Pushpa 2 Jaathara Begins From Today: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬಹುನಿರೀಕ್ಷಿತ ‘ಪುಷ್ಪ 2: ದಿ ರೂಲ್’ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಚಿತ್ರತಂಡ ಖುಷಿಯ ವಿಚಾರವನ್ನು ಹಂಚಿಕೊಂಡಿದೆ. ಇಂದಿನಿಂದ ಅಂದರೆ ಏಪ್ರಿಲ್‌ 2 ರಿಂದ ಪುಷ್ಪ ಮಾಸ್​ ಜಾತ್ರೆ ಆರಂಭವಾಗಲಿದೆ  ಎಂದು ಪೋಸ್ಟರ್ ರಿಲೀಸ್‌ ಮಾಡುವುದರ ಮೂಲಕ ನಿನ್ನೆ ಏಪ್ರಿಲ್‌ 1 ರಂದು ಚಿತ್ರತಂಡ ತಿಳಿಸಿದೆ. ಇದಕ್ಕಾಗಿ ನಿರ್ದೇಶಕ ಸುಕುಮಾರ್ ಅದ್ಧೂರಿಯಾಗಿ ತಯಾರಿ ಮಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಪುಷ್ಪ 2 ಸಿನಿಮಾತಂಡ ಮಾಸ್​ ಜಾತ್ರೆಯ ವಿಚಾರವನ್ನು ಪೋಸ್ಟರ್ ಬಿಡುಗಡೆಯ ಮೂಲಕ ರಿವೀಲ್‌ ಆಗಿದೆ. ಈ ಪೋಸ್ಟರ್‌ನಲ್ಲಿ "ನಾಳೆ ಪುಷ್ಪ ಮಾಸ ಜಾತ್ರೆ ಆರಂಭವಾಗಲಿದೆ. ನಾಳೆ (ಏಪ್ರಿಲ್ 2) ಅತ್ಯಾಕರ್ಷಕ ಘೋಷಣೆ ಬರಲಿದೆ" ಎಂದು ಮೈತ್ರಿ ಮೂವೀ ಮೇಕರ್ಸ್ ಸೋಶಿಯಲ್‌ ಮಿಡಿಯಾ ಪೋಸ್ಟ್‌ನ ಕ್ಯಾಪ್ಶನ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನೂ ಈ ಪೋಸ್ಟರ್ ನೋಡಿದ ನೆಟ್ಟಿಗರು, ಇದು ಪುಷ್ಪ 2 ಟೀಸರ್ ಬಿಡುಗಡೆ ದಿನಾಂಕ ಅನೌನ್ಸ್ ಮಾಡೋದು ಫಿಕ್ಸ್ ಎನ್ನುತ್ತಿದ್ದಾರೆ.


Prabhas: ಟಾಲಿವುಡ್‌ ಯಂಗ್‌ ರೆಬಲ್‌ ಸ್ಟಾರ್‌ಗೆ ಬಂದ ಮದುವೆ ಪ್ರಪೋಸಲ್‌ಗಳು ಎಷ್ಟು ಗೊತ್ತೇ?


‘ಪುಷ್ಪ 2: ದಿ ರೂಲ್’ ಸಿನಿಮಾ ಆಗಸ್ಟ್ 15 ರಂದು ವಿಶ್ವದಾದ್ಯಂತೆ ತರೆಗೆ ಅಪ್ಪಳಿಸಲಿದೆ ಎಂಬುದು ಇನ್ನೊಮ್ಮೆ ಖಚಿತ ಪಡಿಸಿದೆ. ಇದಕ್ಕೂ ಮುಂಚೆ ಸಾಮಾಜಿಕ ಜಾಲತಾಣದಲ್ಲಿ ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ದಿನ ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂಬ ಸುದ್ದಿ  ವೈರಲ್ ಆಗಿತ್ತು. ಇದರ ನಿಟ್ಟಿನಲ್ಲಿ ಚಿತ್ರತಂಡ ಇತ್ತೀಚಗೆ ಸೂಚನೆಯೊಂದು ನೀಡಿದ್ದು, ಈ ಸಿನಿಮಾದ ಟೀಸರ್‌ ಫೈನಲ್ ಕಟ್ ಸಿದ್ದವಾಗಿದೆ. ಆದರಿಂದ ಇವತ್ತು ಈ ಚಿತ್ರದ ಟೀಸರ್‌ ರಿಲೀಟ್‌ ಡೇಟ್‌ ಅನ್ನು ಪುಷ್ಪ ಟೀ ಅನೌನ್ಸ್‌ ಮಾಡಲಿದೆ  ಎನ್ನಲಾಗ್ತಿದೆ.


ಪುಷ್ಪ 2 ಸಿನಿಮಾಗಾಗಿ ಫ್ಯಾನ್ಸ್‌ ಎದುರು ನೋಡ್ತಾಯಿದ್ದು, ಇದರಲ್ಲಿ ರಶ್ಮಿಕಾ ಮಂದಣ್ಣ, ಫಹಾದ್ ಫಾಜಿಲ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ನಿರ್ಮಾಣ ಮಾಡುತ್ತಿದ್ದಾರೆ. ಹಾಗೆಯೇ ಈ ಸಿನಿಮಾದ ಹಾಡುಗಳಿಗೆ ಸಂಗೀತ ಸಂಯೋಜಕ ದೇವಿ ಶ್ರೀಪ್ರಸಾದ್  ಮ್ಯೂಸಿಕ್‌ ಕಂಪೋಸ್‌ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.