ಈ ಹಿಂದೆ ಖ್ಯಾತ ನಟ ಡಾ.ವಿಷ್ಣುವರ್ಧನ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ಸಿಂಹಾದ್ರಿಯ ಸಿಂಹ' ಚಿತ್ರದ ಮುಂದುವರೆದ ಭಾಗವಾಗಿರುವ 'ರಾಜಾ ಸಿಂಹ' ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. 


COMMERCIAL BREAK
SCROLL TO CONTINUE READING

ನಟ ಅನಿರುಧ್ದ್, ನಟಿ ನಿಖಿತಾ,  ನಟಿ ಸಂಜನಾ ನಟಿಸಿರುವ ರಾಜಾ ಸಿಂಹ ಚಿತ್ರದಲ್ಲಿ ಅನಿರುಧ್ದ್ ಮೊದಲ ಬಾರಿಗೆ ತನ್ನ ಅತ್ತೆ ಭಾರತಿ ವಿಷ್ಣುವರ್ಧನ್ ಜೊತೆ ಅಭಿನಯಿಸಿದ್ದಾರೆ. ರೆಬಲ್ ಸ್ಟಾರ್ ಅಂಬರೀಶ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬುಲೆಟ್ ಪ್ರಕಾಶ್, ಶರತ್ ಲೋಹಿತಾಶ್ವ ಮೊದಲಾದವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


ರಾಜಾ ಸಿಂಹ ಚಿತ್ರ ಕಥೆಯು ನಮ್ಮ ಸಂಸ್ಕೃತಿ ಸಂಪ್ರದಾಯಗಳ ಮೇಲೆ ಹೆಚ್ಚು ಬೆಳಕು ಚೆಲ್ಲಲಿದೆ ಎಂದು ಚಿತ್ರತಂಡ ತಿಳಿಸಿದೆ.