Parineeti Chopra: ರಾಘವ್ ಚಡ್ಡಾ ಅವರ ಪತ್ನಿ ಪರಿಣಿತಿ ಚೋಪ್ರಾ ಗರ್ಭಿಣಿಯೇ? ಪ್ರೆಗ್ನೆನ್ಸಿ ವದಂತಿಗೆ ಪ್ರತಿಕ್ರಿಯಿಸಿದ ನಟಿ!!
Bollywood Actress Parineeti Chopra pregnancy News: ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಶೀಘ್ರದಲ್ಲೇ ಪಂಜಾಬಿ ಗಾಯಕ ಮತ್ತು ಸೂಪರ್ ಸ್ಟಾರ್ ನಟ ದಿಲ್ಜಿತ್ ದೋಸಾಂಜ್ ಅವರೊಂದಿಗೆ `ಚಮ್ಕಿಲಾ` ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
Bollywood Actress Parineeti Chopra: ಇತ್ತೀಚಿನ ದಿನಗಳಲ್ಲಿ, ಪರಿಣಿತಿ ಚೋಪ್ರಾ ಅವರ ಚಿತ್ರಕ್ಕಿಂತ ಹೆಚ್ಚಾಗಿ ಅವರ ಗರ್ಭಧಾರಣೆಯ ಮುಖ್ಯಾಂಶಗಳಲ್ಲಿದ್ದಾರೆ. ಅದಕ್ಕೆ ಈಗ ನಟಿ ಸ್ವತಃ ಪೋಸ್ಟ್ ಮೂಲಕ ತೆರೆ ಎಳೆದಿದ್ದಾರೆ..
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ 'ಎಎಪಿ' ನಾಯಕ ರಾಘವ್ ಚಡ್ಡಾ ಅವರನ್ನು ಕಳೆದ ವರ್ಷ ಅಂದರೆ 24 ಸೆಪ್ಟೆಂಬರ್ 2023 ರಂದು ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹವಾದರು. ಮದುವೆಯಾದ ಕೆಲವೇ ದಿನಗಳಲ್ಲಿ ಪರಿಣಿತಿ ಲುಕ್ ತುಂಬಾ ಬದಲಾಗತೊಡಗಿತು. ನಟಿ ಇದ್ದಕ್ಕಿದ್ದಂತೆ ಸಡಿಲ ಬಟ್ಟೆಯಲ್ಲಿ ಕಾಣಿಸಿಕೊಳ್ಳತೊಡಗಿದರು..
ಪರಿಣಿತಿ ಅವರ ಈ ಲುಕ್ ನೋಡಿದ ಅವರ ಅಭಿಮಾನಿಗಳು ನಟಿ ತಾಯಿಯಾಗಲಿದ್ದಾರೆ ಎಂದು ಊಹಿಸಲು ಪ್ರಾರಂಭಿಸಿ ಶೀಘ್ರದಲ್ಲೇ ಅವರು ಎಲ್ಲರಿಗೂ ಒಳ್ಳೆಯ ಸುದ್ದಿಯನ್ನು ಹಂಚಿಕೊಳ್ಳುತ್ತಾರೆ ಎನ್ನುತ್ತಿದ್ದರು..
ಕಳೆದ ಹಲವು ದಿನಗಳಿಂದ ಹೊರಬರುತ್ತಿದ್ದ ಈ ವದಂತಿಗಳ ಬಗ್ಗೆ ಸ್ವತಃ ಪರಿಣಿತಿ ಚೋಪ್ರಾ ಮೌನ ಮುರಿದಿದ್ದಾರೆ. ಇದಕ್ಕಾಗಿ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದು.. ಅದರಲ್ಲಿ ತಾನು ಪ್ರಸ್ತುತ ಗರ್ಭಿಣಿಯಲ್ಲ.. ತಮ್ಮ ಮುಂಬರುವ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ ಎನ್ನುವುದರ ಸ್ಪಷ್ಟನೆ ನೀಡಿದ್ದಾರೆ..
ಇದನ್ನೂ ಓದಿ-ʼಆ ಹೀರೋ ಎಲ್ಲರ ಮುಂದೆ ಬಲವಂತವಾಗಿ ನನಗೆ ಕಿಸ್ ಮಾಡಿದʼ..ಸ್ಟಾರ್ ನಟಿ ಸೆನ್ಸೇಷನಲ್ ಕಾಮೆಂಟ್!!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.