Radhika Kumarswamy Holi Celebration Near Beach: ಸ್ಯಾಂಡಲ್‌ವುಡ್‌ ನಟಿ ರಾಧಿಕಾ ಕುಮಾರಸ್ವಾಮಿ ಹೋಳಿ ಹಬ್ಬವನ್ನು ಕಡಲ ತೀರದ ಬಳಿ ಆಚರಣೆ ಮಾಡಿದ್ದಾರೆ. ಈ ನಟಿ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಿದಿದ್ದರೂ ಸೋಶಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿದ್ದಾರೆ. ಆಗಾಗ ಹಬ್ಬ ಹರಿ ದಿನಗಳು ಸಂದರ್ಭಗಳಲ್ಲಿ ರಾಧಿಕಾ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡುತ್ತಿರುತ್ತಾರೆ.


COMMERCIAL BREAK
SCROLL TO CONTINUE READING

ಇದೀಗ ನಟಿ ರಾಧಿಕಾ ಕುಮಾರಸ್ವಾಮಿ ಕಡಲ ತೀರದಲ್ಲಿ ಹೋಳಿ ಹಬ್ಬ ಸೆಲೆಬ್ರೇಟ್‌  ಮಾಡಿದ್ದಾರೆ. ಮತ್ತೆ ಹೋಳಿ ಹಬ್ಬದ ಸಂಭ್ರಮ ಒಂದು ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಟಿ ಬಣ್ಣಗಳನ್ನು ಎರಚಿ ಮಸ್ತ್ ಆಗಿ ಡ್ಯಾನ್ಸ್ ಮಾಡಿ ಖುಷಿ ಪಟ್ಟಿದ್ದಾರೆ. ಈಕೆ ಇಂತಹ ಶುಭ ಸಂದರ್ಭದಲ್ಲಿ ವೈಟ್ ಅಂಡ್ ವೈಟ್ ಕುರ್ತಾ ಧರಿಸಿ ಬಣ್ಣದ ಹಬ್ಬವನ್ನು ಆಚರಿಸಿದ್ದಾರೆ.



ಇದನ್ನೂ ಓದಿ: ಏಳನೇ ವಯಸ್ಸಿಗೆ ಸಿನಿಮಾಗೆ ಎಂಟ್ರಿ.. ಶಾರುಖ್ ಖಾನ್ ಗಿಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡ ಸೆಲೆಬ್ರಿಟಿ ಈಕೆ!!


ನಟಿ ರಾಧಿಕಾ ಕುಮಾರಸ್ವಾಮಿ ಹೋಳಿ ಸೆಲೆಬ್ರೇಷನ್‌ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದು, ಕ್ಯಾಪ್ಶನಲ್ಲಿ ತಮ್ಮ ಅಭಿಮಾನಿಗಳಿಗೆ  ಹ್ಯಾಪಿ ಹೋಳಿ ಎಂದು ವಿಶ್‌ ಮಾಡಿದ್ದಾರೆ. ಹಾಗೆಯೇ ಈ ಪೋಸ್ಟ್‌ಗೆ ʻರಂಗೀನ ರಂಗು ರಂಗೂ ಹೋಳಿʼ ಹಾಡಿನ ಟಚ್‌ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇಪ್ಪತ್ತೊಂದು ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ.


ರಾಧಿಕಾ ಕುಮಾರಸ್ವಾಮಿ ಹೋಳಿ ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್‌ ವಿಭಾಗದಲ್ಲಿ ಈ ನಟಿಗೆ ತಮಾಷೆ ಮಾಡಿದ್ದಾರೆ. ಒಬ್ಬರು " ಮಂಗಳೂರು ಬೀಚ್ ಇರಬಹುದಾ?", "ಮರವಂತೆ ಬೀಚ್ ಇರಬಹುದಾ?" ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು "ನೀವು ದುಬೈನಲ್ಲಿ ಹೋಗಿ ಹೋಳಿ ಆಡಿದ್ದು ನಿಜನಾ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಅಣ್ಣಂಗೂ ಸ್ವಲ್ಪ ಹಚ್ಚಿ" ಎಂದು ಕಾಲು ಎಳೆದಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ