Rajanikanth: ಬಡಜನರಿಗಾಗಿ ಆಸ್ಪತ್ರೆ ನಿರ್ಮಾಣ ಮಾಡಲು 12 ಎಕರೆ ಭೂಮಿ ಖರೀದಿಸಿದ ತಲೈವಾ!
Rajanikanth Constructs Hospital: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡಿನಲ್ಲಿ 12 ಎಕರೆಯ ಜಾಗವನ್ನು ಬಡವರಿಗಾಗಿ ಆಸ್ಪತ್ರೆ ನಿರ್ಮಾಣ ಮಾಡಲು ಖರೀದಿಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Rajanikanth Purchased 12 Acres Of Land: ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಜನರ ಸೇವೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಹೆಜ್ಜೆ ಹಾಕಲು ಮುಂದಾಗಿದ್ದರು. ಇದಕ್ಕಾಗಿಯೇ ಸಕಲ ಸಿದ್ದತೆಗಳನ್ನು ಕೂಡ ಮಾಡಿಕೊಂಡಿದ್ದವರು, ಆದರೆ ಅನಾರೋಗ್ಯದ ಕಾರಣದಿಂದಾಗ ರಾಜಕೀಯದ ಕಡೆ ಬರುವುದರಿಂದ ದೂರ ಉಳಿದಿದ್ದಾರೆ. ಆದರೇ ಈ ನಟ ಅಭಿಮಾನಿಗಳಿಗೆ ಮತ್ತು ಬಡಜನಗಳಿಗೆ ಕೈಲಾದ ಸೇವೆ ಮಾಡುವುದರಿಂದ ಮಾತ್ರ ಹಿಂದೆ ಸರಿದಿಲ್ಲ.
ನಟ ರಜನಿಕಾಂತ್ ಬಡವರ ಸಹಾಯಕ್ಕಾಗಿ 12 ಎಕರೆ ಭೂಮಿಯನ್ನು ಖರೀದಿಸಿದ್ದಾರೆ. ಇತ್ತೀಚೆಗೆ ಈ ನಟ ತಮಿಳುನಾಡಿನ ಚಂಗಲ್ಪಟ್ಟು ಜಿಲ್ಲೆಯ ತಿರುಪ್ಪುರೂರಿಗೆ ಭೇಟಿ ನೀಡಿದವರು, ಅಲ್ಲಿಯೇ 12 ಎಕರೆ ಜಾಗವನ್ನು ಖರೀದಿಸಿ, ತದನಂತರ ನೊಂದಾವಣಿ ಕಚೇರಿಗೆ ತೆರಳಿ, ತಾವು ಕೊಂಡುಕೊಂಡ ಭೂಮಿಯನ್ನು ನೊಂದಾವಣಿ ಮಾಡಿಸಿಕೊಂಡರು. ಈ ಸ್ಥಳವನ್ನು ಆಸ್ಪತ್ರೆಯನ್ನು ನಿರ್ಮಾಣಕ್ಕಾಗಿ ಎನ್ನಲಾಗುತ್ತಿದೆ.
ಇದನ್ನೂ ಓದಿ: Deepika Padukone : ಬಾಜಿರಾವ್ 'ಮಸ್ತಾನಿ' ಬೆಡಗಿಯ ಟ್ರೆಡಿಷನಲ್ ಫೋಟೋಸ್ ವೈರಲ್
ತಲೈವಾ ಚೆನ್ನೈ ಹಾಗೂ ತಿರುಪ್ಪುರೂರಿನ ನಡುವೆ 12 ಎಕರೆ ಜಾಗವನ್ನು ಖರೀದಿಸಿದ್ದು, ಅಲ್ಲಿಯೇ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ರಜನಿಕಾಂತ್ ಆಸ್ಪತ್ರೆ ಕಟ್ಟಿಸಲು ಪ್ಲಾನ್ ಕೂಡ ರೆಡಿಯಾಗಿದ್ದು, ಶೀಘ್ರದಲ್ಲೇ ಈ ನಟ ಭೂಮಿ ಪೂಜೆ ಕೂಡ ನೆರವೇರಿಸಲಿದ್ದಾರೆ. ನಟ ರಜನಿಕಾಂತ್ ಬಡವರಿಗಾಗಿಯೇ ಈ ಆಸ್ಪತ್ರೆಯನ್ನು ನಿರ್ಮಿಸುತ್ತಿದ್ದು, ಇದರಿಂದ ಅಲ್ಲಿಯ ಸುತ್ತ-ಮುತ್ತಲಿನ ಜನರಿಗೆ ಅನುಕೂಲವಾಗಲಿದೆ.
ತಮಿಳು ನಟ ರಜನಿಕಾಂತ್ ಜನರಿಗೆ ಉಚಿತವಾಗಿ ಚಿಕಿತ್ಸೆಯನ್ನು ಒದಗಿಸುವ ಗುರಿಯನ್ನು ಹೊಂದಿದ್ದು ಈ ಆಸ್ಪತ್ರೆಯನ್ನು ಕಟ್ಟಿಸುತ್ತಿದ್ದಾರೆ. ಸದ್ಯ ರಜನಿಕಾಂತ್ ಈ ವರ್ಷ ತೆರೆಕಂಡ ಲಾಲ್ ಸಲಾಂ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಈ ನಟ ಡಿಜೆ ಜ್ಞಾನವೇಲ್ ನಿರ್ದೇಶನ ವೆಟ್ಟೈಯನ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಇದರಲ್ಲಿ ರಜನಿಕಾಂತ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಬಣ್ಣಹಚ್ಚಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.