Rajesh Khanna Love Story: 60ರ ದಶಕದಲ್ಲಿ ಹಿಂದಿ ಸಿನಿಮಾಗಳಲ್ಲಿ ಕ್ರೇಜ್‌ ಗಳಿಸಿದ್ದ ಹೀರೋ ರಾಜೇಶ್‌ ಖನ್ನಾಗೆ ಲೇಡಿ ಫ್ಯಾನ್ಸ್‌ಗಳ ದೊಡ್ಡ ಬಳಗವೇ ಇತ್ತು. ಶಾರುಖ್ ಖಾನ್ ಕಿಂಗ್ ಆಫ್ ರೋಮ್ಯಾನ್ಸ್ ಎಂಬ ಬಿರುದನ್ನು ಪಡೆಯುವ ಮೊದಲು, ರಾಜೇಶ್ ಅವರನ್ನು ಸಪ್ನೋ ಕಾ ರಾಜ್‌ಕುಮಾರ್ ಎಂದು ಕರೆಯಲಾಗುತ್ತಿತ್ತು. ಆದರೆ ಇಷ್ಟೆಲ್ಲಾ ಕ್ರೇಜ್ ಹೊಂದಿರುವ ಈ ಸೂಪರ್ ಸ್ಟಾರ್ ಕೆಲವು ವರ್ಷಗಳ ಕಾಲ ಓರ್‌ವ ನಟಿಯೊಂದಿಗೆ ಸಂಬಂಧಲ್ಲಿದ್ದರು ಎಂಬ ವದಂತಿ ಇತ್ತು. 


COMMERCIAL BREAK
SCROLL TO CONTINUE READING

1973 ರ ಮಾರ್ಚ್ ತಿಂಗಳಲ್ಲಿ ನಟ ರಾಜೇಶ್ ಖನ್ನಾ ಸ್ಟಾರ್ ನಾಯಕಿ ಡಿಂಪಲ್ ಕಪಾಡಿಯಾ ಅವರನ್ನು ವಿವಾಹವಾದರು. ರಾಜೇಶ್ ಖನ್ನಾ ಮತ್ತು ಡಿಂಪಲ್ ಕಪಾಡಿಯಾ ಒಂದಾಗುವ ಮೊದಲು ಅವರ ಜೀವನದಲ್ಲಿ ಇನ್ನೊಬ್ಬ ಹುಡುಗಿ ಇದ್ದಳು. ಅವರಿಬ್ಬರು ಬೇರ್ಪಟ್ಟ ನಂತರ, ರಾಜೇಶ್ ಮತ್ತು ಡಿಂಪಲ್ ಮದುವೆಯಾಗಲು ನಿರ್ಧರಿಸಿದರು.


ಇದನ್ನೂ ಓದಿ: ಸಮಂತಾ ಹಾದಿಯಲ್ಲಿ ಜಾನ್ವಿ ಕಪೂರ್... ತುಂಬಾ ದೊಡ್ಡ ರಿಸ್ಕ್ ತಗೊಂಡ್ರಿ ಅಂತೀದಾರೆ ಫ್ಯಾನ್ಸ್! 


ರಾಜೇಶ್ ಖನ್ನಾ ಅವರ ಮೊದಲ ಪ್ರೇಮಿ ಯಾರು?


ರಾಜೇಶ್ ಖನ್ನಾ ಅವರ ಮೊದಲ ಪ್ರೇಮಿ ಅಂಜು ಮಹೇಂದ್ರು.  ವರದಿಗಳ ಪ್ರಕಾರ, ರಾಜೇಶ್ ಮತ್ತು ಅಂಜು ಆಗ ಲಿವ್-ಇನ್ ಸಂಬಂಧದಲ್ಲಿದ್ದರು. ಅಂಜು ತನ್ನ 13 ನೇ ವಯಸ್ಸಿನಲ್ಲಿ ಮಾಡೆಲ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ಚಿತ್ರರಂಗ ಪ್ರವೇಶಿಸಿ ಯಶಸ್ವಿಯಾದರು. ಸಿನಿಮಾಗಳಲ್ಲಿ ನಟಿಸುವಾಗ ಅಂಜು ಮತ್ತು ರಾಜೇಶ್ ಪರಿಚಯವಾಯಿತು. ನಂತರ ಇಬ್ಬರೂ ಸಂಬಂಧ ಬೆಳೆಸಿದರು. ರಾಜೇಶ್ ಕೂಡ ಆಕೆಯ ವೃತ್ತಿಜೀವನವನ್ನು ಆರಂಭದಲ್ಲಿ ಬೆಂಬಲಿಸಿದರು. ಏಳು ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ ನಂತರ, ಅವರು ಬೇರ್ಪಟ್ಟರು. ಆದರೆ ಅಂಜು ರಾಜೇಶ್ ಜೊತೆ ಮದುವೆಯಾಗಲು ಒಪ್ಪಲಿಲ್ಲ. ಆಗ ಬ್ರೇಕಪ್ ಆಯಿತು.


ಡಿಂಪಲ್ ಕಪಾಡಿಯಾ ಜೊತೆ ಮದುವೆ


ಡಿಂಪಲ್ ಕಪಾಡಿಯಾ ಅವರನ್ನು ರಾಜೇಶ್ ಮದುವೆಯಾದ ನಂತರ 17 ವರ್ಷಗಳ ಕಾಲ ಅಂಜು ಜೊತೆ ಮಾತನಾಡಿರಲಿಲ್ಲ. ಆದರೆ 1988 ರಲ್ಲಿ ಅವರು ಮತ್ತೆ ಸ್ನೇಹಿತರಾದರು. ಅಂಜು ಕೂಡ ಡಿಂಪಲ್ ಜೊತೆ ಸ್ನೇಹದಿಂದ ಇದ್ದರು. ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಎಲ್ಲರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. 


ಇದನ್ನೂ ಓದಿ: ತಮನ್ನಾ ಭಾಟಿಯಾ ಜೊತೆ ವಸಿಷ್ಠ ಸಿಂಹ... ಯಾವುದು ಆ ಸಿನಿಮಾ? 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.