Pushpa actor Jagadish arrest : ಸ್ಟೈಲಿಶ್‌ ಐಕಾನ್‌ ಅಲ್ಲು ಅರ್ಜುನ್‌ ನಟನೆಯ ಸುಕುಮಾರ್ ನಿರ್ದೇಶನದ ಪುಷ್ಪ ಚಿತ್ರ ವಿಶ್ವಾದ್ಯಂತ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಅಲ್ಲು ಅರ್ಜುನ್‌ಗೆ ರಾಷ್ಟ್ರ ಪ್ರಶಸ್ತಿಯನ್ನು ತಂದುಕೊಟ್ಟಿತು. ಇದೀಗ ಈ ಚಿತ್ರದಲ್ಲಿ ಬನ್ನಿ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಜಗದೀಶ್‌ನನ್ನು ಹೈದ್ರಾಬಾದ್‌ ಪೊಲೀಸರು ಬಂಧಿಸಿದ್ದು, ಅಭಿಮಾನಿಗಳಿಗೆ ಶಾಕ್‌ ನೀಡಿದೆ. 


COMMERCIAL BREAK
SCROLL TO CONTINUE READING

ಹೌದು.. ಪುಷ್ಪಾ ನಂತರ ಜಗದೀಶ್‌ಗೆ ಸಾಕಷ್ಟು ಆಫರ್‌ಗಳು ಬಂದವು. ಸಧ್ಯ ಸಾಲು ಸಾಲು ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಪುಷ್ಪಾ ಎರಡನೇ ಭಾಗದಲ್ಲಿ ಜಗದೀಶ್‌ಗೆ ಸುಕುಮಾರ್ ಮಹತ್ವದ ಪಾತ್ರ ನೀಡಿದ್ದರು ಎಂಬ ಸುದ್ದಿ ಹರಿದಾಡುತ್ತಿತ್ತು. ಇದರ ಬೆನ್ನಲ್ಲೆ ಪಂಜಗುಟ್ಟ ಪೊಲೀಸರು ಆತನನ್ನು ಬಂಧಿಸಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮಹಿಳೆಯೊಬ್ಬರ ಆತ್ಮಹತ್ಯೆ ಪ್ರಕರಣದಲ್ಲಿ ನಟನನ್ನು ಬಂಧಿಸಲಾಗಿದೆಯಂತೆ. 


ಇದನ್ನೂ ಓದಿ: ಜೀ5 ಒಟಿಟಿಯಲ್ಲಿ ‘ಘೋಸ್ಟ್’ ಧಮಾಕ.. 200 ಮಿಲಿಯನ್ ನಿಮಿಷ ಸ್ಟ್ರೀಮಿಂಗ್ ಕಂಡ ಶಿವಣ್ಣನ ಸಿನಿಮಾ..


ಪಂಜಗುಟ್ಟದಲ್ಲಿ ವಾಸಿಸುತ್ತಿದ್ದ ಮಹಿಳೆ ಸಿನಿಮಾದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ನಟಿಸುತ್ತಿದ್ದರು. ಕಳೆದ ತಿಂಗಳು 29 ರಂದು ಈ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡು ಪಂಜಗುಟ್ಟ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಮಹಿಳೆಯ ಸಾವಿಗೆ ಕಾರಣ ತಿಳಿದುಬಂದಿದೆ.


ಮೃತ ಮಹಿಳೆ ಒಬ್ಬ ಪುರುಷನೊಂದಿಗೆ ಖಾಸಗಿ ಸಮಯದಲ್ಲಿ ಇದ್ದಾಗ ನಟ ಜಗದೀಶ್ ಅವಳಿಗೆ ತಿಳಿಯದಂತೆ ಚಿತ್ರಗಳನ್ನು ತೆಗೆದಿದ್ದಾನೆ. ಅಲ್ಲದೆ, ಆ ಫೋಟೋಗಳನ್ನು ತೋರಿಸಿ ಆಕೆಗೆ ಬೆದರಿಕೆ ಹಾಕುತ್ತಿದ್ದರಿಂದ  ಮನನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: ಚಾಪ್ಟರ್‌ 3 ಕನ್ಫರ್ಮ್.. ಹಿರೋ ಯಶ್‌.. ಆದರೆ.. KGF ಚಿತ್ರದ ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದೇನು?!


ಸಧ್ಯ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಪಂಜಗುಟ್ಟ ಪೊಲೀಸರು ಜಗದೀಶ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದೇ ವೇಳೆ ಮಹಿಳೆ ಜಗದೀಶ್‌ಗೆ ಇತ್ತೀಚಿಗೆ ಪರಿಚಿತಳಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಕುರಿತು ಇನ್ನಷ್ಟು ಮಹತ್ವದ ಸಂಗತಿಗಳು ಹೊರಬರಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.