Puttakkana Makkalu : ಪುಟ್ಟಕ್ಕನ ಮಕ್ಕಳು ಕಳೆದ ವಾರವಷ್ಟೇ 400 ಸಂಚಿಕೆಯನ್ನು ಪೊರೈಸಿತ್ತು. ಸಿರೀಯಲ್‌ ತಂಡ ಸಖತ್‌ ಖುಷಿಯಲ್ಲಿತ್ತು. ಇನ್ನು ಜೀ ಕನ್ನಡದಲ್ಲಿ ಹೆಚ್ಚು ಟಿಆರ್‌ಪಿ ಹೊಂದಿರುವ ಈ ಧಾರಾವಾಹಿ ಎಲ್ಲರ ಮನಸ್ಸನ್ನು ಕದ್ದಿರುವುದಂತು ಸುಳ್ಳಲ್ಲ. ಇದೀಗ ಈ ಸಿರೀಯಲ್‌ನಲ್ಲಿ ಬಿಗ್‌ ಟ್ವಿಸ್ಟ್‌ ಇರಲಿದೆ. 


COMMERCIAL BREAK
SCROLL TO CONTINUE READING

ಪುಟ್ಟಕ್ಕನ ಮಗಳು ಸ್ನೇಹಾ ತಾಯಿಯ ಮಾತಿಗೆ ಕಟ್ಟು ಬಿದ್ದು ಮದುವೆಗೆ ಒಪ್ಪಿಕೊಂಡಿದ್ದಾಳೆ. ಆದರೆ ಸ್ನೇಹಾಳನ್ನು ಮದುವೆಯಾಗಬೇಕಿದ್ದ ಭುವನ್‌ ಹಸೆಮಣೆಯಿಂದ ಎದ್ದು ಹೋಗುತ್ತಾನೆ. ಇದನ್ನೆಲ್ಲಾ ನೋಡಿದ ಪುಟ್ಟಕ್ಕ ಶಾಕ್‌ ಆಗಿ ಎದೆ ಮುಟ್ಟಿಕೊಂಡು ನಿಂತಿದ್ದಾಳೆ. ತನ್ನ ತಾಯಿ ಎದೆ ಹಿಡಿದುಕೊಂಡಿದ್ದನ್ನು ನೋಡಿದ ಸ್ನೇಹಾ ಏನು ಮಾಡಬೇಕು ಎಂದು ತೋಚದೆ ಅಮ್ಮನಿಗೆ ಸಮಾಧಾನ ಮಾಡುತ್ತಿರುತ್ತಾಳೆ. ಇದೇ ಸಮಯದಲ್ಲಿ ಪುಟ್ಟಕ್ಕ ಅಳುತ್ತಾ ಕುಸಿದು ಬೀಳುತ್ತಾಳೆ. 


ಆಗ ಭುವನ್‌ ಏನು ಮಾತನಾಡದೇ, ಯಾರ ಮಾತನ್ನು ಕೇಳದ ಪರಿಸ್ಥಿತಿಯಲ್ಲಿರುತ್ತಾನೆ. ಆಗ ಭುವನ್‌ ಚಂದ್ರು ಕೇಳುತ್ತಾನೆ ʼಯಾಕೆ ಏನಾಯ್ತು ಭುವನ್‌ ತಾಳಿ ಕಟ್ಟುವವರೆಗೂ ಬಂದು ಈಗ ಮದುವೆ ಬೇಡ ಎಂದು ಹೇಳುತ್ತಿದ್ದೀಯಾ ಏನು ಇದರ ಅರ್ಥ ಎಂದೆಲ್ಲಾ ಪ್ರಶ್ನೆ ಮಾಡುತ್ತಾನೆ. ಆಗ ಭುವನ್‌ ನನ್ನ ಜೀವನದ ನಿರ್ಧಾರವನ್ನು ಯಾರು ಕೇಳಿದರು ನಾನು ಅದನ್ನು ಸಹಿಸುವುದಿಲ್ಲʼ ಎಂದು ಉತ್ತರ ನೀಡುತ್ತಾನೆ. 


ಇದನ್ನೂ ಓದಿ-Salman Khan Video: ಬಿಗ್ ಬಾಸ್ ವೇದಿಕೆ ಮೇಲೆ ನಟಿಯ ಕಾಲಿಗೆ ಬಿದ್ದ ಸಲ್ಮಾನ್ ಖಾನ್‌.! ವಿಡಿಯೋ ಆಯ್ತು ವೈರಲ್‌


ಭುವನ್‌ ತಂದೆಯೂ ಅವನ್ನು ಕಾರಣ ಕೇಳುತ್ತಾರೆ ಆದರೂ ಅವರು ಏನು ಹೇಳದೇ ಅಲ್ಲಿಂದ ಹೊರಟು ಹೋಗುತ್ತಾರೆ. ಭುವನ್‌ನ್ನು ತಡೆಯಲು ಪುಟ್ಟಕ್ಕ ಹರಸಾಹಸ ಪಡುತ್ತಾಳೆ. ಆದರೂ ಭುವನ್‌ ಹೊರಟಿದ್ದನ್ನು ನೋಡಿ ಪುಟ್ಟಕ್ಕ ಅಲ್ಲಿಯೇ ಕುಸಿದು ಬಿಡುತ್ತಾಳೆ. ಇನ್ನು ಪುಟ್ಟಕ್ಕನ ಸ್ಥಿತಿಯನ್ನು ಕಂಡ ರಾಜೇಶ್ವರಿ ನಗುತ್ತಿರುತ್ತಾಳೆ. ಬಂಗಾರಮ್ಮ ಕೋಪಗೊಂಡಿರುತ್ತಾಳೆ. ಇದೇ ಸಮಯದಲ್ಲಿ ಕಾಳಿ ಬರೆದ ಲೆಟರ್‌ ಜೊತೆಗೆ ಸಿದ್ದೇಶ್‌ ಮದುವೆ ಮಂಟಪ ಪ್ರವೇಶಿಸುತ್ತಾನೆ. 


ಪತ್ರವನ್ನು ಬಂಗಾರಮ್ಮನಿಗೆ ಕೊಡುತ್ತಾನೆ. ಆ ಲೆಟರ್‌ ಓದಿದ ಬಂಗಾರಮ್ಮ ಹೆಚ್ಚು ಕೋಪಿತಳಾಗಿರುತ್ತಾಳೆ. ಇನ್ನು ಇದಕ್ಕೆಲ್ಲಾ ಕಾರಣ ಆ ರಾಜೇಶ್ವರಿ ಆಕೆಗೆ ಬುದ್ದಿ ಕಲಿಸುತ್ತೇನೆ ಎಂದು ಹೇಳಿ ಪುಟ್ಟಕ್ಕ ಇರುವ ಮದುವೆ ಹಾಲ್‌ಗೆ ಹೋಗುತ್ತಾಳೆ. ರಾಜೀಯನ್ನು ಜೋರಾಗಿ ಕರೆಯುತ್ತಾಳೆ ಆದರೆ ರಾಜೀ ಮಾತ್ರ ತಾನು ಏನೂ ಮಾಡಿಲ್ಲ ಎನ್ನುವಂತೆ ನಿಂತಿರುತ್ತಾಳೆ. ಕಾಳಿ ಮಾಡಿದ ಅವಾಂತದ ಬಗ್ಗೆ ರಾಜೇಶ್ವರಿಗೆ ಬಂಗಾರಮ್ಮ ಹೇಳುತ್ತಾಳೆ. 


ನಂತರ ರಾಜೀಗೆ ಬಾಯಿಗೆ ಬಂದ ಹಾಗೇ ಬೈದು ಬಂಗಾರಮ್ಮ ಅಲ್ಲಿಂದ ಹೊರಟು ಹೋಗುತ್ತಾಳೆ. ಆಗ ಸ್ನೇಹಾ ಕಂಠಿ ಮದುವೆ ನಡೆದಿಲ್ಲ ಎಂದು ತಿಳಿಯುತ್ತದೆ. ಬಳಿಕ ಸಿದ್ದೇಶ್‌ ಬಳಿ ಕಂಠಿಯನ್ನು ಕರೆತರಲು ಹೇಳುತ್ತಾಳೆ. ಕಂಠಿ ಸ್ನೇಹಾ ಇರುವಲ್ಲಿಗೆ ಬರುತ್ತಾನೆ ಇದನ್ನು ನೋಡಿದ ಪುಟ್ಟಕ್ಕ ಶಾಕ್‌ ಆಗದ್ದಾಳೆ. ಇನ್ನು ಇಷ್ಟಾದರೂ ಕಂಠಿ ಮತ್ತು ಸ್ನೇಹಾ ಒಂದಾಗುತ್ತಾರಾ ಎಂದು ಕಾದುನೋಡಬೇಕಿದೆ. 


ಇದನ್ನೂ ಓದಿ-"ಆ.. ಅಡ್ಜಸ್ಟ್‌ಮೆಂಟ್‌ಗೆ ರೆಡಿ ಆಗಿದ್ದರೆ ದಳಪತಿ ವಿಜಯ್‌ಗೆ ನಾಯಕಿಯಾಗ್ತಿದ್ದೆ"


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.