Rachita Ram enjoying the rain: ನಟಿ ರಚಿತಾ ರಾಮ್ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ಮತ್ತು ಬ್ಯೂಟಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ, ಅವರು ಮುದ್ದಾದ ವಿಡಿಯೋವೊಂದನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಅದು ಕೆಲವೇ ಸಮಯದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ರಚಿತಾ ರಾಮ್‌ ಮಳೆಯನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಅವರ ಸುತ್ತಮುತ್ತಲಿನ ಪರಿಸರವನ್ನ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಮಳೆಯಿಂದ ಹಸಿರು ಹೊದ್ದು ನಿಂತ ಪ್ರಕೃತಿಯನ್ನು ನೋಡಿ ರಚಿತಾ ರಾಮ್‌ ಖುಷಿ ಪಡುತ್ತಿದ್ದಾರೆ. ಹಸಿರಿನ ನಡುವೆ ಪೋಸ್ ನೀಡುತ್ತಿರುವ ರಚಿತಾ ರಾಮ್ ಅವರನ್ನು ಕಂಡು ಅಭಿಮಾನಿಗಳ ದಿಲ್‌ ಖುಷ್‌ ಆಗಿದೆ. ಮಳೆ ಹನಿಗಳೊಂದಿಗೆ ರಚಿತಾ ರಾಮ್‌ ಆಟವಾಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋದಲ್ಲಿ ರಚಿತಾ ಕಪ್ಪು ಜೆಗ್ಗಿಂಗ್‌ ಮತ್ತು ಪ್ರಿಂಟೆಡ್‌ ಟಾಪ್ ಅನ್ನು ಧರಿಸಿದ್ದಾರೆ.  


ಇದನ್ನೂ ಓದಿ: ಬರ್ತಿದೆ ದ್ವೇಷ ಮರೆಸಿ, ಪ್ರೀತಿ ಹಂಚಲು ಜನ್ಮವೆತ್ತಿದ ನಾಗಕನ್ನಿಕೆಯ ಕಥೆ "ನಾಗಪಂಚಮಿ"..!


ಕಾಮೆಂಟ್ಸ್ ವಿಭಾಗದಲ್ಲಿ ರಚಿತಾ ಅಭಿಮಾನಿಗಳು ಪ್ರಶಂಸೆಯ ಸುರಿಮಳೆಗೈದಿದ್ದಾರೆ. "ನಾವು ಮಹಾರಾಷ್ಟ್ರದವರು. ಆದರೆ ಡಿಂಪಲ್ ಕ್ವೀನ್ ದೊಡ್ಡ ಅಭಿಮಾನಿ" ಎಂದು ಒಬ್ಬ ಬಳಕೆದಾರರು ಬರೆದಿದ್ದಾರೆ. "ಹೇಯ್ ಐ ಲವ್ ಯು ಸ್ವೀಟ್ ಹಾರ್ಟ್ ತುಂಬಾ ಮುದ್ದಾಗಿ ಕಾಣುತ್ತಿದ್ದೀರಿ" ಎಂದು ಅಭಿಮಾನಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, "ಸುಂದರ ರಚಿತಾ" ಎಂದು  ಬರೆದಿದ್ದಾರೆ. 


 



 


ಕಳೆದ ತಿಂಗಳು ರಚಿತಾ ರಾಮ್ ಅವರು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸ್ಮಾರಕದ ಬಳಿ ಕಾಣಿಸಿಕೊಂಡಿದ್ದರು. ಅವರ ಭೇಟಿಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇದು ಅವರು ರಾಜಕೀಯಕ್ಕೆ ಸೇರುತ್ತಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಯಿತು. ರಚಿತಾ ಸಿಂಪಲ್ ಎಥ್ನಿಕ್ ಉಡುಗೆಯಲ್ಲಿ ಕಂಗೊಳಿಸಿದ್ದರು. 


ರಚಿತಾ ಅವರು 2013 ರಲ್ಲಿ ಬುಲ್‌ಬುಲ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಡೈಲಾಗ್ ಡೆಲಿವರಿ ಶೈಲಿ, ವ್ಯಕ್ತಿತ್ವ ಮತ್ತು ಅಭಿನಯದಿಂದ ಅನೇಕ ಜನರು ಪ್ರಭಾವಿತರಾಗಿದ್ದರು. ಅವರು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಗಳಿಸಿದರು. ರಚಿತಾ ಬ್ಯೂಟಿಗೆ ಸಾವಿರಾರು ಅಭಿಮಾನಿಗಳು ಮರುಳಾಗಿದ್ದಾರೆ.


ಇದನ್ನೂ ಓದಿ: Chaya Singh:ಅಮೃತಧಾರೆ ಸೀರಿಯಲ್ ಭೂಮಿಕಾಳ ರಿಯಲ್ ವಯಸ್ಸೆಷ್ಟು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.