`ಅಪ್ಪು ನಟಿಸಬೇಕಿದ್ದ ಚಿತ್ರದಲ್ಲಿ ಬಣ್ಣ ಹಚ್ಚಿದ ರಾಘಣ್ಣ`: ರಂಗಾಯಣ ರಘು !
Rangayana Raghu: `ರಂಗಸಮುದ್ರ` ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ಮುಖ್ಯ ಪಾತ್ರಧಾರಿ ರಂಗಾಯಣ ರಘು ಅವರು ಈ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯಿಸಬೇಕಿತ್ತು. ಆದರೆ ಅವರ ಕುಟುಂಬದ ರಾಘವೇಂದ್ರ ರಾಜ್‌ಕುಮಾರ್ ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.
Rangayana Raghu talks About Puneeth Rajkumar: ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಯಾವಾಗಲೂ ಹೊಸ ತಂಡಗಳಿಗೆ ಪ್ರೋತ್ಸಾಹ ನೀಡುತ್ತಿದ್ದು, ಅದಕ್ಕಾಗಿಯೇ ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್ ಕೂಡ ಆರಂಭಿಸಿದ್ದರು. ನಟ ಪುನೀತ್ ರಾಜ್‌ಕುಮಾರ್ 'ರಂಗಸಮುದ್ರ' ಎಂಬ ಹೊಸ ತಂಡದ ಸಿನಿಮಾದಲ್ಲಿ ನಟಿಸಬೇಕಿದ್ದು, ಆದರೆ ವಿಧಿ ಅದಕ್ಕೆ ಅವಕಾಶ ನೀಡಲಿಲ್ಲ. ಸದ್ಯ ಅಪ್ಪು ಸ್ಥಾನವನ್ನು ನಟ ರಾಘವೇಂದ್ರ ರಾಜ್‌ಕುಮಾರ್ ತುಂಬಿದ್ದಾರೆ. ಇದೀಗ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿರುವ 'ರಂಗಸಮುದ್ರ' ಚಿತ್ರದ ಟ್ರೇಲರ್ ರಾಘವೇಂದ್ರ ರಾಜ್‌ಕುಮಾರ್ ರಿಲೀಸ್ ಮಾಡಿದರು.
'ರಂಗಸಮುದ್ರ' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ಬಳಿಕ ರಾಘಣ್ಣ, "ಈ ರೀತಿಯ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕರಿಗೆ ನನ್ನ ಮೊದಲ ಸೆಲ್ಯೂಟ್ ಹೇಳುತ್ತೇನೆ. ಈ ಚಿತ್ರದಲ್ಲಿ ರಂಗಾಯಣ ರಘು ಅವರ ಅಭಿನಯ ನಿಜಕ್ಕೂ ಅತ್ಯದ್ಭುತವಾಗಿದೆ. ಇಂಥದ್ದೊಂದು ಸಿನಿಮಾದಲ್ಲಿ ನಾನು ನಟಿಸಿದ್ದು ನನ್ನ ಭಾಗ್ಯ ಅಂತಲೇ ಹೇಳಬೇಕು. ನಾನು ಸದಾ ಈ ತಂಡದ ಜೊತೆಗೆ ಇರುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ: ಒಮನ್‌ನಲ್ಲಿ ಕಾಟೇರ ಹೌಸ್ ಫುಲ್ ಪ್ರದರ್ಶನದ ವಿಡಿಯೋ ವೈರಲ್!
ಬಳಿಕ 'ರಂಗ ಸಮುದ್ರ' ಚಿತ್ರದಲ್ಲಿ ಮುಖ್ಯ ಪಾತ್ರಧಾರಿ ನಟ ರಂಗಾಯಣ ರಘು, "ನಿರ್ದೇಶಕ ರಾಜ್‌ಕುಮಾರ್ ಅಸ್ಕಿ ಅವರು ನನಗೆ ಹೇಳಿದ ಕಥೆ ತುಂಬ ಇಷ್ಟವಾಯಿತು. ಅದಕ್ಕಾಗಿ ನಾನು ತಕ್ಷಣವೇ ಒಪ್ಪಿದೆ. ಜನಪದ ಸೊಗಡಿನ ಕಥೆಯುಳ್ಳ ಈ ಸಿನಿಮಾದ ಶೂಟಿಂಗ್ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ನಡೆದಿದೆ. ಪುನೀತ್ ರಾಜ್‌ಕುಮಾರ್ ಅವರು ಈ ಸಿನಿಮಾದಲ್ಲಿ ಅಭಿನಯಿಸಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಈಗ ಅವರ ಕುಟುಂಬದ ರಾಘವೇಂದ್ರ ರಾಜ್‌ಕುಮಾರ್ ಅವರು ನಮ್ಮ ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ" ಎಂದು ಮಾತನಾಡಿದ್ದಾರೆ.
'ರಂಗ ಸಮುದ್ರ' ಚಿತ್ರದ ಬಗ್ಗೆ ನಿರ್ದೇಶಕ ರಾಜ್‌ಕುಮಾರ್ ಅಸ್ಕಿ ಹೆಚ್ಚಿನ ವಿಷಯ ಹಂಚಿಕೊಳ್ಳುತ್ತಾ, "ರಂಗ ಸಮುದ್ರ ಎಂಬುದು ಒಂದು ಊರಿನ ಹೆಸರು. ರಂಗಾಯಣ ರಘು ಅವರು ಈ ಚಿತ್ರದಲ್ಲಿ ನಟಿಸಿದರೆ, ಚೆನ್ನಾಗಿರುತ್ತದೆ ಎಂಬುದು ನಮ್ಮ ನಿರ್ಮಾಪಕರ ಅಭಿಪ್ರಾಯವಾಗಿತ್ತು. ಅಂತೆಯೇ, ಅವರ ಬಳಿ ಕೇಳಿದಾಗ ಅವರು ಒಪ್ಪಿಗೆ ನೀಡಿ ನಮ್ಮ ಸಿನಿಮಾದಲ್ಲಿ ನಟಿಸಿದರು. ಪುನೀತ್ ರಾಜ್‌ಕುಮಾರ್ ಅವರು ಈ ಚಿತ್ರವನ್ನು ಮೊದಲು ನೋಡಿದವರು. ಸಿನಿಮಾ ಮೆಚ್ಚಿಕೊಂಡ ಅವರು, 'ಇದರಲ್ಲಿ ಬರುವ ಜಿಲ್ಲಾಧಿಕಾರಿ ಪಾತ್ರವನ್ನು ನಾನು ಮಾಡುತ್ತೇನೆ' ಎಂದಿದ್ದರು. ಆದರೆ ವಿಧಿಯಾಟದಿಂದ ಅದು ಸಾಧ್ಯವಾಗಲಿಲ್ಲ" ಎಂದು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.