Rajanikanth: ಸೂಪರ್ ಸ್ಟಾರ್ ರಜನಿಕಾಂತ್ ತಮಿಳುನಾಡು ಮಾತ್ರವಲ್ಲ.. ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ನಟನ ಸಿನಿಮಾ ಬಂದರೆ ಫ್ಯಾನ್ಸ್‌ ಕುಣಿದು ಕುಪ್ಪಳಿಸುವುದರಲ್ಲಿ ಸಂದೇಹವಿಲ್ಲ.. 


COMMERCIAL BREAK
SCROLL TO CONTINUE READING

73ರ ಹರೆಯದಲ್ಲೂ ಈ ಸೂಪರ್ ಸ್ಟಾರ್ ಕುದುರೆ ಸವಾರರಿಗಿಂತ ಹೆಚ್ಚು ಆಕ್ಟೀವ್‌ ಆಗಿರುವ ನಟ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಾರೆ. ಈ ವಯಸ್ಸಿನಲ್ಲೂ ರಜನಿ ಅದೇ ಶೈಲಿಯಲ್ಲಿ ಫ್ಯಾನ್ಸ್‌ ಖುಷ್ ನೀಡುತ್ತಿದ್ದಾರೆ. ರಜನಿ ಬಾಕ್ಸ್ ಆಫೀಸ್ ಕಿಂಗ್ ಅಲ್ಲದೇ ದಾಖಲೆ ನಿರ್ಮಿಸುವವರೂ ಹೌದು. ಹಾಗಾಗಿ ಹೊಸ ರೆಕಾರ್ಡ್‌ಗಳನ್ನು ಸೃಷ್ಟಿಸುವುದು, ಈಗಿರುವ ದಾಖಲೆಗಳನ್ನು ಮುರಿಯುವುದು ನಟ ರಜನಿಕಾಂತ್ ಅವರಿಗೆ ಹೊಸದೇನಲ್ಲ. ಇದರೊಂದಿಗೆ ರಜನಿಕಾಂತ್ ಗೆ ಹೆಚ್ಚಿನ ಸಂಭಾವನೆ ನೀಡಲು ನಿರ್ಮಾಪಕರೇ ಮುಂದೆ ಬರುತ್ತಿದ್ದಾರೆ. ‌


ಇದನ್ನೂ ಓದಿ-Loksabha Election 2024: ಭಾರತದ ಯಾವ ರಾಜ್ಯವು ಹೆಚ್ಚು ಲೋಕಸಭಾ ಸ್ಥಾನಗಳನ್ನು ಹೊಂದಿದೆ?


ಪ್ರಸ್ತುತ, ನಟ ರಜನಿಕಾಂತ್ ಏಷ್ಯಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ, ಆದರೆ ಇದೀಗ ರಜನಿಕಾಂತ್ ಅವರಿಗೆ ಸಂಬಂಧಿಸಿದ ಆಘಾತಕಾರಿ ಸುದ್ದಿಯೊಂದು ಸದ್ಯ ವೈರಲ್ ಆಗುತ್ತಿದೆ. ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದರಂತೆ ಈ ಸೂಪರ್‌ ಸ್ಟಾರ್‌.. ಹೌದು ಇದನ್ನು ನಂಬಲಾಗದಿದ್ದರೂ ಇದು ಸತ್ಯ.. ಹೌದು ಬಸ್ ಕಂಡಕ್ಟರ್‌ ಕೆಲಸ ಮಾಡುತ್ತಾ ನಟನಾಗಿ ಹೊರಹೊಮ್ಮಿದ ರಜನಿಕಾಂತ್ ಒಮ್ಮೆ ತಮ್ಮ ಹೋರಾಟ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.


ಇದನ್ನೂ ಓದಿ-ಕೆಂಡ ಸಂಪಿಗೆ ಧಾರಾವಾಹಿಯಿಂದ  ನಟಿ ಕಾವ್ಯ ಶೈವ ಔಟ್..! ಕೊನೆಗೂ ಬಯಲಾಯ್ತು ನಾಯಕಿ ಬದಲಾವಣೆಯ ಅಸಲಿ ಸತ್ಯ


1992ರಲ್ಲಿ ತಮ್ಮ ಪತ್ನಿ ಲತಾ ರಜನಿಕಾಂತ್ ಅವರು ಸಿಂಗಾಪುರದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಜನಿಕಾಂತ್ ಅವರು ಕಂಡಕ್ಟರ್‌ನಿಂದ ಸೂಪರ್‌ಸ್ಟಾರ್‌ವರೆಗಿನ ತಮ್ಮ ಜೀವನದ ಕುರಿತು ಮಾತನಾಡುತ್ತಾ, ಕುಟುಂಬದ ಬಡತನದಿಂದಾಗಿ ತಾನು ಆಫೀಸ್‌ ಬಾಯ್‌, ಕೂಲಿ ಕೆಲಸ ಮಾಡಿದ್ದೇನೆ. ಬಡತನವನ್ನು ಅನುಭವಿಸಿದ್ದರಿಂದಲೇ ನನಗೆ ಶ್ರೀಮಂತರಾಗುವ ಆಸೆ ಇತ್ತು ಎಂದಿದ್ದಾರೆ.. 


ಈ ವೇಳೆ ಆಘಾತಕಾರಿ ವಿಚಾರವೊಂದನ್ನು ನಟ ಹಂಚಿಕೊಂಡಿದ್ದು, " ನನ್ನ ಜೀವನದ ಒಂದು ಹಂತದಲ್ಲಿ ಗಾಬರಿಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ.. ಆದರೆ ಆ ದಿನ ನನ್ನ ಕನಸಿನಲ್ಲಿ ಬಿಳಿ ಗಡ್ಡದಲ್ಲಿರುವ ಸಂತನೊಬ್ಬನು ನದಿಯ ದಡದಲ್ಲಿ ಕಾಣಿಸಿಕೊಂಡು ನನ್ನನ್ನು ತನ್ನೆಡೆಗೆ ಬರುವಂತೆ ಸನ್ನೆ ಮಾಡಿದರು. ಮುಳುಗಲು ಹೊರಟಿದ್ದ ನಾನು ಅವರೆಡೆಗೆ ಓಡಿ ಹೋದೆ.. ಆ ಕನಸಿನನ ಬಗ್ಗೆ ವಿಚಾರಿಸಿದಾಗ ನನಗೆ ಅರಿವಾಗಿದ್ದು ಅದು ರಾಘವೇಂದ್ರ ಎಂದು.. ಆ ನಂತರ ನಾನು ಪ್ರತಿ ಗುರುವಾರ ಉಪವಾಸ ಮಾಡಲು ಪ್ರಾರಂಭಿಸಿದೆ" ಎಂದು ನಟ ರಜನಿಕಾಂತ್‌ ಹೇಳಿಕೊಂಡಿದ್ದಾರೆ..  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.