Body Shaming in Bollywood: ಬಾಲಿವುಡ್ ಸಿನಿಮಾ ರಂಗ ಹೊರ ಪ್ರಪಂಚಕ್ಕೆ ಎಷ್ಟು ಸುಂದರವೋ ಒಳಪ್ರಪಂಚ ಕೆಲ ಕೆಟ್ಟ ಕೆಲಸಗಳಿಂದ ತುಂಬಿ ತುಳುಕುತ್ತಿದೆ. ಸಿನಿಮಾ ರಂಗಕ್ಕೆ ಎಂಟ್ರಿ ಕೊಡೋದಕ್ಕೂ ಮುನ್ನ ಮಹಿಳೆಯರು ಅನುಭವಿಸುವ ಕಷ್ಟ ಅಂತಿಂಥದ್ದಲ್ಲ ಎಂದು ಅನೇಕ ನಟಿಯರು ಈ ಹಿಂದೆ ನೀಡಿದ ಹೇಳಿಕೆಗಳನ್ನು ನೋಡಿದ್ರೆ ಗೊತ್ತಾಗುತ್ತದೆ. ಈಗ ಮತ್ತೋರ್ವ ಬಾಲಿವುಡ್’ನ ಖ್ಯಾತ ನಟಿ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದು ಬಾಲಿವುಡ್ ಕರ್ಮಕಾಂಡವನ್ನು ಬೀದಿಗೆ ತಂದಂತಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 70 ಸಾವಿರದ iPhone 13 ಜಸ್ಟ್ 30 ಸಾವಿರಕ್ಕೆ! ನಿಮ್ಮ ಫೇವರೇಟ್ ಫೋನ್ ಖರೀದಿಸಲು ಇದುವೇ ಸರಿಯಾದ ಟೈಂ!


ರಾಧಿಕಾ ಆಪ್ಟೆ. ಈ ಹೆಸರು ಬಾಲಿವುಡ್ ಸಿನಿರಂಗದಲ್ಲಿ ಸುಮಾರು ಒಂದು ದಶಕದಿಂದ ಕೇಳಿಬರುತ್ತಿದೆ. ಈಕೆ ಆಯ್ದುಕೊಳ್ಳುವ ಸಿನಿಮಾಗಳಲ್ಲಿ ಈಕೆ ಪಾತ್ರ ವಿಶೇಷವಾಗಿರುತ್ತದೆ. ಆದರೆ ವೃತ್ತಿಜೀವನದ ಆರಂಭಿಕ ವರ್ಷಗಳಲ್ಲಿ ತಾನು ಎದುರಿಸಿದ ಬಾಡಿ ಶೇಮಿಂಗ್ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ರಾಧಿಕಾ, ತಾನು ಎದುರಿಸಿದ ವಿಚಿತ್ರ ಮತ್ತು ಅಸಹ್ಯಕರ ರೀತಿಯ ಕಾಮೆಂಟ್‌’ಗಳ ಬಗ್ಗೆ ಹೇಳಿದ್ದಾರೆ.


ತನ್ನ ವೃತ್ತಿಜೀವನದ ಆರಂಭಿಕ ಅವಧಿಯಲ್ಲಿ ಶಾರ್ಟ್ ಮೂವಿಗಳಲ್ಲಿ ಅವರು ಅಭಿನಯಿಸಿದದರು. ಪರ್ಚ್ಡ್‌ ಸಿನಿಮಾದಿಂದ ಬದ್ಲಾಪುರ್‌’ವರೆಗೆ ಅನೇಕ ಸಿನಿಮಾಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಫಿಲ್ಮ್ ಕಂಪ್ಯಾನಿಯನ್‌’ಗೆ ನೀಡಿದ ಹೊಸ ಸಂದರ್ಶನದಲ್ಲಿ ಮಾತನಾಡಿದ ಅವರು, ವೃತ್ತಿಜೀವನದ ಆರಂಭದಲ್ಲಿ, ಸಿನಿಮಾ ಇಂಡಸ್ಟ್ರೀಯಲ್ಲಿ ಯಶಸ್ವಿಯಾಗಲು ಬಯಸಿದರೆ ನೋಟವನ್ನು ಬದಲಾಯಿಸಬೇಕೆಂದು ಓರ್ವ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.


“ನಾನು ಮೂರ್ನಾಲ್ಕು ಕಿಲೋಗಳಷ್ಟು ತೂಕ ಹೊಂದಿದ್ದರಿಂದ ಸಿನಿಮಾ ಆಫರ್ ಕಳೆದುಕೊಂಡೆ. ಸಹಜವಾಗಿ ನೀವು ಹೊಸಬರಾಗಿದ್ದಾಗ ಅವರು ಇಂತಹದ್ದೆಲ್ಲಾ ಹೇಳುತ್ತಾರೆ, ‘ಏಕೆ ನಿಮ್ಮ ಮೂಗು ಚೆನ್ನಾಗಿಲ್ಲ. ನಿಮ್ಮ ಸ್ತನ ಏಕೆ ಹೀಗಿವೆ, ದೊಡ್ಡದಾಗಿ ಮಾಡಿಸಿಕೊ” ಎಂದು ಹೇಳಿದ್ದರಂತೆ,


ಇನ್ನು ವೃತ್ತಿ ಜೀವನದ ಬಗ್ಗೆ ಈಗ ಅರಿವಿಗೆ ಬಂದಿದೆ. ಹೀಗಿರುವಾಗ ಕಳೆದ ಕೆಲವು ವರ್ಷಗಳಲ್ಲಿ ಈ ವಿಚಾರದ ಬಗ್ಗೆ ಬಹಳ ಮುಕ್ತವಾಗಿ ಮಾತನಾಡಬಹುದು ಎಂದು ಅವರು ಹೇಳಿದರು.


“ವೈವಿಧ್ಯಮಯ ಪಾತ್ರಗಳನ್ನು ಮಾಡುತ್ತಿದ್ದರೂ ಸಹ ಅವರ ಗ್ರಹಿಕೆಗಳು ವಿಚಿತ್ರವಾಗಿದ್ದವು. ನಾನು ಬದ್ಲಾಪುರ ಮಾಡುವವರೆಗೂ ನಾನು ಹಳ್ಳಿ ಹುಡುಗಿ ಮಾತ್ರ ಮಾಡಬಲ್ಲೆ ಎಂದು ಜನರು ಭಾವಿಸುತ್ತಿದ್ದರು. ಬದ್ಲಾಪುರ ಸಿನಿಮಾ ನಂತರ, ನಾನು ಸೆಕ್ಸ್ ಕಾಮಿಡಿಗಳನ್ನು ಮಾತ್ರ ಮಾಡಬಲ್ಲೆ ಎಂದು ಭಾವಿಸಿದ್ದರು. ಆದ್ದರಿಂದ ನಾನು ನಿಲ್ಲಿಸಿದೆ. ಇದಾದ ಬಳಿಕ ಎಂದಿಗೂ ಹೌದು(YES) ಎಂದು ಹೇಳಲಿಲ್ಲ ”ಎಂದು ರಾಧಿಕಾ ಹೇಳಿದರು.


ಇದನ್ನೂ ಓದಿ: 10 Rupee Old Note: ನಿಮ್ಮ ಬಳಿ 10 ರೂ.ನ ಹಳೆ ನೋಟು ಇದ್ಯಾ? ಒಂದು ನಿಮಿಷದಲ್ಲಿ 25 ಸಾವಿರ ಗಳಿಸಬಹುದು


ರಾಧಿಕಾ ಮುಂದೆ Zee5 ಚಿತ್ರದಲ್ಲಿ ಮಿಸೆಸ್ ಅಂಡರ್‌ ಕವರ್‌’ನಲ್ಲಿ ಕಾಣಿಸಿಕೊಳ್ಳಲಿದ್ದಾರೆ, ರಹಸ್ಯ ಗೂಢಚಾರಿಯಾಗಿರುವ ಗೃಹಿಣಿಯಾಗಿ ನಟಿಸುತ್ತಿದ್ದಾರೆ. ಕಾಮಿಡಿ-ಥ್ರಿಲ್ಲರ್ ಸಿರೀಸ್’ನ್ನು ಅನುಶ್ರೀ ಮೆಹ್ತಾ ನಿರ್ದೇಶಿಸಿದ್ದಾರೆ. ಸುಮೀತ್ ವ್ಯಾಸ್ ಮತ್ತು ರಾಜೇಶ್ ಶರ್ಮಾ ಸಹ ನಟಿಸಿದ್ದಾರೆ. ಇದು ಏಪ್ರಿಲ್ 14 ರಂದು Zee5 ನಲ್ಲಿ ಬಿಡುಗಡೆಯಾಗಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.