ʻಪುಷ್ಪ-2ʼ ನೋಡಿದ್ಮೇಲೆ ಪಾರ್ಟ್ 3 ಯಾವಾಗ ಸ್ವಾಮಿ ಅಂತೀರಾ. .? ಡೈರೆಕ್ಟರ್ ಸುಕುಮಾರ್ ಮತ್ತು ಅಲ್ಲು ಅರ್ಜುನ್ಗೆ ಬಿಗ್ ಸಲ್ಯೂಟ್
Pushpa 2 review: ಪುಷ್ಪ ಪಾರ್ಟ್ 1 ಬಂದ ಬಳಿಕ ಸಿನಿಮಾ ರಸಿಕರು ಪಾರ್ಟ್ 2 ಯಾವಾಗ ಅಂತ ಕೇಳ್ತಾ ಇದ್ದರು. ಫೈನಲಿ ಪಾರ್ಟ್ 2 ತೆರೆಮೇಲೆ ಭರ್ಜರಿಯಾಗಿ ಅಬ್ಬರಿಸಿದೆ. ಪಾರ್ಟ್ 2 ನೋಡಿದ ಫ್ಯಾನ್ಸ್ ನಿದ್ದೆ ಬಿಟ್ಟು ಪಾರ್ಟ್ 3ಗೆ ಕಾಯೋದು ಕನ್ಫರ್ಮ್. ‘ಭಾಗ 3 ಪುಷ್ಪ ದಿ ರೈಸಿಂಗ್‘ ಅಂತ ಸಿನಿಮಾಭಿಮಾನಿಗಳು ಕೇಳಲು ಶುರು ಮಾಡಿಬಿಡುತ್ತಾರೆ. ಯೆಸ್ ಡಿಸೆಂಬರ್ 5 ಯಾವಾಗ ಬರುತ್ತೆ ಅಂತ ಕಾದ ಅಲ್ಲು ಅರ್ಜುನ್ ಫ್ಯಾನ್ಸ್ “ಪುಷ್ಪ 2” ನೋಡಿ ಸಂಭ್ರಮಿಸಿದ್ದಾರೆ.
Pushpa 2 review: ಪುಷ್ಪ ಪಾರ್ಟ್ 1 ಬಂದ ಬಳಿಕ ಸಿನಿಮಾ ರಸಿಕರು ಪಾರ್ಟ್ 2 ಯಾವಾಗ ಅಂತ ಕೇಳ್ತಾ ಇದ್ದರು. ಫೈನಲಿ ಪಾರ್ಟ್ 2 ತೆರೆಮೇಲೆ ಭರ್ಜರಿಯಾಗಿ ಅಬ್ಬರಿಸಿದೆ. ಪಾರ್ಟ್ 2 ನೋಡಿದ ಫ್ಯಾನ್ಸ್ ನಿದ್ದೆ ಬಿಟ್ಟು ಪಾರ್ಟ್ 3ಗೆ ಕಾಯೋದು ಕನ್ಫರ್ಮ್. ‘ಭಾಗ 3 ಪುಷ್ಪ ದಿ ರೈಸಿಂಗ್‘ ಅಂತ ಸಿನಿಮಾಭಿಮಾನಿಗಳು ಕೇಳಲು ಶುರು ಮಾಡಿಬಿಡುತ್ತಾರೆ. ಯೆಸ್ ಡಿಸೆಂಬರ್ 5 ಯಾವಾಗ ಬರುತ್ತೆ ಅಂತ ಕಾದ ಅಲ್ಲು ಅರ್ಜುನ್ ಫ್ಯಾನ್ಸ್ “ಪುಷ್ಪ 2” ನೋಡಿ ಸಂಭ್ರಮಿಸಿದ್ದಾರೆ.
ಜಪಾನಿನ ಬಂದರಿನಲ್ಲಿ ಸಖತ್ ವಿಭಿನ್ನ ಅನ್ನಿಸೋ ರೀತಿಯಲ್ಲಿ ಅಲ್ಲು ಅವತಾರ ಶುರುವಾಗುತ್ತೆ. ಎಂಟ್ರಿ ಫುಲ್ ಆಕ್ಷನ್ & ಫುಲ್ ಥ್ರಿಲ್. .ಆಕ್ಷನ್ ಇಷ್ಟಪಡೋ ಮಂದಿಗೆ ಕಿಕ್ಕೋ ಕಿಕ್ಕು. ಪುಷ್ಪ ಮೊದಲ ಭಾಗ ನೋಡಿದವರಿಗೆ ಶೇಖಾವತ್ ಪಾತ್ರ ತುಂಬಾ ಮಜಾ ಕೊಟ್ಟಿತ್ತು. ಪಾರ್ಟ್ 2 ನಲ್ಲೂ ಶೇಖಾವತ್ ಪಾತ್ರದಲ್ಲಿ ನಟಿಸಿರುವ ಫಹಾದ್ ಫಾಸಿಲ್ ನಿಮ್ಮನ್ನ ಹುಚ್ಚರಂತೆ ಕಾಡಿ ನೆನಪಿನಲ್ಲಿ ಉಳಿಯೋ ರೀತಿ ಮಾಡಿಬಿಡುತ್ತಾರೆ. ಅಷ್ಟೂ ಅದ್ಭುತವಾಗಿ ಅಲ್ಲು ಅರ್ಜುನ್ ಮತ್ತು ಫಹಾದ್ ಫಾಸಿಲ್ ಪಾತ್ರ ಸ್ಕ್ರೀನ್ ಮೇಲೆ ನಮ್ಮನ್ನ ರಂಜಿಸುತ್ತೆ.
3 ಗಂಟೆ 20ನಿಮಿಷದ ಈ ಸಿನಿಮಾ ಹೇಗಿರುತ್ತೋ ಮತ್ತು ಬೋರ್ ಆಗಬೋದು ಅಂತ ಮಾತಾಡೋರು ಮೂಗ ಮೇಲೆ ಬೆರಳಿಟ್ಟು ಇಷ್ಟು ಬೇಗ ಸಿನಿಮಾ ಮುಗಿತಾ ಅಂತ ಮುಖಮುಖ ನೋಡಿಕೊಳ್ಳೋದು ಕನ್ಫರ್ಮ್. ಡೈರೆಕ್ಟರ್ ಸುಕುಮಾರ್ ಅವರಿಗೆ ಎದ್ದು ನಿಂತು ನಮಸ್ಕಾರ ಮಾಡಬೇಕು ಅನಿಸಿಬಿಡುತ್ತೆ. ಎಲ್ಲೂ ಕೂಡ ಬೋರು ಅನಿಸದ ರೀತಿ ಸಿನಿಮಾ ಸಾಗುತ್ತೆ. ಪೀಲಿಂಗ್ಸ್ ಸಾಂಗ್ನ ದೊಡ್ಡ ಪರದೆ ಮೇಲೆ ನೋಡೋದೇ ಚಂದ. ಶ್ರೀಲೀಲಾ ಡಾನ್ಸ್ ಅಬ್ಬಬ್ಬಾ ವರ್ಣಿಸಲು ಪದಗಳು ಇಲ್ಲ. ಕಂಪ್ಲೀಟ್ ಪುಷ್ಪ ಪಾರ್ಟ್ 2 ನಮ್ಮನ್ನ ಅಳಿಸುತ್ತೆ, ನಗಿಸುತ್ತೆ, ಸೀಟಿನ ಅಂಚಿನಲ್ಲಿ ಕೂರಿಸುತ್ತೆ.
ಪುಷ್ಪ ಪಾರ್ಟ್ 2 ನಲ್ಲಿ ಪುಷ್ಪ ನ್ಯಾಷನಲ್ ಲೆವೆಲ್ ಅಲ್ಲ. .ಇಂಟರ್ನ್ಯಾಷನಲ್ ಲೆವೆಲ್ ಗೆ ಹವಾ ಇಟ್ಟಿದ್ದಾನೆ. ಇಡೀ ರಾಜ್ಯವನ್ನ ಮತ್ತು ರಾಜಕಾರಣಿಗಳನ್ನ ತನ್ನ ಕಂಟ್ರೋಲ್ ನಲ್ಲಿ ಇಟ್ಟುಕೊಂಡಿರುತ್ತಾನೆ ಪುಷ್ಪ. ಪುಷ್ಪರಾಜ್ ಆಸೆಯಂತೆ ಮನೆತನದ ಹೆಸರು ಈತನಿಗೆ ಸಿಗುತ್ತೆ.
ಮನೆತನದ ಹೆಸರು ಹೇಗೆ ಸಿಗ್ತು ಅನ್ನೋದನ್ನ ಬಿಗ್ ಸ್ಕ್ರೀನ್ ಮೇಲೆ ನೀವು ನೋಡಿ. ಜಗಪತಿ ಬಾಬು ಪಾತ್ರ ಕೂಡ ನೆಕ್ಸ್ಟ್ ಲೆವೆಲ್ ಅನಿಸುತ್ತೆ. ಡಾಲಿ ಎಂಟ್ರಿ ಕೊನೆಗೆ ಆಗುತ್ತೆ. ಕ್ಲೈಮಾಕ್ಸ್ ನಲ್ಲಿ ಬರೋ ಫೈಟ್ ನಮ್ಮ ಮೈ ನಡುಗಿಸಿ ಬೆವರು ಇಳಿಸುತ್ತೆ. ದೇವಿ ಮೈಮೇಲೆ ಬಂದಂತೆ ವಿಲನ್ ಗಳ ರುಂಡ ಚೆಂಡಾಡಿ ಬಿಡುತ್ತಾನೆ ಪುಷ್ಪಾರಾಜ್. ಕ್ಲೈಮಾಕ್ಸ್ ಫೈಟ್ ಗೆ ಭಾವನಾತ್ಮಕ ಅಂಶ ಕಾರಣವಾಗುತ್ತೆ. ಕೊನೆಯದಾಗಿ ಸಿನಿಮಾದಲ್ಲಿ ದೊಡ್ಡ ಗಂಡಾಂತರ ಎದುರಾಗೋದ್ರ ಜೊತೆಗೆ ಪಾರ್ಟ್ 3ಗೆ ಎಂಟ್ರಿ ಸಿಗುತ್ತೆ. ಅದು ಹೇಗಿರುತ್ತೆ ಅನ್ನೋದನ್ನ ನೀವೇ ನೋಡಿ. ಒಟ್ಟಿನಲ್ಲಿ ಪುಷ್ಪ 2 ಸಿನಿಮಾ ಬೇರೆ ಲೆವೆಲ್ಲಿಗೆ ಇದೆ. ನಿಮ್ಮನ್ನ ಪಕ್ಕಾ ಕಾಡುತ್ತೆ. ಮನರಂಜಿಸುತ್ತೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.