ಬೆಂಗಳೂರು: ಅದು 1974 ಮಾರ್ಚ್ 17… ದೊಡ್ಮನೆ ಕುಟುಂಬದಲ್ಲಿ ಮುದ್ದಾದ ಮಗುವಿನ ಜನನವಾಗುತ್ತೆ. ದೊಡ್ಮನೆ ಅಂದ್ರೆ ನಮ್ಗೆ ನೆನಪಾಗೋದೇ ಅಣ್ಣಾವ್ರ ಕುಟುಂಬ. ಮಾರ್ಚ್ 17 ಅಂದ್ರೆ ಅಪ್ಪು ಜನ್ಮ ದಿನ. ಆ ದಿನ ಅಭಿಮಾನಿಗಳ ಪಾಲಿಗೆ ದಸರಾ ಹಬ್ಬದ ರೀತಿ. ನೆಚ್ಚಿನ ನಟನ ಹುಟ್ಟುಹಬ್ಬವನ್ನು ತಮ್ಮದೇ ಹಬ್ಬವೆಂಬತೆ ಆಚರಿಸಿ ಕುಣಿದು ಕುಪ್ಪಳಿಸುತ್ತಾರೆ. ವರನಟ ಡಾ.ರಾಜ್ ಕುಮಾರ್ ಪುತ್ರ ‘ಅಪ್ಪು’ ಅಂದ್ರೆ ಎಲ್ಲರಿಗೂ ಯಾವತ್ತಿಗೂ ಸ್ಪೆಷಲ್. ತಂದೆಯೊಂದಿಗೆ ಪುಟಾಣಿ ಮಗುವಿರುವಾಗಲೇ ನಟಿಸಿ ಸೈ ಅನಿಸಿಕೊಂಡ ನಮ್ಮ ಪ್ರೀತಿಯ ‘ಅಪ್ಪು’ ನಾಯಕನಟನಾಗಿ ಮಿಂಚುಹರಿಸಿದ್ದಾರೆ.


COMMERCIAL BREAK
SCROLL TO CONTINUE READING

ವಸಂತ ಗೀತ, ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಭಕ್ತ ಪ್ರಹ್ಲಾದ, ಯಾರಿವನು? ಮತ್ತು ಬೆಟ್ಟದ ಹೂವು  ಚಿತ್ರಗಳಲ್ಲಿ ನಟನೆಗೆ ಮೆಚ್ಚುಗೆ ಪಡೆದರು. ಅವರ ಬೆಟ್ಟದ ಹೂವು ಚಿತ್ರದ ‘ರಾಮು’ ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಾತ್ರರಾಗಿದ್ದರು. ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಪಡೆದರು. ಪುನೀತ್ ಅವರು 2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕನಟನಾಗಿ ಸಿನಿಮಾರಂಗದ ಪಯಣ ಶುರುಮಾಡಿದರು.


ಇದನ್ನೂ ಓದಿ: Gandhada Gudi: ತಮ್ಮ ಊಟದ ತಟ್ಟೆ ತಾವೇ ತೊಳೆಯುತ್ತಿದ್ದ ಪುನೀತ್‌! ಇದು ʻರಾಜರತ್ನʼನ ಸರಳತೆ


ಕರ್ನಾಟಕರತ್ನ ಡಾ.ಪುನೀತ್ ರಾಜ್‍ಕುಮಾರ್ ನಟನೆಯ ಅಪ್ಪು, ಅಭಿ, ವೀರಕನ್ನಡಿಗ, ಆಕಾಶ್, ಅಜಯ್, ಅರಸು, ಮಿಲನ, ವಂಶಿ, ರಾಮ್, ಪೃಥ್ವಿ, ಜಾಕಿ, ಹುಡುಗರು, ಅಣ್ಣಾ ಬಾಂಡ್, ಪವರ್,  ರಣವಿಕ್ರಮ, ದೊಡ್ಮನೆ ಹುಡುಗ, ರಾಜಕುಮಾರ ಯುವರತ್ನ, ಜೇಮ್ಸ್ ಸೇರಿದಂತೆ ಇತರ ಹಲವು ಚಲನಚಿತ್ರಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಅವರು ಕನ್ನಡ ಚಿತ್ರರಂಗದ ಪ್ರಮುಖ ಹಾಗೂ ಅತ್ಯಂತ ಯಶಸ್ವಿ ನಾಯಕನಟರಾಗಿದ್ದರು.


ಹೀಗೆ ಸಾಲು ಸಾಲು ಸಿನಿಮಾ ಮಾಡಿ ಜನಮನ ಗೆದ್ದ ನಟ ಪುನೀತ್ ರಾಜ್‍ಕುಮಾರ್ ರಿಯಲ್ ಲೈಫ್‍ನಲ್ಲೂ ಎಲ್ಲರಿಗೆ ಹೀರೋ ಆಗಿದ್ದರು. ಬಲಗೈಯಲ್ಲಿ ಮಾಡಿದ ಕೆಲಸ ಎಡಗೈಗೆ ಗೊತ್ತಾಗದ ಹಾಗೇ ಜನ ಸೇವೆಯೇ ಜನಾರ್ದನ ಸೇವೆ ಅಂತಾ ಭಾವಿಸಿ ಅದೆಷ್ಟೋ ಜನರ ಪಾಲಿಗೆ ದೇವರಾಗಿದ್ದರು. ಆದ್ರೆ ಅಕ್ಟೋಬರ್ 2020ರಂದು ಭೂಮಿ ಮೇಲಿದ್ದ ಅದೆಷ್ಟೋ ಹೂವುಗಳನ್ನು ಬೇಡವೆಂದ ಆ ದೇವರು ‘ಬೆಟ್ಟದ ಹೂ’ವೇ ನನಗೆ ಬೇಕು ಅಂತಾ ತೆಗೆದುಕೊಂಡುಬಿಟ್ಟರು. ಭರ್ತಿ 1 ವರ್ಷ ಇಡೀ ಕರ್ನಾಟಕ, ಇಡೀ ದೇಶಕ್ಕೆ ಸೂತಕ ಅಂಟಿತ್ತು.ಇವತ್ತಿಗೂ ಆ ಸೂತಕ ಕೊನೆಯಾಗಿಲ್ಲ. ಅಪ್ಪು ನೆನಪಲ್ಲಿ ಅದೆಷ್ಟೋ ಮಂದಿ ಉಸಿರು ನಿಲ್ಲಿಸಿಕೊಂಡರು. ಅಪ್ಪು ಇಲ್ಲದ ಮೇಲೆ ಈ ಭೂಮಿ ಮೇಲೆ ನಮಗೇನ್ ಕೆಲಸ ಅಂತ ಅದೆಷ್ಟೋ ಮಂದಿ ಅವರ ಹಿಂದೆಯೇ ಹೊರಟೆಬಿಟ್ಟಿದ್ದಾರೆ. ವಿಧಿಯಾಟಕ್ಕೆ ಹೊಣೆ ಯಾರು ಅಲ್ಲವೇ..?


ಇದನ್ನೂ ಓದಿ: ಜೀ ಕನ್ನಡದಿಂದ ಅಭಿಮಾನದ ಅಪ್ಪು ಪುತ್ಥಳಿ ಅನಾವರಣ


ಆದ್ರೆ ಒಂದಂತೂ ಸತ್ಯ ‘ಅಪ್ಪು’ ನಡೆದ ಹಾದಿಯಲಿ ಅದೆಷ್ಟೋ ಮಂದಿ ನಡೆಯುತ್ತಿದ್ದಾರೆ. ಕರುನಾಡ ರಾಜರತ್ನ ತೋರಿಸಿಕೊಟ್ಟ ಹಾದಿಯಲ್ಲೇ ಸಾಗುತ್ತಿದ್ದಾರೆ. ಇದಕ್ಕಿಂತ ಇನ್ನೇನು ಬೇಕು..? ಇವತ್ತು ಪ್ರತಿಯೊಬ್ಬರ ಮನೆ, ಮನದಲ್ಲಿ ‘ಅಪ್ಪು’ ದೇವರಾಗಿ ಅಮರರಾಗಿದ್ದಾರೆ. ಈ ಭೂಮಿ, ಆಕಾಶ ಇರೋವರೆಗೂ ‘ಅಪ್ಪು’ ಹೆಸರು ಶಾಶ್ವತವಾಗಿರುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ