Raj b Shetty : ಚಿತ್ರಮಂದಿರದ ಮುಂದೆ ಟೋಬಿ ಸಿನಿಮಾ ಚನ್ನಾಗಿಲ್ಲ ಅಂತ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಯುವತಿಯೊಬ್ಬಳಿಗೆ ಇಬ್ಬರು ವ್ಯಕ್ತಿಗಳು ಅವಾಜ್‌ ಹಾಕಿ, ಅಶ್ಲೀಲ ಪದಗಳಿಂದ ಬೈದ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 


COMMERCIAL BREAK
SCROLL TO CONTINUE READING

ವೈರಲ್‌ ವಿಡಿಯೋದಲ್ಲಿ ಚಿತ್ರಮಂದಿರದ ಮುಂದೆ ಟೋಬಿ ಚೆನ್ನಾಗಿಲ್ಲ ಅಂತ ಯುವತಿ ತನ್ನ ಅಭಿಪ್ರಾಯ ತಿಳಿಸಿದ್ದಾಳೆ. ಇದನ್ನು ಕಂಡು ಅಲ್ಲಿದ್ದ ಇಬ್ಬರು ವ್ಯಕ್ತಿಗಳು ಆಕೆಗೆ ಅವಾಜ್‌ ಹಾಕಿ, ಅಶ್ಲೀಲ ಪದಗಳಿಂದ ಬೈದಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆದ ಬೆನ್ನಲ್ಲೆ, ಸ್ವತಃ ರಾಜ್‌ ಬಿ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.


ಇದನ್ನೂ ಓದಿ: ನಟಿ ಸಿಮ್ರಾನ್ ಬೆಡ್‌ ರೂಮ್‌ನಲ್ಲಿ.... ದೃಶ್ಯ ವೈರಲ್..! ಖಾಸಗಿ ವಿಡಿಯೋ ನೋಡಿ ಬೆಚ್ಚಿಬಿದ್ದಿ ಫ್ಯಾನ್ಸ್‌


 


ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ಸಿನಿಮಾ ವಿಮರ್ಶೆಗೆ ಒಳಪಡುವ ಮಾಧ್ಯಮ. ದುಡ್ಡುಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕರು ತಮಗೆ ಅನಿಸಿದ್ದನ್ನು ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ. ಅದನ್ನು ಒಪ್ಪಲು ಅಥವಾ ಒಪ್ಪದಿರಲು ನಾವು ಸ್ವತಂತ್ರರು. ಆದರೆ ಯಾವುದೇ ರೀತಿಯಲ್ಲಿ ನಾವು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಜನರಿಗೆ ಕಿರುಕುಳ ನೀಡಲು ಪ್ರಯತ್ನಿಸಬಾರದು. ಈ ವಿಡಿಯೋದಲ್ಲಿ ಇರುವವರಿಗೂ ನಮ್ಮ ಚಿತ್ರತಂಡಕ್ಕು ಯಾವುದೆ ಸಂಬಂಧವೇ ಇಲ್ಲ, ಕಿರುಕುಳ ಎದುರಿಸಿದ ಮಹಿಳೆಗೆ ನಾನು ಕ್ಷಮೆ ಕೇಳುತ್ತೇನೆ, ಕ್ಷಮಿಸಿ.. ನಮ್ಮನ್ನು ಕ್ಷಮಿಸಿ ಅಂತ ಬರೆದುಕೊಂಡಿದ್ದಾರೆ.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - 
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.