Latha Rajinikanth : ಭಾರತೀಯ ಸಿನಿ ರಂಗದ ಸೂಪರ್‌ ಸ್ಟಾರ್‌, ನಟ ರಜನಿಕಾಂತ್ ತಮ್ಮ ನಟನೆ ಮತ್ತು ವಿಶಿಷ್ಟ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ದೇಶಾದ್ಯಂತ ಅಪಾರ ಅಭಿಮಾನಿ ಬಳಗ ಹೊಂದಿರುವ ರಜಿನಿಗೆ ಅವರ ಫ್ಯಾನ್ಸ್‌ ದೇವಾಲಯಗಳನ್ನೇ ನಿರ್ಮಿಸಿದ್ದಾರೆ. ಅಷ್ಟರಮಟ್ಟಿಗೆ ತಲೈವಾ ಅಂದ್ರೆ ಅವರಿಗೆ ಇಷ್ಟ. ಇದೀಗ ರಜಿನಿ ಲವ್‌ ಮ್ಯಾಟರ್‌ವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಈ ಕುರಿತು ತಿಳಿಯೋಣ ಬನ್ನಿ. 


COMMERCIAL BREAK
SCROLL TO CONTINUE READING

ಕೇವಲ 15 ನಿಮಿಷಗಳ ಮೊದಲ ಭೇಟಿಯಲ್ಲಿ ಯುವತಿಯೊಬ್ಬಳಿಗೆ ರಜನಿ ಮದುವೆ ಪ್ರಸ್ತಾಪ ಮಾಡಿದ್ದರಂತೆ. ಹೌದು.. ನೀವು ಇದು ನಿಜ, ತಮ್ಮ ನಟನೆಯಿಂದ ಪ್ರಪಂಚದಾದ್ಯಂತ ಪ್ರಸಿದ್ಧರಾಗಿರುವ ರಜನಿಕಾಂತ್ ಅವರ ಲವ್ ಸ್ಟೋರಿ ಯಾವುದೇ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. 


ಇದನ್ನೂ ಓದಿ: ʼಸಲಾರ್‌ʼ ಎದುರು ಗೆಲ್ಲಲು ʼವೈಷ್ಣೋದೇವಿʼ ಮೊರೆ ಹೋದ್ರಾ ಕಿಂಗ್‌ ಖಾನ್‌ ಶಾರುಖ್‌..!


ರಜನಿಕಾಂತ್ 1975 ರಲ್ಲಿ ತಮ್ಮ 25ನೇ ವಯಸ್ಸಿನಲ್ಲಿ ಮೊದಲ ಬ್ರೇಕ್ ಪಡೆದರು. ‘ಅಪೂರ್ವ ರಾಗಂಗಳ್‌’ ಎಂಬ ತಮಿಳು ಸಿನಿಮಾದಲ್ಲಿ ಕೇವಲ 15 ನಿಮಿಷಗಳ ಪಾತ್ರ ಮಾಡಿದ್ದರು. ಇದರಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. 1981 ರಲ್ಲಿ ಅವರು ರಜನಿಕಾಂತ್ ಅವರನ್ನು 'ತಿಲ್ಲೂ ಮಲ್ಲು' ಚಿತ್ರದ ಶೂಟಿಂಗ್ ಸಮಯದಲ್ಲಿ ತಮ್ಮ ಕಾಲೇಜು ಮ್ಯಾಗಜೀನ್‌ಗೆ ಸಂದರ್ಶನಕ್ಕಾಗಿ ಲತಾ ರಜನಿಕಾಂತ್ ಅವರನ್ನು ಭೇಟಿಯಾದರು.


ತಲೈವಾ ಲತಾರನ್ನು ನೋಡಿದಾಗ, ಮೊದಲ ಭೇಟಿಯಲ್ಲಿ ಇಬ್ಬರೂ ತುಂಬಾ ಆಪ್ತರಂತೆ ಪರಸ್ಪರ ಮಾತನಾಡಿಕೊಂಡರು. ಇಂಟ್ರಸ್ಟಿಂಗ್‌ ವಿಚಾರ ಅಂದ್ರೆ, ಸಂದರ್ಶನದ ಕೊನೆಯಲ್ಲಿ ರಜನಿಕಾಂತ್ ಲತಾ ಅವರನ್ನು ಮದುವೆ ಆಗ್ತೀರಾ ಅಂಥ ಕೇಳಿದರಂತೆ. ಇದನ್ನು ಕೇಳಿ ಲತಾ ಆಘಾತಕ್ಕೊಳಗಾಗಿದ್ದರು. ಅಲ್ಲದೆ, ಪೋಷಕರೊಂದಿಗೆ ಮಾತನಾಡುವಂತೆ ಹೇಳಿದ್ದರಂತೆ. ನಂತರ ಮದುವೆ ಹೀಗೆ ಕಳೆದ 42 ವರ್ಷಗಳಿಂದ ಇಬ್ಬರೂ ಪರಸ್ಪರ ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.