ಬೆಂಗಳೂರು : ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರ ಮೆಗಾ ಹಿಟ್ ಆಗಿತ್ತು. ಇದೀಗ ಪುಷ್ಪ 2 ಚಿತ್ರದ ಶೂಟಿಂಗ್ ಶುರುವಾಗಿದ್ದು ಚರ್ಚೆಗೆ ಕಾರಣವಾಗಿದೆ. ಹೆಚ್ಚು ಪ್ರಚಾರದಲ್ಲಿರುವ ಪುಷ್ಪ 2 ಚಿತ್ರವು ರಾಮೋಜಿ ಫಿಲ್ಮ್ ಸಿಟಿಯಲ್ಲಿ ತನ್ನ ಸಂಪೂರ್ಣ ಚಿತ್ರೀಕರಣವನ್ನು ಪ್ರಾರಂಭಿಸಿದೆ. ಇದಕ್ಕಾಗಿ ವಿಶೇಷ ಸೆಟ್ ರಚಿಸಲಾಗಿದೆ. ಅದರಲ್ಲಿ ಸಿನಿಮಾದ ಪ್ರಮುಖ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಈ ದೃಶ್ಯಗಳಲ್ಲಿ ಅಲ್ಲು ಅರ್ಜುನ್ ಇರಲಿಲ್ಲ. ಬನ್ನಿ ಡಿಸೆಂಬರ್ ನಿಂದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಪುಷ್ಪ 2 ಚಿತ್ರದಲ್ಲಿನ ಅದ್ಭುತ ದೃಶ್ಯಕ್ಕಾಗಿ ಚಿತ್ರತಂಡ ಥಾಯ್ಲೆಂಡ್‌ಗೆ ಹೋಗಲಿದೆಯಂತೆ. ಕಾಡಿನಲ್ಲಿ ಹುಲಿಯೊಂದಿಗೆ ಕಾದಾಡುವ ದೃಶ್ಯವನ್ನು ಥಾಯ್ಲೆಂಡ್‌ನ ಕಾಡುಗಳಲ್ಲಿ ಚಿತ್ರೀಕರಿಸಲಾಗುತ್ತದೆ. ಈ ದೃಶ್ಯ ಜೂನಿಯರ್ ಎನ್ ಟಿಆರ್‌ರ ಆರ್‌ಆರ್‌ಆರ್ ಚಿತ್ರದಲ್ಲಿ ಹುಲಿ ಜೊತೆಗಿನ ಕಾದಾಟದ ದೃಶ್ಯವನ್ನು ನೆನಪಿಸುತ್ತದೆ. ಪುಷ್ಪ ಮೆಗಾ ಹಿಟ್ ಆಗುತ್ತಿದ್ದಂತೆಯೇ ಪುಷ್ಪ 2 ಅನ್ನು ಇನ್ನಷ್ಟು ದೊಡ್ಡದಾಗಿ ಮಾಡಲು ನಿರ್ದೇಶಕರು ಮತ್ತು ನಿರ್ಮಾಪಕರು ನಿರ್ಧರಿಸಿದ್ದಾರೆ. ಖರ್ಚು ಮಾಡುವ ವಿಚಾರದಲ್ಲೂ ಸುಕುಮಾರ್ ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ವರದಿಯಾಗಿದೆ. 


ಇದನ್ನೂ ಓದಿ: 'ದೂರದರ್ಶನ' ದಲ್ಲಿ ವಾಸುಕಿ ವೈಭವ್ ಚಿತ್ರಗೀತೆ.! 'ಕಣ್ಣು ಕಣ್ಣು ಕಾದಾಡುತ ಇರಲಿ' ಹಾಡು ಬಿಡುಗಡೆ


ಪುಷ್ಪ 1 ಚಿತ್ರ 2021 ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿದೆ. ಈಗ ಪುಷ್ಪ 2 ಅನ್ನು ಡಿಸೆಂಬರ್ 2023 ರ ವೇಳೆಗೆ ಬಿಡುಗಡೆ ಮಾಡಲು ಯೋಜಿಸಲಾಗಿದೆ. ಒಂದಷ್ಟು ಹೊಸ ಪಾತ್ರಗಳು ಸಿನಿಮಾದಲ್ಲಿ ಸೇರಿಕೊಂಡಿವೆ. ಪುಷ್ಪ 2 ಚಿತ್ರದಲ್ಲಿ ಫಹಾದ್ ಫಾಜಿಲ್, ಅನಸೂಯ, ಸುನೀಲ್, ರಶ್ಮಿಕಾ ಮಂದಣ್ಣ ಕೂಡ ಕಾಣಿಸಿಕೊಳ್ಳಲಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.