ಬೆಂಗಳೂರು : ಆರ್‌ಆರ್‌ಆರ್‌ ಭಾರತದ ಸಿನಿ ಜಗತ್ತಿನಲ್ಲಿ ರಾರಾಜಾಜಿಸಿದ ಸಿನಿಮಾಗಳಲ್ಲಿ ಒಂದು. ಸ್ಟಾರ್‌ ಡೈರೆಕ್ಟರ್‌ ರಾಜಮೌಳಿ ನಿರ್ದೇಶನದ ಈ ಸಿನಿಮಾ ಅಭಿಮಾನಿಗಳ ಫೇವರಿಟ್. ರಾಮ್ ಚರಣ್‌ ಮತ್ತು ಜ್ಯೂ. ಎನ್‌ಟಿಆರ್ ಕಾಂಬಿನೇಷನ್‌ ಸಿನಿಮಾಗೆ ಬಲ ತುಂಬಿತ್ತು. ಡಿವಿವಿ ದಾನಯ್ಯ ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ನಿರ್ಮಿಸಿದ್ದರು. ಪ್ರಪಂಚದಾದ್ಯಂತ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿ ಆರ್‌ಆರ್‌ಆರ್‌ ಸೂಪರ್ ಹಿಟ್ ಆಗಿತ್ತು. ಸುಮಾರು 1150 ಕೋಟಿಗೂ ಹೆಚ್ಚು ಕಲೆಕ್ಷನ್ ಗಳಿಸಿತು. ಆದರೆ ಈ ಸಿನಿಮಾ ಆಸ್ಕರ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿದೆ.


COMMERCIAL BREAK
SCROLL TO CONTINUE READING

ಭಾರತದಿಂದ ಅಫೀಶಿಯಲ್ ಆಗಿ ಈ ಸಿನಿಮಾ ಆಸ್ಕರ್‌ಗೆ ಪ್ರವೇಶ ಮಾಡುತ್ತದೆ ಎಂದು ದೊಡ್ಡ ಸುದ್ದಿಯಾಗಿತ್ತು. ಆದರೆ ಗುಜರಾತಿ ಸಿನಿಮಾ ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗೆ ಆಯ್ಕೆಯಾಗಿ ಆರ್‌ಆರ್‌ಆರ್‌ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಛಲ ಬಿಡದ ಚಿತ್ರತಂಡ ಜನರಲ್ ಕೇಟಗರಿಯಲ್ಲಿ ಆಸ್ಕರ್ ನಾಮನಿರ್ದೇಶನಕ್ಕಾಗಿ ಅರ್ಜಿ ಸಲ್ಲಿಸಿದೆ. ಈ ಕುರಿತು ಅಧಿಕೃತವಾಗಿ ತಿಳಿಸಿದೆ.


ಇದನ್ನೂ ಓದಿ: ಅಮೆರಿಕಾದಲ್ಲಿ ಭಾರತೀಯ ಮೂಲದ ಕುಟುಂಬ ಕಿಡ್ನಾಪ್: ದಿನಗಳ ಬಳಿಕ ತೋಟದಲ್ಲಿ ಪತ್ತೆಯಾಯ್ತು ನಾಲ್ವರ ಶವ


ʼಸಿನಿಮಾದ ಮೇಲೆ ಪ್ರೀತಿ ತೊರಿದ ಅಭಿಮಾನಿಗಳಿಗೆ ಧನ್ಯವಾದಗಳು, ನಮ್ಮ ಸಿನಿಮಾವನ್ನು ಈಗ ಜನರಲ್ ಕೆಟಗರಿಯಲ್ಲಿ ಆಸ್ಕರ್‌ಗೆ ನಾಮಿನಟ್ ಮಾಡುತ್ತಿದ್ದೇವೆʼ ಎಂದು ‌ಆರ್‌ಆರ್‌ಆರ್‌ ಸಿನಿಮಾ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಘೋಷಿಸಿದೆ. ಅಲ್ಲದೆ, ಬೆಸ್ಟ್‌ ಆಕ್ಟರ್‌ ಕೆಟಗರಿಗೆ ರಾಮ್‌ ಚರಣ್‌ ಮತ್ತು ಜ್ಯೂ. ಎನ್‌ಟಿಆರ್‌, ಆಲಿಯಾ ಭಟ್‌ ಹೆಸರು ನೀಡಲಾಗಿದೆ. ಅಲ್ಲದೆ, ಬೆಸ್ಟ್‌  ಡೈರೆಕ್ಟರ್‌, ಸಿನಿಮಾ, ಸರ್ಪೋಟಿಂಗ್‌ ಆಕ್ಟರ್‌ ಕೆಟಗರಿಗೂ ಸಹ ಹೆಸರನ್ನು ಕಳುಹಿಸಿರುವುದಾಗಿ ಚಿತ್ರತಂಡ ತಿಳಿಸಿದೆ.


ಇನ್ನು ಬೃಹತ್ ಬಜೆಟ್‌ನ ಆರ್‌ಆರ್‌ಆರ್‌ ಸಿನಿಮಾಗೆ ಕೀರವಾಣಿ ಸಂಗೀತವಿತ್ತು. ರಾಮ್ ಚರಣ್‌ತೇಜ್‌ಗೆ ಜೋಡಿಯಲ್ಲಿ ಅಲಿಯಾ ಭಟ್, ಎನ್.ಟಿ.ಆರ್‌ಗೆ ಜೋಡಿಯಾಗಿ ಒಲಿವಿಯಾ ಮೋರಿಸ್ ನಟಿಸಿದ್ದರು. ವಿಶೇಷ ಪಾತ್ರದಲ್ಲಿ ಅಜಯ್ ದೇವಗನ್, ಶ್ರೇಯ, ಅಲಿಸನ್ ಡೂಡ್ಲಿ, ರಾಹುಲ್ ರಾಮಕೃಷ್ಣ ಅವರು ನಟಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.