ ಅಭಿನಯದ ನಟಸಾರ್ವಭೌಮ ಈಗ 550 ಶೋ ಪ್ರದರ್ಶನ ಕಾಣುವ ಮೂಲಕ  ಹೊಸ ದಾಖಲೆಯನ್ನು ನಿರ್ಮಿಸಿದೆ.


ಪುನೀತ್ ರಾಜಕುಮಾರ್ ನಾಯಕನಾಗಿ ನಟಿಸಿದರೆ, ರಚಿತಾರಾಮ್ ಅನುಪಮಾ ಪರಮೇಶ್ವರ್ ನಾಯಕಿರಾಗಿ ನಟಿಸಿದ್ದಾರೆ.ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶಿಸಿದ್ದಾರೆ.