ಬೆಂಗಳೂರು: ಕಳೆದ ೧೩ ವರ್ಷದಿಂದ ಸ್ಯಾಂಡಲ್ ವುಡ್ ನಲ್ಲಿ ಸಕ್ರಿಯರಾಗಿರುವ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಈಗ ಹಿಂದಿ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಶೂಟಿಂಗ್ ನ್ನು ಲಂಡನ್ ನಲ್ಲಿ ಮುಗಿಸಿಕೊಂಡು ಬಂದಿರುವ ರಾಗಿಣಿ ಖುಷಿ ಹಂಚಿಕೊಳ್ಳಲು ಇತ್ತೀಚೆಗೆ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮೈಸೂರು ಹುಡುಗ ಆದಿಲ್‌ ಕೈಹಿಡಿದ ರಾಖಿ ಸಾವಂತ್‌..! ಫೋಟೋಸ್‌ ವೈರಲ್‌


ಈ ಸಂದರ್ಭದಲ್ಲಿ ಮಾತನಾಡಿದ ರಾಗಿಣಿ 'ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಜರ್ನಿ ಆಗಿದೆ. ಕಳೆದ ವರ್ಷ (೨೦೨೨) ಹೆಚ್ಚಾಗಿ ಶೂಟಿಂಗ್ ನಲ್ಲಿ ಬ್ಯುಸಿ ಇದ್ದೇ. ಈಗ ಹಿಂದಿ ಸಿನಿಮಾವೊಂದರಲ್ಲಿ ನಟಿಸುತ್ತಿದ್ದು, ಮೊದಲ ಹಂತದ ಶೂಟಿಂಗ್ ಮುಗಿದಿದೆ. ಇದೊಂದು ಹಾರರ್, ಥ್ರಿಲ್ಲರ್ ಚಿತ್ರವಾಗಿದ್ದು, ಯಶಸ್ವಿ ಸಿನಿಮಾಗಳ ನಿರ್ದೇಶಕ ಆಯುರ್ ಶರ್ಮಾ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಹೆಸರು 'ವಾಕ್ರೋ ಹೌಸ್'. ಸಂಪೂರ್ಣ ಶೂಟಿಂಗ್ ಮುಗಿದ ಮೇಲೆ ತಂಡದೊಂದಿಗೆ ಮತ್ತೆ ಬರುತ್ತೇನೆ. ನಾನು ಇದರಲ್ಲಿ ಲಂಡನ್ ಬೇಸ್ ಬುಕ್ ರೈಟರ್ ಪಾತ್ರ ಮಾಡುತ್ತಿದ್ದು, ಮೊದಲ ಹಂತದ ಶೂಟಿಂಗ್ ಲಂಡನ್ ನಲ್ಲಿ ನಡೆದಿದೆ. ನನ್ನ ಜೊತೆ ಈ ಚಿತ್ರದಲ್ಲಿ ಪರಂವ್ಹಾ ಸೇರಿದಂತೆ ಸಾಕಷ್ಟು ಜನ ಒಳ್ಳೆ ಕಲಾವಿದರಿದ್ದಾರೆ. ನನ್ನ ಮೊದಲ ಹಿಂದಿ ಸಿನಿಮಾ ಹಾರರ್ ಆಗಿದ್ದು, ಒಳ್ಳೆ ಕಥೆ, ಪಾತ್ರ ಇದಿದ್ದರಿಂದ ಖುಷಿಯಾಗಿದ್ದೇನೆ. ಈ ಹಿಂದಿ ಸಿನಿಮಾ ಮಾಡತಾ ಇರೋದು ತಂದೆ-ತಾಯಿಗೆ ಖುಷಿ ಇದೆ. ಅವರ ಸಪೋರ್ಟ್ ನಿಂದಲೇ ನಾನು ಇಷ್ಟು ಬೆಳೆಯಲು ಆಗಿದ್ದು. ನಮ್ಮ ಕಷ್ಟ ಸುಖಗಳನ್ನು ತಂದೆ-ತಾಯಿಗಳಿಗೆ ಹೇಳಿಕೊಳ್ಳಬೇಕು ಆಗ ಅವರು ನಮಗೆ ಎಲ್ಲದಕ್ಕೂ ಸಪೋರ್ಟ್ ಮಾಡುತ್ತಾರೆ' ಎನ್ನುವರು.


ಇದನ್ನೂ ಓದಿ: Golden Globe Awards: RRRಗೆ ಪ್ರತಿಷ್ಠಿತ ಪ್ರಶಸ್ತಿಯ ಗರಿ; ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್!


ಮುಂದುವರೆದು ಮಾತನಾಡು ರಾಗಿಣಿ 'ಈ ಹಿಂದಿ ಸಿನಿಮಾ ಜೊತೆಗೆ ಮಲಯಾಳಂನಲ್ಲಿ ಒಂದು, ತಮಿಳು ಮೂರು ಹಾಗೂ ತೆಲುಗು ಒಂದು ಸಾಂಗ್ ಮಾಡಿದ್ದೇನೆ. ಸದ್ಯ ಕನ್ನಡದಲ್ಲಿ ೨ ಸಿನಿಮಾ ಮಾಡತಾ ಇದ್ದೇನೆ.  ಇಂದು ಎಲ್ಲಾ ಚಿತ್ರರಂಗದಲ್ಲಿ ಒಳ್ಳೆ ಸಿನಿಮಾಗಳು ಬರತಾ ಇದ್ದು ನಟನೆಗೆ ಒಳ್ಳೆ ಕ್ಯಾರೆಕ್ಟರ್ ಸಿಗತಾ ಇವೆ. ಒಟಿಟಿ ಬಂದು ನಮ್ಮಂತ ಕಲಾವಿದರಿಗೆ ದೊಡ್ಡ ವೇದಿಕೆ ಆಗಿದೆ. ಕನ್ನಡದ 'ವಿಕ್ರಾಂತ್ ರೋಣ', 'ಕಾಂತಾರ' ಸಿನಿಮಾಗಳು ಆಸ್ಕರ್ ಗೆ ಹೋಗಿರೋದು ಖುಷಿ ಕೊಟ್ಟಿತು.ಕಾಂತರ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು ಕನ್ನಡ ಇಂಡಸ್ಟ್ರೀಸ್ ಇಂದು ನ್ಯಾಷನಲ್ ಇಂಟರ್‌ನ್ಯಾಷನಲ್ ಹೋಗಿದೆ. ಇದು ನಮ್ಮ ಹೆಮ್ಮೆ ಎನ್ನಬಹುದು. ತುಂಬಾ ಕಡೆ ಕನ್ನಡ ಇಂಡಸ್ಟ್ರಿ ಬಗ್ಗೆ ಒಳ್ಳೆ ಮಾತುಗಳನ್ನು ಆಡುತ್ತಾರೆ. ಈ ವರ್ಷ ಮಾರ್ಚ್‌ ನಿಂದ ನನ್ನ ಸಿನಿಮಾಗಳು ಎಲ್ಲಾ ಭಾಷೆಯಿಂದ ಒಂದೊಂದು ರಿಲೀಸ್ ಆಗಬಹುದು. 'ನಾನೊಬ್ಬ ಭಾರತೀಯ' ಎಂಬ ತಮಿಳು ಚಿತ್ರದಲ್ಲಿ ಕಮಾಂಡೋ ಪಾತ್ರ ಮಾಡಲಿದ್ದು, ಇದು ನನಗೆ ವಿಷೇಶವಾದ ಸಿನಿಮಾ' ಎಂದು ಹೇಳಿದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.