Pushpa Part-2 Update From Director Sukumar: ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್‌ ಅಭಿನಯದ 'ಪುಷ್ಪ- ದಿ ರೈಸ್' ಕಳೆದ ಎರಡು ವರ್ಷಗಳ ಹಿಂದೆ ತೆರೆಕಂಡು, ಬ್ಲಾಕ್‌ಬಸ್ಟರ್ ಆದ ನಂತರ ಟಾಲಿವುಡ್ ಮಂದಿಯ ಕಣ್ಣು 'ಪುಷ್ಪ-2 ದಿ ರೂಲ್‌' ಮೇಲಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ವಿಶ್ವ ಮಟ್ಟದಲ್ಲಿ ಹೇಗೆಲ್ಲ ಸದ್ದು ಮಾಡಬಹುದು ಹಾಗೂ ಅಲ್ಲು ಅರ್ಜುನ್ ಹೇಗೆ ಕಾಣಿಸಿಕೊಳ್ಳಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದ್ದು, ಇದಕ್ಕೆ ತಕ್ಕಂತೆ ಚಿತ್ರದ ನಿರ್ದೇಶಕ ಸುಕುಮಾರ್ ಇಂಟ್ರೆಸ್ಟಿಂಗ್ ಅಪ್‌ಡೇಟ್ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು.. ಟಾಲಿವುಡ್‌ನ ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ 'ಪುಷ್ಪ 2' ಸಿನಿಮಾ ಮೂಲಕ ನಿರೀಕ್ಷೆಯನ್ನು ಹುಟ್ಟಾಕಿದ್ದು, ಈಗಾಗಲೇ ಚಿತ್ರ ಶುರುವಾಗಿ ಮುಗಿಯುವ ಹಂತಕ್ಕೆ ಬಂದಿದ್ದರೂ, ಹೆಚ್ಚಿನ ಮಾಹಿತಿಯನ್ನು ಎಲ್ಲಿಯೂ ಮಾತನಾಡಿಲ್ಲ. ಇಷ್ಟೊತ್ತಿಗಾಗಲೇ 'ಪುಷ್ಪ  ಪಾರ್ಟ್‌-2' ಸಿನಿಮಾ ರಿಲೀಸ್ ಆಗಬಹುದು ಅಂತ ನಿರೀಕ್ಷೆ ಇಟ್ಟುಕೊಂಡಿದ್ದ ಅಲ್ಲು ಫ್ಯಾನ್ಸ್‌ ನಿರಾಸೆಯಾಗಿದೆ. ಕಳೆದ ವರ್ಷ ಪುಷ್ಪ- 2 ಸಿನಿಮಾದ ಲುಕ್‌, ಚಿಕ್ಕ ಗ್ಲಿಂಪ್ಸ್‌ ರಿವೀಲ್ ಮಾಡಿದ್ದು ಬಿಟ್ಟರೆ ಬೇರೆ ಏನೂ ಸುಳಿವು ನೀಡಿಲ್ಲ. ಅದಕ್ಕೆ ಅಲ್ಲು ಅರ್ಜುನ್ ಅಭಿಮಾನಿಗಳಿಗಾಗಿ ನಿರ್ದೇಶಕ ಸುಕುಮಾರ್ ಕುತೂಹಲ ಕೆರಳಿಸುವ ಹೇಳಿಕೆಯನ್ನು ಕೊಟ್ಟಿದ್ದಾರೆ. 


ಇದನ್ನೂ ಓದಿ: ಮತ್ತೆ ನಾಗ ಚೈತನ್ಯ ಜತೆ ನಟಿಸುತ್ತಾರಾ ಸಮಂತಾ? ಒಂದೇ ಸಿಕ್ವೇಲ್‌ನಲ್ಲಿ ಚೈ-ಸ್ಯಾಮ್!?‌


ಇತ್ತೀಚೆಗೆ ಸಂದರ್ಶನದಲ್ಲಿ ಸುಕುಮಾರ್ 'ಪುಷ್ಪ 2' ಬಗ್ಗೆ ಮಾಹಿತಿ ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.'ಪುಷ್ಪ 2' ಸ್ಕೇಲ್ ಬದಲಾಗಿ, ಸಿನಿಮಾದ ಬಜೆಟ್ ದುಪ್ಪಟ್ಟಾಗಿದೆ. 'ಪುಷ್ಪ' ಪಾರ್ಟ್ 1ರಲ್ಲಿ ಅಲ್ಲು ಅರ್ಜುನ್ ಮ್ಯಾನರಿಸಂ ಹೈಲೈಟ್ ಆಗಿದ್ದು, ಅದೇ ನಿರೀಕ್ಷೆ 'ಪುಷ್ಪ 2' ಮೇಲೂ ಇದೆ. ಹೀಗಾಗಿ ನಿರ್ದೇಶಕ ಸುಕುಮಾರ್ ಸ್ಕ್ರಿಪ್ಟ್ ಮೇಲೆ ಮತ್ತೆ ವರ್ಕ್ ಮಾಡಿದ್ದು, ಆದರೆ ಚಿತ್ರ ಅಂದುಕೊಂಡಿದ್ದಕ್ಕಿಂತ ಹೆಚ್ಚು ದಿನ ಹಿಡಿದಿದೆ. ಹೀಗಾಗಿ 'ಪುಷ್ಪ 2' ನೋಡುವುದಕ್ಕೆ ತೆಲುಗು ಮಂದಿ ಕಾದು ಕೂತಿದ್ದಾರೆ. 


'ಪುಷ್ಪ-2 ದಿ ರೂಲ್‌' ಸಿನಿಮಾಗಾಗಿ ಕಾದೂ ಕಾದು ಸುಸ್ತಾಗಿರೋ ಫ್ಯಾನ್ಸ್‌ಗೆ ಡೈರೆಕ್ಟರ್‌ ಸುಕುಮಾರ್ ಐಕಾನ್ ಸ್ಟಾರ್  ಅಭಿಮಾನಿಗಳಿಗೆ ಭರವಸೆಗಳನ್ನು ನೀಡಿದ್ದಾರೆ. ಅದೇನೆಂದರೇ 'ಪುಷ್ಪ' ಚಿತ್ರಗಿಂತ 'ಪುಷ್ಪ 2' ಅದ್ಧೂರಿಯಾಗಿರುತ್ತೆ ಎಂದು ಭರವಸೆ ನೀಡುವುದರ ಜೊತೆಗೆ, ಅಲ್ಲು ಅರ್ಜುನ್ ಹಾಗೂ ಫಹಾದ್ ಫಾಸಿಲ್ ನಡುವಿನ ಆಕ್ಷನ್ ದೃಶ್ಯಗಳು ಇನ್ನೊಂದು ಲೆವೆಲ್‌ಗೆ ಇರುತ್ತೆ ಎಂದು ಹೇಳಿಕೊಂಡಿದ್ದಾರೆ.'ಪುಷ್ಪ 2'ನಲ್ಲಿ ಅಲ್ಲು ಅರ್ಜುನ್ ಎದುರಿಸುವ ಸಮಸ್ಯೆಗಳು, ಅದನ್ನು ನಿಭಾಯಿಸುವ ರೀತಿ ಪ್ರೇಕ್ಷಕರಿಗೆ ಕಿಕ್ ಕೊಡುತ್ತೆ. ಹಾಗೇ 'ಪುಷ್ಪ 2' ಸಿನಿಮ್ಯಾಟೋಗ್ರಫಿ ಬಗ್ಗೆನೂ ನಂಬಿಕೆ ಇಟ್ಟುಕೊಂಡಿದ್ದು, ಪ್ರೇಕ್ಷಕರಿಗೆ ಹೊಸ ಅನುಭವವನ್ನೇ ನೀಡುತ್ತೆ ಎಂದು ಸುಕುಮಾರ್ ಹೇಳಿದ್ದಾರೆ. ಪುಷ್ಪ ಪಾರ್ಟ್‌-1 ಕ್ಲೈಮ್ಯಾಕ್ಸ್‌ನಲ್ಲಿ ಫಹಾದ್ ಫಾಸಿಲ್ ಪಾತ್ರ ಕಿಕ್ ಕೊಟ್ಟಿದ್ದು, ಇದೀಗ ಪಾರ್ಟ್ 2ನಲ್ಲಿ ಇಬ್ಬರು ಫೈಟ್ ಇನ್ನೊಂದು ಲೆವೆಲ್‌ನಲ್ಲಿ ಇರುತ್ತೆ ಎನ್ನಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.