Raai Laxmi:  ಸೌತ್‌ ನಟಿ ಲಕ್ಷ್ಮಿ ರಾಯ್ ಅವರ ವೆಕೇಷನ್ ಫೋಟೋ ನೋಡಿದರೆ ನೀವೂ ಸ್ವಲ್ಪ ಬೀಚ್ ಸುತ್ತಾಡೋ ಮನಸು ಮಾಡಬಹುದು. ಕಾರಣ ಅವರ ವೆಕೇಷನ್ ಫ್ಯಾಷನ್ ಗೋಲ್ಸ್ ಸಖತ್ತಾಗಿದೆ. ಲಕ್ಷ್ಮಿ ಅವರು ಟೀಲ್ ಈಜುಡುಗೆ ಟಾಪ್ ಮತ್ತು ಹೂವಿನ ಸರೋಂಗ್‌ನಲ್ಲಿ ಪೋಸ್ ಕೊಟ್ಟಿದ್ದಾರೆ. ಆಕಾಶ ನೀಲಿ ಬಣ್ಣದ ಬ್ಯಾಗ್ರೌಂಡ್​ನಲ್ಲಿ ಸ್ಟೈಲ್ ಆಗಿ ಕಾಣಿಸಿದ್ದಾರೆ. ಮರಳು ತುಂಬಿರುವ ಹಿನ್ನಲೆಯಲ್ಲಿ ತೆಂಗಿನ ತೋಪಿನಲ್ಲಿ ನಟಿ ಸೂಪರ್ ಆಗಿ ಪೋಸ್ ಕೊಟ್ಟಿದ್ದಾರೆ. ಇದರಲ್ಲಿ ಹಳದಿ ಬಣ್ಣದ ಈಜುಡುಗೆ ಧರಿಸಿದ್ದರು.


COMMERCIAL BREAK
SCROLL TO CONTINUE READING

ನಟಿ ಲಕ್ಷ್ಮಿ ರಾಯ್ ಮೆರೂನ್ ಬಣ್ಣದ ಈಜುಡುಗೆ ಧರಿಸಿ ಪೋಸ್ ಕೊಟ್ಟಿದ್ದಾರೆ. ಇದಕ್ಕೆ ಸ್ಟೈಲಿಷ್ ಗಾಗಲ್ಸ್ ಧರಿಸಿ ಟ್ರೆಂಡಿಯಾಗಿ ಕಾಣಿಸಿದ್ದಾರೆ. ಇನ್ನೊಂದು ಫೋಟೋದಲ್ಲಿ ಬ್ಲ್ಯಾಕ್ ಈಜುಡುಗೆ, ಬ್ಲ್ಯಾಕ್ ಸನ್​ಗ್ಲಾಸ್ ಹಾಕಿ ಕಡಲ ತೀರದ ಗಾಳಿಯನ್ನು ಎಂಜಾಯ್ ಮಾಡಿದ್ದಾರೆ. ಫೋಟೋ ಸುಂದರವಾಗಿ ಮೂಡಿ ಬಂದಿದೆ. ನಟಿ ಲಕ್ಷ್ಮಿ ರಾಯ್ ತಮಿಳು, ಕನ್ನಡ, ಮಲಯಾಳಂ ಸೇರಿದಂತೆ ಹಲವು ಸೌತ್ ಇಂಡಿಯನ್ ಭಾಷೆಗಳಲ್ಲಿ ಸಿನಿಮಾ ಮಾಡಿದ್ದಾರೆ. ಅವರ ಅಭಿನಯಕ್ಕೆ ವ್ಯಾಪಕ ಮೆಚ್ಚುಗೆ ಬಂದಿದೆ.


ಇದನ್ನೂ ಓದಿ-Jacqueline Fernandez: ಹೇಗಿದೆ ನೋಡಿ ರಕ್ಕಮ್ಮನ ಕಟೌಟ್‌ ಡ್ರೆಸ್‌ ಲುಕ್‌..! 


ನಟಿಯ ವೆಕೇಷನ್ ಫೋಟೋಸ್ ಮುಖ್ಯವಾಗಿ ವೆಕೇಷನ್ ಫ್ಯಾಷನ್ ಗೋಲ್ಸ್ ಸೆಟ್ ಮಾಡುತ್ತದೆ. ಬೀಚ್ ವೆಕೇಷನ್ ಪ್ಲಾನ್ ಮಾಡ್ತಿದ್ರೆ ಈ ಉಡುಗೆ ಮಿಸ್ ಮಾಡಬೇಡಿ. ಒಂಟಿ ಮರದ ಮುಂದೆ ಗುಲಾಬಿ ರಂಗಿನ ಈಜುಡುಗೆಯಲ್ಲಿ ಪೋಸ್ ಕೊಟ್ಟ ಲಕ್ಷ್ಮಿ ರಾಯ್ ಸ್ಟೈಲ್​ಗೆ ಯುವಜನರು ಫಿದಾ ಆಗಿದ್ದಾರೆ. ಮೇಜರ್ ಟ್ರೆಂಡ್ ಸೆಟ್ ಮಾಡಿದ್ದಾರೆ ಈ ನಟಿ. ಕೆಲವೇ ಸಿನಿಮಾ ಮಾಡಿದ್ದರು ಲಕ್ಷ್ಮಿ ಸೌತ್​ನಲ್ಲಿ ಚಿರಪರಿಚಿತೆ. ಹಿಟ್ ಸಿನಿಮಾಗಳಲ್ಲಿ ಟಾಪ್ ಹೀರೋಗಳ ಜೊತೆ ತೆರೆ ಹಂಚಿಕೊಂಡಿದ್ದಾರೆ.


ಇದನ್ನೂ ಓದಿ-Pathaan Box Office collections: ಬಾಲಿವುಡ್ ನ ನಂಬರ್‌ ʼ1ʼ ಸಿನಿಮಾವಾದ  ‘ಪಠಾನ್’ 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.