Jailer collection : ಜೈಲರ್ ಹೊಸ ದಾಖಲೆ, ಗಲ್ಲಾಪೆಟ್ಟಿಗೆಯಲ್ಲಿ ತಲೈವಾ ಕಮಾಲ್! ಒಟ್ಟು ಕಲೆಕ್ಷನ್ ಎಷ್ಟು ಕೋಟಿ?
Jailer box Office collection day 5: ರಜನಿಕಾಂತ್ ಅವರ ಇತ್ತೀಚಿನ ಸಿನಿಮಾ ಜೈಲರ್ ಹೊಸ ದಾಖಲೆ ಬರೆದಿದೆ. ಈಗ ಈ ವರ್ಷಕ್ಕೆ ಹೆಚ್ಚು ಗಳಿಕೆಯ ತಮಿಳು ಚಿತ್ರವಾಗಿದೆ. ಪೊನ್ನಿಯಿನ್ ಸೆಲ್ವನ್ II ಅನ್ನು ಬೀಟ್ ಮಾಡಿ ಮುಂದಕ್ಕೆ ಸಾಗಿದೆ.
Jailer box Office collection day 5: ರಜನಿಕಾಂತ್ ಅವರ ಇತ್ತೀಚಿನ ಸಿನಿಮಾ ಜೈಲರ್ ಹೊಸ ದಾಖಲೆ ಬರೆದಿದೆ. ಈಗ ಈ ವರ್ಷಕ್ಕೆ ಹೆಚ್ಚು ಗಳಿಕೆಯ ತಮಿಳು ಚಿತ್ರವಾಗಿದೆ. ಪೊನ್ನಿಯಿನ್ ಸೆಲ್ವನ್ II ಅನ್ನು ಬೀಟ್ ಮಾಡಿ ಮುಂದಕ್ಕೆ ಸಾಗಿದೆ. ಮಣಿರತ್ನಂ ಅವರ PS II ಸರಿಸುಮಾರು ₹345 ಕೋಟಿ ಗಳಿಸಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಜೈಲರ್‌ನಲ್ಲಿ ಮೋಹನ್‌ಲಾಲ್, ಜಾಕಿ ಶ್ರಾಫ್, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ವಿನಾಯಕನ್, ಶಿವರಾಜ್‌ಕುಮಾರ್ ಮತ್ತು ನಾಗೇಂದ್ರ ಬಾಬು ಮುಂತಾದವರು ನಟಿಸಿದ್ದಾರೆ.
ಟ್ರೇಡ್ ವಿಶ್ಲೇಷಕ ರಮೇಶ್ ಬಾಲಾ ಅಂಕಿಅಂಶಗಳನ್ನು ಟ್ವೀಟ್ ಮಾಡಿದ್ದಾರೆ. ಜೈಲರ್ ಚಿತ್ರವು ಈ ಹಿಂದೆ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ II ರ ದಾಖಲೆಯನ್ನು ದಾಟಿದೆ ಎಂದು ಹೇಳಿದ್ದಾರೆ. ಐಶ್ವರ್ಯ ರೈ ಬಚ್ಚನ್, ವಿಕ್ರಮ್, ತ್ರಿಶಾ ಅಭಿನಯದ ಪೊನ್ನಿಯಿನ್ ಸೆಲ್ವನ್ II ರ ಕಲೆಕ್ಷನ್‌ಗಳನ್ನು ದಾಟಿದ ಜೈಲರ್ 2023 ರ ಮೂರನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಯಿತು. ಶಾರುಖ್ ಖಾನ್ ಅವರ ಪಠಾಣ್ ಮತ್ತು ಪ್ರಭಾಸ್ ಅವರ ಆದಿಪುರುಷ ಈ ವರ್ಷದ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನದಲ್ಲಿದೆ.
ಇದನ್ನೂ ಓದಿ : ನ್ಯಾಷನಲ್ ಕ್ರಷ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದು ಇದೇ ಸಿನಿಮಾಗಳಿಂದ!
ಜೈಲರ್ ಭಾರತದಲ್ಲಿ ಎಲ್ಲಾ ಭಾಷೆಗಳಲ್ಲಿ ₹174.15 ಕೋಟಿ ಗಳಿಸಿದೆ. ಭಾರತದಲ್ಲಿ ಬಿಡುಗಡೆಯಾದ ಐದು ದಿನಗಳಲ್ಲಿ ತಮಿಳು ಆವೃತ್ತಿಯೇ ₹139.05 ಕೋಟಿ ಗಳಿಸಿದೆ ಎಂದು ವರದಿ ತಿಳಿಸಿದೆ. ತೆಲುಗು ಅವತರಣಿಕೆ ₹32.55 ಕೋಟಿ ಗಳಿಸಿದ್ದರೆ ಹಿಂದಿ ವರ್ಷನ್ ಒಟ್ಟು ₹1.25 ಕೋಟಿ ಕಲೆಕ್ಷನ್ ಮಾಡಿದೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ, ಚಿತ್ರವು ಗುರುವಾರ ಆಗಸ್ಟ್ 10 ರಂದು ಬಿಡುಗಡೆಯಾದಾಗ ₹48.35 ಕೋಟಿ (ಎಲ್ಲಾ ಭಾಷೆಗಳು) ಆರಂಭಿಕ ಕಲೆಕ್ಷನ್ ಮಾಡಿತು. ಚಿತ್ರವು ಎರಡನೇ ದಿನದಲ್ಲಿ ₹25.75 ಕೋಟಿ ಗಳಿಸಿದಾಗ ದೊಡ್ಡ ಕುಸಿತವನ್ನು ಕಂಡಿತು. ವಾರಾಂತ್ಯದಲ್ಲಿ ಸಂಗ್ರಹಗಳು ಹೆಚ್ಚಿವೆ. ಸೋಮವಾರದ ಅಂಕಿಅಂಶಗಳು ಗಮನಾರ್ಹ ಬೆಳವಣಿಗೆಯನ್ನು ತೋರಿಸಿದವು ಮತ್ತು ಭಾರತದಲ್ಲಿ ಐದನೇ ದಿನಕ್ಕೆ ₹23.55 ಕೋಟಿ ಗಳಿಸಿತು. ಆರನೇ ದಿನಕ್ಕೆ ಜೈಲರ್ ಸಿನಿಮಾ ವಿಶ್ವಾದ್ಯಂತ 400 ಕೋಟಿ ಗಳಿಕೆಯ ಗಡಿಯತ್ತ ದಾಪುಗಾಲಿಟ್ಟಿದೆ.
ಇದನ್ನೂ ಓದಿ: ಚಪ್ಪಲಿ ಧರಿಸಿ ರಾಷ್ಟ್ರಧ್ವಜ ಹಾರಿಸಿದ ಶಿಲ್ಪಾ ಶೆಟ್ಟಿ.. ನೆಟ್ಟಿಗರ ಆಕ್ರೋಶ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.