Allu Arjun VS Prabhas: ಪುಷ್ಪ 1 ಎಷ್ಟು ದೊಡ್ಡ ಹಿಟ್ ಆಗಿತ್ತು ಎಂಬುದು ಎಲ್ಲರಿಗೂ ಗೊತ್ತು. ಈ ಸಿನಿಮಾ ಹಿಂದಿ ಹಾಗೂ ತೆಲುಗಿನಲ್ಲಿ ಸಖತ್‌ ಸೌಂಡ್‌ ಮಾಡಿತ್ತು. ಇನ್ನು ಪುಷ್ಪ 2 ಚಿತ್ರದ ವಿಚಾರಕ್ಕೆ ಬಂದರೆ.. ಈ ಸಿನಿಮಾದಲ್ಲಿ ಫಹದ್ ಫಾಜಿಲ್ ವಿಲನ್ ಆಗಿ ನಟಿಸುತ್ತಿದ್ದು, ಅಲ್ಲು ಅರ್ಜುನ್ ಜೊತೆ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಸುನೀಲ್, ರಾವ್ ರಮೇಶ್, ಧನುಂಜಯ ಮತ್ತು ಆ್ಯಂಕರ್ ಅನಸೂಯ ಇತರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಪುಷ್ಪ 2ಗಾಗಿ ಅಭಿಮಾನಿಗಳು ದೇಶಾದ್ಯಂತ ಮಾತ್ರವಲ್ಲದೆ ವಿಶ್ವದಾದ್ಯಂತ ಕುತೂಹಲದಿಂದ ಕಾಯುತ್ತಿದ್ದಾರೆ. ಅದರಂತೆ, ಚಲನಚಿತ್ರ ನಿರ್ಮಾಪಕರು ಒಂದೇ ಸಮಯದಲ್ಲಿ ವಿಶ್ವದಾದ್ಯಂತ ಬಹು ಭಾಷೆಗಳಲ್ಲಿ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಪ್ರಯತ್ನಿಸುತ್ತಿದ್ದಾರೆ. 


ಇದನ್ನೂ ಓದಿ-ನಟಿ ಕಂಗನಾ ರನೌತ್‌ ಒಬ್ಬ ʼಅತ್ಯುತ್ತಮ ನಿರ್ದೇಶಕಿʼ : ಅನುಪಮ್ ಖೇರ್ ಮೆಚ್ಚುಗೆ


ದಿ ರೂಲ್ (Pushpa 2: The Rule) ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದ್ದು, ರಷ್ಯಾ ಸೇರಿ 20ಕ್ಕೂ ಹೆಚ್ಚು ದೇಶಗಳಲ್ಲಿ ಏಕಕಾಲಕ್ಕೆ ಚಿತ್ರವನ್ನು ಬಿಡುಗಡೆ ಮಾಡುವ ಗುರಿ ಇದೆ ಎಂದು ವರದಿಯಾಗಿದೆ. ಈ ಹಿನ್ನಲೆಯಲ್ಲಿ ಚಿತ್ರ ವಿದೇಶದಲ್ಲಿ ಭಾರೀ ಹೈಫ್‌ ಕ್ರಿಯೆಟ್‌ ಮಾಡಿದೆ. ಸದ್ಯ ಪುಷ್ಪ 2 ಚಿತ್ರದ ವಿದೇಶಿ ಹಕ್ಕುಗಳು 100 ಕೋಟಿಗೆ ಸೇಲ್‌ ಆಗಿವೆ ಎನ್ನಲಾಗುತ್ತಿದೆ.


ಮತ್ತೊಂದೆಡೆ, ಪ್ರಭಾಸ್ ಅವರ ಪ್ರತಿಷ್ಠಿತ ಚಿತ್ರ #ಸಲಾರ್ 72 ಕೋಟಿಗೆ ವಿದೇಶಿ ಹಕ್ಕುಗಳನ್ನು ಪಡೆದುಕೊಂಡಿದೆ. ಈಗ ಪುಷ್ಪ2 ರೈಟ್ಸ್ ರೇಟ್ ಫೈನಲ್ ಆಗದಿದ್ದರೂ ಅದು ದೊಡ್ಡ ಮೊತ್ತವೇ ಆಗಿದೆಯಂತೆ.


ಇದನ್ನೂ ಓದಿ-Ranbir Kapoor: ಸಿನಿಮಾಗಳಿಂದ ಬ್ರೇಕ್‌ ತೆಗೆದುಕೊಂಡ ಖ್ಯಾತ ಬಾಲಿವುಡ್‌ ನಟ..! ಕಾರಣ ಇದೇ   


ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಹೀರೋ ಆಗಿರುವ ಅಲ್ಲು ಅರ್ಜುನ್ ಸದ್ಯಕ್ಕೆ ಪ್ರತಿ ಚಿತ್ರಕ್ಕೆ 100 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಇದಲ್ಲದೇ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ತಮಿಳಿನ ಸ್ಟಾರ್ ಹೀರೋ ಸೂರ್ಯ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 


ಸೂರ್ಯ ಪಾತ್ರ ಚಿಕ್ಕದಾದರೂ... ಸಖತ್‌ ಕ್ರೇಜ್‌ ಹೆಚ್ಚಿಸುವಂತಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಸಿನಿಮಾದ ಮುಂದಿನ ಶೆಡ್ಯೂಲ್ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಪ್ಲಾನ್ ಮಾಡಲಾಗಿದ್ದು, ಹೈ ವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್‌ಗಳನ್ನು ಚಿತ್ರೀಕರಿಸಲು ಕ್ಷಣಗಣನೆ ಶುರುವಾಗಿದೆ ಎನ್ನಲಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.