71st Miss Universe pageant : ಅಮೇರಿಕಾ ಲೂಸಿಯಾನದ ನ್ಯೂ ಓರ್ಲಿಯನ್ಸ್ ನಗರದಲ್ಲಿ ನಡೆದ 71 ನೇ ಭುವನ ಸುಂದರಿ ಸ್ಪರ್ಧೆಯಲ್ಲಿ (ಮಿಸ್ ಯೂನಿವರ್ಸ್ 2022) ಯುಸ್‌ನ ಚೆಲುವೆ ಗೆದ್ದಿದ್ದಾರೆ. ಈ ಬಾರಿ ಭುವನ ಸುಂದರಿ ಪಟ್ಟವನ್ನು ಅಮೆರಿಕದ ಆರ್. ಬೊನಿ ಗೇಬ್ರಿಯಲ್​​ ಪಡೆದಿದ್ದಾರೆ. ಈ ಸ್ಪರ್ಧೆಯ 84 ಸುಂದರಿಯರಿದ್ದ ಈ ಸ್ಪರ್ಧೆಯಲ್ಲಿ ಆರ್. ಬೊನಿ ಗೇಬ್ರಿಯಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಅದೇ ಸಮಯದಲ್ಲಿ ವೆನೆಜುವೆಲಾದ ಡಯಾನಾ ಸಿಲ್ವಾ ಎರಡನೇ ಸ್ಥಾನದಲ್ಲಿದ್ದರು ಮತ್ತು ಡೊಮಿನಿಕನ್ ರಿಪಬ್ಲಿಕ್‌ನ ಆಮಿ ಪೆನಾ ಮೂರನೇ ಸ್ಥಾನ ಪಡೆದರು. ಈ ಸ್ಪರ್ಧೆಯಲ್ಲಿ ಭಾರತ ನಿರಾಸೆ ಅನುಭವಿಸಿದೆ. 


COMMERCIAL BREAK
SCROLL TO CONTINUE READING

ಮಿಸ್ ದಿವಾ ಯೂನಿವರ್ಸ್ 2022 ಆಗಿದ್ದ ಭಾರತೀಯ ಸ್ಪರ್ಧಿ ದಿವಿತಾ ರೈ ಅವರು ಅಗ್ರ 5 ರೊಳಗೆ ತಲುಪಲು ಸಹ ಸಾಧ್ಯವಾಗಲಿಲ್ಲ. ಈ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ದಿವಿತಾ ಅವರು ತಮ್ಮ ವೇಷಭೂಷಣದಿಂದ ಇಡೀ ವಿಶ್ವದ ಗಮನ ಸೆಳೆದರು. ವೃತ್ತಿಪರ ರೂಪದರ್ಶಿ ದಿವಿತಾ ರೈ ಕರ್ನಾಟಕದವರಾಗಿದ್ದು, ಅವರು ಆರ್ಕಿಟೆಕ್ಟ್‌ನಲ್ಲಿ ಪದವಿ ಪಡೆದಿದ್ದಾರೆ. 


ಇದನ್ನೂ ಓದಿ : Samantha : ಮನಸ್ಸಿನ ಎಲ್ಲಾ ಭಾವನೆಗಳಿಂದ ದೂರ.. ಸಮಂತಾ ಹೀಗೆ ಹೇಳಿದ್ದೇಕೆ?


ಭಾರತವು ಇಲ್ಲಿಯವರೆಗೆ ಎಷ್ಟು ಬಾರಿ ಭುವನ ಸುಂದರಿ ಪ್ರಶಸ್ತಿಯನ್ನು ಗೆದ್ದಿದೆ?


ಭಾರತವು ಭುವನ ಸುಂದರಿ ಪ್ರಶಸ್ತಿಯನ್ನು ಮೂರು ಬಾರಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಬಾಲಿವುಡ್ ನಟಿ 1994 ರಲ್ಲಿ ಸುಶ್ಮಿತಾ ಸೇನ್ ಈ ಪ್ರಶಸ್ತಿಯನ್ನು ಗೆದ್ದು ಭಾರತದ ಮೊದಲ ಭುವನ ಸುಂದರಿ ಎನಿಸಿಕೊಂಡರು. ಅವರ ನಂತರ, ಲಾರಾ ದತ್ತಾ 2000 ರಲ್ಲಿ ಭುವನ ಸುಂದರಿ ಪ್ರಶಸ್ತಿಯನ್ನು ಗೆದ್ದರು. 2021 ರಲ್ಲಿ ಹರ್ನಾಜ್ ಸಂಧು ಅವರು ಮಿಸ್ ಯೂನಿವರ್ಸ್ ಮೂರನೇ ಬಾರಿ ಪ್ರಶಸ್ತಿಯನ್ನು ಪಡೆದರು. 


ಮಿಸ್ ಯೂನಿವರ್ಸ್ 2022 ರ ಕಿರೀಟದ ವೆಚ್ಚ $ 6 ಮಿಲಿಯನ್ ಅಂದರೆ ಸುಮಾರು 49 ಕೋಟಿ ರೂ. ಈ ಬಾರಿಯ ಕಿರೀಟ ಬಹಳ ವಿಶೇಷ ಎನ್ನಲಾಗುತ್ತಿದೆ. ‘ಫೋರ್ಸ್ ಫಾರ್ ಗುಡ್’ ಹೆಸರಿನ ಈ ಕಿರೀಟವನ್ನು ಮೌವಾದ್ ಎಂಬ ಕಂಪನಿ ಸಿದ್ಧಪಡಿಸಿದೆ.  


ಇದನ್ನೂ ಓದಿ : ಪ್ರಭಾಸ್‌ ಪ್ಯಾನ್‌ ಇಂಡಿಯಾ ಸಿನಿಮಾ ಅನೌನ್ಸ್‌..! ʼಆದಿಪುರಷʼ ಚಿತ್ರ ಏನಾಯ್ತು..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.