Rachita ram : ಕ್ರಾಂತಿ ಸಿನಿಮಾದ ಸಕ್ಸಸ್‌ ಎಂಜಾಯ್‌ ಮಾಡುತ್ತಿರುವ ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಸದ್ಯ ಡೇಟಿಂಗ್‌ ಮಾಡೋಕೆ ಹುಡುಗನ ಹುಡುಕಾಟದಲ್ಲಿದ್ದಾರೆ. ಅರೇ.. ರಚ್ಚು ಚಿಟಿಕೆ ಹೊಡೆದ್ರೆ ಸಾಕು ನಾನು ನೀನು ಅಂತ ಸಾಕಷ್ಟು ಹುಡುಗರು ಮುಗಿಬಿಳ್ತಾರೆ.. ಅಂತದ್ರಲ್ಲಿ ಇವರ್ಯಾಕೆ ಹುಡುಗನಿಗಾಗಿ ಇಷ್ಟು ತಲೆ ಕೆಡಿಸಿಕೊಳ್ತೀದಾರೆ ಅಂತ ಟೆನ್‌ಕ್ಷನ್ ಮಾಡ್ಕೋಬೇಡಿ.. ಜಸ್ಟ್‌ ಮುಂದೆ ಓದಿ..


COMMERCIAL BREAK
SCROLL TO CONTINUE READING

ಹೌದು.. ಸ್ಯಾಂಡಲ್‌ವುಡ್‌ನ ಬಹುಬೇಡಿಕೆಯ ನಟಿಯರಲ್ಲಿ ರಚಿತಾ ರಾಮ್‌ ಕೂಡ ಒಬ್ಬರು. ಇತ್ತೀಚಿಗೆ ಬಿಡುಗಡೆಯಾದ ಚಾಲೆಜಿಂಗ್‌ ಸ್ಟಾರ್‌ ದರ್ಶನ್‌ ನಟನೆಯ ಕ್ರಾಂತಿ ಸಿನಿಮಾದಲ್ಲಿ ನಟಿಸಿದ್ದ ರಚ್ಚು, ತಮ್ಮ ಕ್ಯೂಟ್‌ ನಟನೆಯ ಮೂಲಕ ಸಿನಿರಸಿಕರ ಮನಗೆದ್ದಿದ್ದಾರೆ. ಅರಸಿ ಎಂಬ ಕನ್ನಡದ ಧಾರಾವಾಹಿ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಚೆಲುವೆಗೆ ಚಂದನವನದಲ್ಲಿ ಸಖತ್‌ ಡಿಮ್ಯಾಂಡ್‌ ಇದೆ.


3 ಅಕ್ಟೋಬರ್ 1992 ರಂದು ಹುಟ್ಟಿದ ರಚ್ಚು, ʼಬುಲ್ ಬುಲ್ʼನಲ್ಲಿ ದರ್ಶನ್ ಜೊತೆಗೆ ನಾಯಕಿಯಾಗಿ ನಟಿಸಿದರು. ರಚಿತಾ ತಮ್ಮ ಮೊದಲ ಸಿನಿಮಾದಿಂದಲೇ ಯಶಸ್ಸು ಕಂಡರು. ನಂತರ ಅವರು ದಿಲ್ ರಂಗೀಲಾ ಹಾಗು ಅಂಬರೀಶಾ ಚಿತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರಿಗೆ ತುಂಬಾ ಹತ್ತಿರವಾದರು. ಸದ್ಯ ಕ್ರಾಂತಿ ಸಿನಿಮಾದ ಸಕ್ಸ್‌ಸ್‌ ಅನ್ನು ಸಂಭ್ರಮಿಸುತ್ತಿದ್ದಾರೆ. ಇನ್ನು ರಚ್ಚು ಡೇಟ್‌ ಮಾಡೋಕೆ ಹುಡುಗನಿಗಾಗಿ ಹುಡುಕಾಟ ನಡೆಸಿದ್ದು, ಆಪ್‌ ಒಂದರ ಮೊರೆ ಹೋಗಿದ್ದಾರೆ.


ಯಸ್‌.. ಜಾಸ್ತಿ ತಲೆಕೆಸಿಕೊಳ್ಳುವ ಮ್ಯಾಟರ್‌ ಏನು ಇಲ್ಲ ಬಿಡಿ. ಜಸ್ಟ್‌ ನೀನೆ ಎಂಬ ಕನ್ನಡದ ಡೇಟಿಂಗ್‌ ಆಪ್‌ ಪ್ರಮೋಷನ್‌ ವಿಡಿಯೋ ಒಂದನ್ನು ರಚ್ಚು ಹಂಚಿಕೊಂಡಿದ್ದರು. ಅದ್ರಲ್ಲಿ ಅವರು ಸಿಂಗಲ್‌ ಇರೋರಿಗೆ ನೀನೆ ಆಪ್‌ ಬಳಸಿ ಅಂತ ಸಲಹೆ ನೀಡಿದ್ದಾರೆ. ಈ ಕುರಿತು ವಿಡಿಯೋ ಒಂದನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಂಡಿದ್ದಾರೆ.