Toby Trailer : ರಾಜ್ ಬಿ ಶೆಟ್ಟಿಯವರ ಬಹು ನಿರೀಕ್ಷಿತ ಚಿತ್ರ ʼಟೋಬಿʼ ಸಿನಿಮಾದ ಟ್ರೈಲರ್‌ ಇಂದು ಬಿಡುಗಡೆಯಾಗಿದೆ. ʼಗರುಡ ಗಮನ ವೃಷಭ ವಾಹನʼ ನಂತರ ರಾಜ್ ಬಿ ಶೆಟ್ಟಿಯವರ ಮತ್ತೊಮ್ಮೆ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟೋಬಿ ಇದೇ ಆಗಸ್ಟ್ 25ರಂದು ಚಿತ್ರಮಂದಿರಲ್ಲಿ ಅಬ್ಬರಿಲು ಸಿದ್ಧವಾಗಿದೆ. 


COMMERCIAL BREAK
SCROLL TO CONTINUE READING

ಹೌದು.. ಟೋಬಿ.. ಮಾರಿಗೆ ದಾರಿ ಅನ್ನೋ ಟ್ಯಾಗ್ ಲೈನ್ ಕೇಳಿದಾಗಲೇ ಜನ ಏನಪ್ಪಾ.. ಶೆಟ್ರು ರೌದ್ರಾವತಾರ ಇದು ಅಂತ ಅಚ್ಚರಿ ವ್ಯಕ್ತಪಡಿಸಿದ್ದರು. ಅಲ್ಲದೆ, ಗರುಡ ಗಮನ ವೃಷಭ ವಾಹನದಲ್ಲಿ ರಾಜ್‌ ಆರ್ಭಟ ನೋಡಿದ್ದ ಪ್ರೇಕ್ಷಕನಿಗೆ ಟೋಬಿಯಲ್ಲಿನ ಅವರ ಲುಕ್‌ ಕುತೂಹಲ ಮೂಡಿಸಿತ್ತು. ಇದೀಗ ಟ್ರೇಲರ್ ನಲ್ಲಿ ‘ಟೋಬಿ ಕಣ್ಣು ಬಿಟ್ಟಾಗಿದೆ’ ಮುಂದೈತೆ ಹಬ್ಬ ಎಂದು ಸಿನಿಪ್ರಿಯರ ಕುತೂಹಲ ಹೆಚ್ಚು ಮಇದನ್ನೂ ಓದಿ: ಹಿಸ್ಟರಿ ಕ್ರಿಯೇಟ್ ಮಾಡಲಿರುವ ‘ಟೋಬಿ’ ಸಿನಿಮಾದ ಟ್ರೈಲರ್ ಇಂದು ರಿಲೀಸ್!


ʼಹರಕೆಯ ಕುರಿಯೊಂದು ತಪ್ಪಿಸಿಕೊಂಡಿದೆ, ಯಾವುದೇ ಕಾರಣಕ್ಕೂ ಕುರಿ ಮತ್ತೆ ಊರಿಗೆ ಕಾಲಿಡಬಾರದು” ಎಂದು ಆರಂಭವಾಗುವ ಟ್ರೇಲರ್, ಟೋಬಿಯ ಜಗತ್ತಿನ ಹಲವು ಮಜಲುಗಳ ಪರಿಚಯ ಮಾಡುವ ಪ್ರಯತ್ನ ಮಾಡಿದೆ. ಈ ಹಿಂದೆ ಜೀ ಕನ್ನಡ ನ್ಯೂಸ್ ಜೊತೆ ರಾಜ್ ಬಿ ಶೆಟ್ಟಿ ಮಾತನಾಡಿದಾಗ ಟೋಬಿ ಸಿನಿಮಾಗಾಗಿ ಪಟ್ಟ ಕಷ್ಟ ಯಾವ ಸಿನಿಮಾಗೂ ಪಟ್ಟಿಲ್ಲ. ಆ ಲೆವೆಲ್ಲಿಗೆ ಈ ಸಿನಿಮಾಗಾಗಿ ಎಲ್ಲಾರು ಬೆವರು ಹರಿಸಿದ್ದೇವೆ ಅಂದಿದ್ರು.


ಅದು ಟ್ರೇಲರ್ ನಲ್ಲೇ ಗೊತ್ತಾಗುತ್ತಿದೆ. ಇದೀಗ ಎಲ್ಲೆಡೆ ಟೋಬಿಯ ಬೆಂಕಿ ಆವರಿಸಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಯಲ್ಲಿ ಟೋಬಿ ದೊಡ್ಡ ಮಟ್ಟದಲ್ಲಿ ಮ್ಯಾಜಿಕ್ ಮಾಡೋದು ಕನ್ಫರ್ಮ್ ಆಗಿದೆ. ಚಿತ್ರಕ್ಕೆ ಬಾಸಿಲ್ ನಿರ್ದೇಶನವಿದ್ದು, ಮಿಥುನ್ ಮುಕುಂದನ್ ಸಂಗೀತವಿದೆ. ರಾಜ್ ಬಿ ಶೆಟ್ಟಿಯವರು ಮುಗ್ಧ ಮತ್ತು ಭೀಕರ ಎರಡೂ ಶೇಡ್ ನಲ್ಲಿ ಮಿಂಚಿದ್ದಾರೆ. ಚೈತ್ರ ಆಚಾರ್ ಅವರು ಹಳ್ಳಿ ಹುಡುಗಿಯಾಗಿ ಅಭಿನಯಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.