Nandini Gupta : ರಾಜಸ್ಥಾನ್‌ ಹುಡುಗಿ ನಂದಿನಿ ಗುಪ್ತಾ ಫೆಮಿನಾ ಮಿಸ್ ಇಂಡಿಯಾ 2023 ವಿಜೇತರಾಗಿದ್ದಾರೆ. ಈ ಸ್ಪರ್ಧೆಯಲ್ಲಿ ದೆಹಲಿಯ ಶ್ರೇಯಾ ಪೂಂಜಾ ಮೊದಲ ರನ್ನರ್ ಅಪ್ ಮತ್ತು ಮಣಿಪುರದ ತೌನೊಜಮ್ ಸ್ಟ್ರೆಲಾ ಲುವಾಂಗ್ ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇನ್ನು ಕಳೆದ ವರ್ಷ ಮಿಸ್ ಇಂಡಿಯಾ ಕಿರೀಟವನ್ನು ಸಿನೆಶೆಟ್ಟಿ ಧರಿಸಿದ್ದರು. 


COMMERCIAL BREAK
SCROLL TO CONTINUE READING

ಈ ವರ್ಷ ತೆಲುಗು ರಾಜ್ಯಗಳ ಗೋಮತಿ (ಎಪಿ) ಮತ್ತು ಊರ್ಮಿಳಾ ಚೌಹಾಣ್ (ತೆಲಂಗಾಣ) ಸಹ ನಂದಿನಿಗೆ ಕಠಿಣ ಸ್ಪರ್ಧೆ ನೀಡಿದರು. ನಂದಿನಿ ಗುಪ್ತಾ ರಾಜಸ್ಥಾನದ ಕೋಟಾ ಮೂಲದ ಯುವತಿ. ಭಾನುವಾರ ರಾತ್ರಿ ಮಣಿಪುರದ ಇಂಫಾಲದಲ್ಲಿ ನಡೆದ ಇವೆಂಟ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಹಲವು ಸಿನಿ ಗಣ್ಯರು ಭಾಗವಹಿಸಿದ್ದರು. ಇತ್ತೀಚೆಗೆ ನಡೆದ 59ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ 29 ರಾಜ್ಯಗಳ ಸುಂದರಿಯರು ಸ್ಪರ್ಧಿಸಿದ್ದರು. ಸೌಂದರ್ಯವಷ್ಟೇ ಅಲ್ಲ ಬುದ್ದಿವಂತಿಕೆಯಿಂದಲೂ ಜಡ್ಜ್‌ಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 19ರ ವರ್ಷದ ನಂದಿನಿ ಗುಪ್ತಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಸಂಚಲನ ಮೂಡಿಸಿದ್ದಾರೆ.


ಇದನ್ನೂ ಓದಿ:ಒಮ್ಮೆ ಅಣ್ಣ - ತಂಗಿ, ಮತ್ತೊಮ್ಮೆ ಪ್ರೇಮಿಗಳು.. ಬಾಲಿವುಡ್‌ ಜೋಡಿಗಳ ನಡುವಿನ ಸಂಬಂಧ ಬದಲಾದಾಗ.!


ಬಾಲಿವುಡ್‌ ನಟ ಕಾರ್ತಿಕ್ ಆರ್ಯನ್ ಮತ್ತು ನಟಿ ಅನನ್ಯಾ ಪಾಂಡೆ ಈ ಇವೆಂಟ್‌ನ ಸೆಂಟರ್‌ ಅಕ್ರ್ಯಾಕ್ಷನ್‌ ಆಗಿದ್ದರು. ಮಾಜಿ ವಿಜೇತೆ ಸಿನೆ ಶೆಟ್ಟಿ, ರುಬಲ್ ಶೇಖಾವತ್, ಶಿನಾಥ ಚೌಹಾಣ್, ಮಾನಸ ವಾರಣಾಸಿ, ಮಣಿಕಾ ಶಿಯೋಕಂದ್, ಮಾನ್ಯ ಸಿಂಗ್, ಸುಮನ್ ರಾವ್ ಮತ್ತು ಶಿವಾನಿ ಜಾಧವ್ ಅವರು ಸಹ ಮೋಹಕ ಮೋಹೆ ಲೆಹೆಂಗಾಗಳನ್ನು ಧರಿಸಿ ಅದ್ಭುತ ಪ್ರದರ್ಶನ ನೀಡಿದರು. ಮನೀಶ್ ಪಾಲ್ ಮತ್ತು ಭೂಮಿ ಪೆಡ್ನೇಕರ್ ಸೇರಿದಂತೆ ಇತರ ತಂಡವು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.