Raghavendra Rajkumar on Appu : ದೊಡ್ಮನೆ ಕುಡಿ ಯುವ ರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ʼಯುವʼ ಟ್ರೇಲರ್‌ ಮೂಲಕ ಕ್ಯೂರಿಯಾಸಿಟಿ ಹುಟ್ಟಿಸಿದೆ. ಇತ್ತೀಚಿಗೆ ಈ ಸಿನಿಮಾದ ಪ್ರೀ-ರಿಲೀಸ್‌ ಈವೆಂಟ್‌ ಹೊಸಪೇಟೆಯಲ್ಲಿ ನಡೆಯಿತು. ಈ ವೇಳೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರನ್ನು ನೆನೆದು ರಾಘವೇಂದ್ರ ರಾಜ್‌ಕುಮಾರ್‌ ಅವರು ಭಾವುಕರಾದರು.


COMMERCIAL BREAK
SCROLL TO CONTINUE READING

ಹೌದು.. ದೊಡ್ಮನೆಯ ಕುಡಿ ಯುವ ರಾಜ್‌ಕುಮಾರ್ ಯುವ ಸಿನಿಮಾದ ಮೂಲಕ ತೆರೆ ಮೇಲೆ ಅಬ್ಬರಿಸಲು ರೆಡಿಯಾಗಿದ್ದಾರೆ. ಇದೇ ಮಾ.29ರಂದು ಯುವ ಗ್ರ್ಯಾಂಡ್ ಆಗಿ ತೆರೆಕಾಣುತ್ತಿದೆ. ಸಂತೋಷ್ ಆನಂದ್ ರಾಮ್ ನಿರ್ದೇಶನ ಈ ಸಿನಿಮಾದ ಮೂಲಕ ರಾಘಣ್ಣನ ಮಗ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಪಾದಾರ್ಪಣೆ ಮಾಡಲಿದ್ದಾರೆ.


ಇದನ್ನೂ ಓದಿ: ಖ್ಯಾತ ಬಾಲಿವುಡ್‌ ನಟಿ ಜೊತೆ MSD ಡೇಟಿಂಗ್..!? ಯಾರ್‌ ಗೊತ್ತಾ ಆ ಸುಂದರಿ


ಇನ್ನು 'ಯುವ' ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ ಹೊಸಪೇಟೆಯಲ್ಲಿ ನಡೆದಿತ್ತು, ಈ ವೇಳೆ ಮಾತನಾಡಿದ ರಾಘಣ್ಣ, ಹೊಸಪೇಟೆಗೆ ಬಂದರೆ ಅಪ್ಪು ಇಲ್ಲೇ ಇದ್ದಾನೆ ಅಂತ ಭಾವನೆ ಬರುತ್ತೆ. ಅಪ್ಪು ಹುಟ್ಟಿದ್ದು ಇಲ್ಲೇ ಅಂತ ಅನಿಸುತ್ತದೆ. ನನ್ನ ಮಗನ ವಿಚಾರದಲ್ಲಿ ಒಬ್ಬ ತಂದೆ ಮಾಡುವ ಕೆಲಸವನ್ನು ಅಪ್ಪು ಮಾಡಿ ಹೋಗಿದ್ದಾನೆ ಎಂದರು.


ಅಲ್ಲದೆ, ಯುವ ನನ್ನ ಮಗನಲ್ಲ. ಅಪ್ಪು ಮಗ. ಆತನಿಂದ ಅಪ್ಪು ಜಾಗ ತೆಗೆದುಕೊಳ್ಳಲು ಆಗಲ್ಲ, ಅದನ್ನು ಕಷ್ಟ ಪಟ್ಟು ಪಡೆದುಕೊಳ್ಳಬೇಕು. ಅಪ್ಪುನಂತೆ ನನ್ನ ಮಗ ತಗ್ಗಿ-ಬಗ್ಗಿ ನಡೆಯುವ ಗುಣವನ್ನು ಬೆಳೆಸಿಕೊಂಡು, ಅಭಿಮಾನಿಗಳನ್ನು ದೇವರಂತೆ ಕಾಣಬೇಕು ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.