ಪುನೀತ್ ಶಾಶ್ವತ ರಾಯಭಾರಿಯಾಗಲಿ: ಮಕ್ಕಳಿಗೆ ʻಗಂಧದ ಗುಡಿʼ ಉಚಿತ ವೀಕ್ಷಣೆ ಅವಕಾಶಕ್ಕೆ ಎಎಪಿ ಆಗ್ರಹ
ಖ್ಯಾತ ಸಿನಿಮಾ ನಟ ಡಾ. ಪುನೀತ್ ರಾಜ್‌ಕುಮಾರ್‌ರವರನ್ನು ರಾಜ್ಯ ಪ್ರವಾಸೋದ್ಯಮದ ಶಾಶ್ವತ ರಾಯಭಾರಿ ಎಂದು ಘೋಷಿಸಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಬೆಂಗಳೂರು: ಖ್ಯಾತ ಸಿನಿಮಾ ನಟ ಡಾ. ಪುನೀತ್ ರಾಜ್‌ಕುಮಾರ್‌ರವರನ್ನು ರಾಜ್ಯ ಪ್ರವಾಸೋದ್ಯಮದ ಶಾಶ್ವತ ರಾಯಭಾರಿ ಎಂದು ಘೋಷಿಸಿ, ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಹೇಳಿದರು.
ಇದನ್ನೂ ಓದಿ: ಅಪ್ಪು ಮುಡಿಗೆ ʼಕರ್ನಾಟಕ ರತ್ನʼ : ಗೆಳೆಯನ ಕಾರ್ಯಕ್ರಮದಲ್ಲಿ ಎನ್‌ಟಿಆರ್ ಭಾಗಿ..!
ಮಾಧ್ಯಮಗಳ ಜೊತೆ ಮಾತನಾಡಿದ ಮೋಹನ್ ದಾಸರಿ, “ರಾಜ್ಯದ ಪ್ರವಾಸೋದ್ಯಮವು ಕಳೆದ ಹತ್ತಾರು ವರ್ಷಗಳಲ್ಲಿ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಬಹತೇಕ ಪ್ರವಾಸಿ ತಾಣಗಳಲ್ಲಿ ಮೂಲಸೌಕರ್ಯಗಳ ಕೊರೆತೆಯಿದೆ. ಪ್ರವಾಸಿ ತಾಣಗಳಿಗೆ ಜನರನ್ನು ಆಕರ್ಷಿಸಲು ಸರ್ಕಾರ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ನಟ ಪುನೀತ್ ರಾಜ್‌ಕುಮಾರ್‌ರವರಿಗೆ ಪ್ರವಾಸಿ ತಾಣಗಳ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿ ಇದ್ದಿದ್ದರಿಂದ, ಅವರನ್ನು ಪ್ರವಾಸೋದ್ಯಮದ ಶಾಶ್ವತ ರಾಯಭಾರಿಯಾಗಿ ಘೋಷಿಸಬೇಕು. ಪುನೀತ್ ಸ್ಮರಣಾರ್ಥ ಪ್ರವಾಸೋದ್ಯಮ ಅಭಿವೃದ್ಧಿಗೆ ಕಾಲಕ್ಕೆ ತಕ್ಕಂತಹ ಯೋಜನೆಗಳನ್ನು ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಿಜೆಪಿ ಸರ್ಕಾರದ ಬಂದ್ಮೇಲೆ ದ್ವೇಷ ಹೆಚ್ಚಿದೆ, RSS ಕಾನೂನು ಕೈಗೆತ್ತಿಕೊಂಡಿದೆ
“ಪುನೀತ್ ರಾಜ್‌ಕುಮಾರ್‌ರವರ ಕೊನೆಯ ಸಿನಿಮಾ ʻಗಂಧದ ಗುಡಿʼ ಪರಿಸರ ಕಾಳಜಿ ಹೊಂದಿದೆ. ವಿಶೇಷವಾಗಿ ಮಕ್ಕಳು ಈ ಸಿನಿಮಾವನ್ನು ನೋಡಬೇಕಿದೆ. ಗಂಧದ ಗುಡಿ ವೀಕ್ಷಣೆಯಿಂದ ಮಕ್ಕಳಲ್ಲಿ ಕಾಡು ಹಾಗೂ ವನ್ಯಜೀವಿಗಳ ಮೇಲೆ ಬಗ್ಗೆ ಜ್ಞಾನ ಹೆಚ್ಚಾಗುತ್ತದೆ. ಆದ್ದರಿಂದ ಶಾಲಾ ಮಕ್ಕಳಿಗೆ ಗಂಧದ ಗುಡಿ ಸಿನಿಮಾವನ್ನು ಉಚಿತವಾಗಿ ತೋರಿಸಲು ಸರ್ಕಾರ ವ್ಯವಸ್ಥೆ ಕಲ್ಪಿಸಬೇಕು. ಆಗ ಮಾತ್ರ ನಟ ಪುನೀತ್ ರಾಜ್‌ಕುಮಾರ್ ಹಾಗೂ ಚಿತ್ರತಂಡದ ಶ್ರಮ ಸಾರ್ಥಕವಾಗುತ್ತದೆ” ಎಂದು ಮೋಹನ್ ದಾಸರಿ ಹೇಳಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ