Pushpa 2 Allu Arjun life : ಚಿತ್ರರಂಗದಲ್ಲಿ ಅತಿ ಹೆಚ್ಚು ಪ್ರಸಿದ್ದರಾಗಿರುವ ನಾಯಕ ನಟರಲ್ಲಿ ಈ ನಟರೂ ಸಹ ಒಬ್ಬರು. ದೊಡ್ಡ ಕುಟುಂಬದ ಹಿನ್ನೆಲೆಯಿಂದ ಬಂದ ನಟ ಮೊದಲ ಸಿನಿಮಾದಲ್ಲೇ ಸೂಪರ್ ಹಿಟ್ ಪಡೆದರು. ಆದರೆ ಆ ನಂತರ ಒಳ್ಳೆಯ ಚಿತ್ರಗಳು ಮತ್ತು ಅವಕಾಶಗಳು ಬರಲಿಲ್ಲ. ಅಲ್ಲದೆ, ತಮ್ಮ ಲುಕ್‌ನಿಂದ ಸಾಕಷ್ಟು ಅವಮಾನ ಅನುಭವಿಸಬೇಕಾಯಿತು.


COMMERCIAL BREAK
SCROLL TO CONTINUE READING

ಆ ನಟ ಬೇರೆ ಯಾರೂ ಅಲ್ಲ ನಮ್ಮ ಐಕಾನಿಕ್ ಸ್ಟಾರ್ ಅಲ್ಲು ಅರ್ಜುನ್. ಬನ್ನಿ ನಟನೆಯ ಮೊದಲ ಸಿನಿಮಾ ಗಂಗೋತ್ರಿಯಲ್ಲಿ ಹಿಟ್ ಆದರೂ ಸಹ ಆ ಸಮಯದಲ್ಲಿ ಉತ್ತಮ ಅವಕಾಶಗಳು ಸಿಗಲಿಲ್ಲ ಸ್ವತಃ ಅರ್ಜುನ್‌ ಹೇಳಿಕೊಂಡಿದ್ದರು. ಲವರ್ ಬಾಯ್ ಆಗಿ ಅಲ್ಲು ಅರ್ಜುನ್ ಅಭಿನಯದ ‘ಆರ್ಯ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 20 ವರ್ಷ. ಈ ಸಂದರ್ಭದಲ್ಲಿ ಚಿತ್ರತಂಡ ಮಾಧ್ಯಮ ಸಭೆ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಮ್ಮ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.


ಇದನ್ನೂ ಓದಿ:ತಾಂಡೇಲ್‌ To ರಾಮಾಯಣ ನಟಿ ಸಾಯಿ ಪಲ್ಲವಿ ಮುಂಬರುವ ಬಹುನಿರೀಕ್ಷಿತ ಸಿನಿಮಾಗಳಿವು..! ಲಿಸ್ಟ್‌ ಇಲ್ಲಿದೆ


ಗಂಗೋತ್ರಿ ಸೂಪರ್‌ ಹಿಟ್ ಆಗಿದ್ದರೂ ಅಷ್ಟೊಂದು ಮನ್ನಣೆ ಸಿಗಲಿಲ್ಲ. ಆ ಸಿನಿಮಾದಲ್ಲಿ ನನ್ನ ಲುಕ್ ಮತ್ತು ಎಕ್ಸ್‌ಪ್ರೆಶನ್ ಕೆಲವರಿಗೆ ಇಷ್ಟವಾಗಲಿಲ್ಲ, ಹಾಗಾಗಿ ಒಳ್ಳೆಯ ಆಫರ್‌ಗಳು ಬರಲಿಲ್ಲ ಅಂತ ಸ್ವತಃ ಅಲ್ಲು ಅರ್ಜುನ್‌ ಹೇಳಿಕೊಂಡಿದ್ದಾರೆ. ಅಲ್ಲದೆ, ರವಿತೇಜ ಅಭಿನಯದ ‘ಈಡಿಯಟ್’ ಸಿನಿಮಾ ನೋಡಿದಾಗ ಇಂಥ ಕೂಲ್ ಸಿನಿಮಾದಲ್ಲಿ ನಟಿಸಬೇಕು ಅಂತ ಆಸೆಯಾಯಿತು. ಆ ಆಸೆ ʼಆರ್ಯʼ ಸಿನಿಮಾದಿಂದ ನೆರವೇರಿತು ಅಂತ ಹೇಳಿದರು.


ಪುಷ್ಪ-2 ಮೂಲಕ ಶೀಘ್ರದಲ್ಲೇ ಬನ್ನಿ ಹೊಸ ಹಿಸ್ಟರ್‌ ಕ್ರಿಯೇಟ್‌ ಮಾಡಲಿದ್ದಾರೆ. ಸ್ಟಾರ್‌ ಡೈರೆಕ್ಟರ್‌ ಸುಕುಮಾರ್ ನಿರ್ದೇಶನದ ಈ ಸಿನಿಮಾ ಆಗಸ್ಟ್ 15 ರಂದು ತೆರೆಗೆ ಬರಲಿದೆ. ತ್ರದಲ್ಲಿ ರಶ್ಮಿಕಾ ಮಂದಣ್ಣ, ಫಹದ್ ಫಾಸಿಲ್, ವಿಜಯ್ ಸೇತುಪತಿ, ಶ್ರೀತೇಜ್ ಮತ್ತು ಪ್ರಿಯಾಮಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.